ಗದಗ: ಜಾತಿಗಣತಿ (Caste Census) ಹಾಗೂ ಒಳ ಮೀಸಲಾತಿ ವಿಚಾರಕ್ಕೆ ನಮ್ಮದು ಯಾವುದೇ ವಿರೋಧವಿಲ್ಲ. ಆದರೆ ಜಾತಿಗಣತಿ ಪ್ರಾಮಾಣಿಕವಾಗಿ, ಪಾರದರ್ಶಕವಾಗಿರಬೇಕು ಎಂದು ಪಂಚಮಸಾಲಿ ಪೀಠದ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮಿಜಿ (Basava Jaya Mruthyunjaya Swamiji) ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿಗಣತಿ ಯಾವುದೇ ಸಮುದಾಯ ಟಾರ್ಗೆಟ್ ಮಾಡದ ರೀತಿಯಲ್ಲಿ ಇರಬಾರದು. ಎಲ್ಲಾ ಸಮುದಾಯದ ನಿಖರವಾದ ಮಾಹಿತಿ ಪಡೆದುಕೊಂಡಿರಬೇಕು ಎಂದರು. ಕಾನೂನಾತ್ಮಕವಾಗಿ ದತ್ತಾಂಶ ಕ್ರೂಢಿಕರಣ ಇರಬೇಕು. ಪ್ರಾಮಾಣಿಕ ಜಾತಿಗಣತಿ ಮಾಡಲು ನಮ್ಮದು ಸಂಪೂರ್ಣ ಸಹಕಾರವಿದೆ. ಅವೈಜ್ಞಾನಿಕವಾಗಿರುವ, ದುರುದ್ದೇಶ ಕೂಡಿರುವ, ಸಮುದಾಯಗಳಿಗೆ ನೋವುಂಟು ಮಾಡುವ ಯಾವುದೇ ಜಾತಿಗಣತಿಯನ್ನು ಪಂಚಮಸಾಲಿ ಒಪ್ಪೊದಿಲ್ಲ ಎಂದರು. ಇದನ್ನೂ ಓದಿ: ಉತ್ತರ ಲೆಬನಾನ್ ಮೇಲೆ ಇಸ್ರೇಲ್ ವಾಯುದಾಳಿ – ಹಮಾಸ್ ಟಾಪ್ ಕಮಾಂಡರ್ ಹತ್ಯೆ
Advertisement
Advertisement
ಇನ್ನು ಒಳ ಮೀಸಲಾತಿ ಎಸ್.ಸಿ, ಎಸ್.ಟಿ ಗೆ ಸಂಬಂಧಿಸಿದ್ದು. ಪಂಚಮಸಾಲಿ ನಾವು 3-ಬಿ ನಲ್ಲಿದ್ದೇವೆ. ನಮ್ಮ ಸಮುದಾಯಲ್ಲಿರುವ ಜನಸಂಖ್ಯೆಗೆಯೇ ಮೀಸಲಾತಿ ಸಾಕಾಗುತ್ತಿಲ್ಲ. ಉದ್ಯೋಗ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಮೆರಿಟ್ ಮೇಲೆ ಸಹ ನ್ಯಾಯ ಸಿಗುತ್ತಿಲ್ಲ. ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿ ಬೇಕು ಎಂದು ಕೇಳುತ್ತಿದ್ದೇವೆ. ಜಾತಿಗಣತಿ ವಿಚಾರದಲ್ಲಿ ಅನೇಕ ಕಡೆಗಳಲ್ಲಿ ಅಪಸ್ವರ ಎದ್ದಿದೆ. ಪ್ರಬಲ ಸಮುದಾಯಗಳ ಸಂಖ್ಯೆ ಕಡಿಮೆ ಇದೆ ಎಂಬ ಆರೋಪವಿದೆ. ಮತ್ತೊಮ್ಮೆ ಜಾತಿಗಣತಿ ಮಾಡಿ ಎಂದು ಅನೇಕ ಶಾಸಕರು ಸಿಎಂಗೆ ಮನವಿ ಕೊಟ್ಟಿದ್ದಾರೆ. ಮತ್ತೊಮ್ಮೆ ಪಾರದರ್ಶಕ ಜಾತಿಗಣತಿ ಮಾಡಿದರೆ ಒಳಿತು ಎಂಬ ಭಾವನೆ ನಮ್ಮದು ಎಂದು ನುಡಿದರು. ಇದನ್ನೂ ಓದಿ: ಉಪ್ಪು ತಿಂದವರು ನೀರು ಕುಡಿಯಲೇಬೇಕು: ಸಿಎಂಗೆ ಸಿ.ಟಿ.ರವಿ ಟಾಂಗ್
Advertisement
ಇನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಬರುವ ದಿನಾಂಕ 15 ರಂದು ಬೆಂಗಳೂರನಲ್ಲಿ (Bengaluru) ಪಂಚಮಸಾಲಿ ಸಮಾಜದ ಪ್ರಮುಖ ವಕೀಲರ ಸಭೆ ಕರೆದಿದ್ದಾರೆ. ಆದರೆ, ಸಭೆಯ ಸಮಯ ಹಾಗೂ ಸ್ಥಳ ನಿಗದಿಯಾಗಿಲ್ಲ. ಕೂಡಲೇ ಸಮಯ ಹಾಗೂ ಸ್ಥಳ ನಿಗದಿಗೊಳಿಸಬೇಕು. ಸಿಎಂ ಬಳಿ ತೆರಳುವ ನಿಯೋಗದಲ್ಲಿ ಯಾವ ಯಾವ ವಿಷಯಗಳನ್ನು ಚರ್ಚಿಸಬೇಕು ಎಂದು ಈಗಾಗಲೇ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಏನೇನಾಗುತ್ತಿದೆ ಎಂಬ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಳ್ಳುತ್ತೆ: ಡಿಕೆಶಿ
Advertisement
10 ಜನ ವಕೀಲರೊಂದಿಗೆ ಸಮುದಾಯದ ಪ್ರಮುಖರು, ಪಂಚಮಸಾಲಿ ಹೋರಾಟಗಾರರು ಸಿಎಂ ಅವರನ್ನು ಭೇಟಿಯಾಗಿ, ಸಭೆಯಲ್ಲಿ ಮೀಸಲಾತಿ ಹಾಗೂ ಅದರಿಂದ ಸಮಾಜಕ್ಕೆ ಉಂಟಾಗುವ ಅನುಕೂಲಗಳ ಕುರಿತು ಚರ್ಚಿಸುವುದರ ಜೊತೆಗೆ ಮನವೊಲಿಸಲಾಗುವುದು. ಒಂದು ವೇಳೆ ಬೇರೆ ಬೇರೆ ಕಾರಣ, ನೆಪವೊಡ್ಡಿ ಸಭೆಯನ್ನು ಮೊಟಕುಗೊಳಿಸಿದ್ದಲ್ಲಿ ವಕೀಲರೊಂದಿಗೆ, ಸಮುದಾಯದ ಮುಖಂಡರು, ಹೋರಾಟಗಾರರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು. ಇದನ್ನೂ ಓದಿ: ಯಾರ ಸರ್ಕಾರ ಇದ್ರೇನು, ದೇಶ ಸುಭದ್ರವಾಗಿರಬೇಕು: ಜಿ.ಪರಮೇಶ್ವರ್
ಸಿಎಂ ಅವರು ಪಂಚಮಸಾಲಿ (Panchamasali) ಸಮಾಜಕ್ಕೆ ಮೀಸಲಾತಿ ನೀಡುತ್ತಾರೆ ಎಂಬ ವಿಶ್ವಾಸವಿದೆ. ಇಲ್ಲವಾದಲ್ಲಿ 10 ಸಾವಿರಕ್ಕೂ ಹೆಚ್ಚು ಸಮಾಜದ ಮುಖಂಡರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಜಾತಿ ಜನಗಣತಿ ಮಾಡುವ ಬಗ್ಗೆ ಎಲ್ಲೆಡೆ ಅಸಮಾಧಾನವಿದ್ದು, ವೈಜ್ಞಾನಿಕವಾಗಿ ಸತ್ಯವನ್ನು ಆಧರಿಸಿ ಜಾತಿ ಜನಗಣತಿಯಾದರೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಇದನ್ನೂ ಓದಿ: ಕುರಿ ಕಾಯುತ್ತಿದ್ದವನು 2 ಬಾರಿ ಸಿಎಂ ಆದ್ನಲ್ಲಾ ಅಂತ ಬಿಜೆಪಿಗೆ ಹೊಟ್ಟೆ ಉರಿ: ಸಿಎಂ ಕೆಂಡಾಮಂಡಲ
ಈ ವೇಳೆ ಪಂಚಮಸಾಲಿ ಸಮಾಜದ ಮುಖಂಡರಾದ ಅಯ್ಯಪ್ಪ ಅಂಗಡಿ, ಬಸವರಾಜ್ ಗುಡ್ಡೆಪ್ಪನವರ್, ಸೇರಿದಂತೆ ಅನೇಕ ವಕೀಲರು, ಸಮಾಜದ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: Exit Poll Results: ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಕನಸು ಭಗ್ನ – ಕಾಂಗ್ರೆಸ್ ಅಧಿಕಾರಕ್ಕೆ