– ಅಲ್ಲಾ ನಮ್ಮ ದೇಶದವರಾ, ಇಲ್ಲಿ ಆಸ್ತಿ ಮಾಡೋಕೆ? ಎಂದು ಸಚಿವರ ಪ್ರಶ್ನೆ
ಹುಬ್ಬಳ್ಳಿ: ವಕ್ಫ್ ಬೋರ್ಡ್ ಆಸ್ತಿ ಅಲ್ಲಾನ ಆಸ್ತಿ ಅಂತ ಸಚಿವ ಜಮೀರ್ (Zameer Ahmed Khan) ಅಂತಾರೆ. ಏನು ಅಲ್ಲಾನಿಗೆ ಆಸ್ತಿ ಮಾಡುವುದೊಂದೇ ಕೆಲಸನಾ? ಇದು ಬೋಗಸ್ ಹೇಳಿಕೆ. ನಾವು ಅಲ್ಲಾನ ವಿರೋಧಿಗಳಲ್ಲಾ ಆದರೆ ಅಲ್ಲಾನ ಹೆಸರಿನ ಬದ್ಮಾಶ್‌ಗಿರಿ ಮಾಡೋರ ವಿರೋಧಿಗಳು. ಏನು ಅಲ್ಲಾ ನಮ್ಮ ದೇಶದವರಾ ಇಲ್ಲಿ ಆಸ್ತಿ ಮಾಡುವುದಕ್ಕೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದ ಕಡೆ ವಕ್ಫ್ ಬೋರ್ಡ್ ಇದ್ದ ಆಸ್ತಿಗಳನ್ನೆಲ್ಲಾ ತಮ್ಮ ಹೆಸರಿಗೆ ಮಾಡಿಕೊಳ್ಳುವ ಕ್ರಿಮಿನಲ್ ತರಾತುರಿಯಲ್ಲಿದ್ದಾರೆ. ಇದನ್ನು ಗಟ್ಟಿಯಾಗಿ ಬಿಜೆಪಿ ಪ್ರಶ್ನೆ ಮಾಡದಿದ್ದರೆ ಯಾವುದೇ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿರಿಲ್ಲ. ಉಪಚುನಾವಣೆ, ಮಹಾರಾಷ್ಟ್ರ ಚುನಾವಣೆ ಇರುವ ಹಿನ್ನೆಲೆ ನೋಟಿಸ್ ಕೊಡುವುದನ್ನು ನಿಲ್ಲಿಸುವ ಕ್ರಮ ತೆಗೆದುಕೊಂಡಿದ್ದಾರೆ. ವಕ್ಫ್ ಬೋರ್ಡ್ ನೋಟಿಸ್ ನೀಡುವುದಕ್ಕೆ ಇದೇನು ಅವರಪ್ಪನ ಮನೆ ಆಸ್ತಿನಾ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ದೀಪಾವಳಿ ಹಬ್ಬ – ಬೆಂಗಳೂರಲ್ಲಿ ಪಟಾಕಿ ಸಿಡಿಸಲು ಬಿಬಿಎಂಪಿ ಮಾರ್ಗಸೂಚಿ
ಕಾಂಗ್ರೆಸ್ (Congress) ಸರ್ಕಾರ ಯಾವ ಪ್ರಮಾಣದಲ್ಲಿ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಎಂದು ಇದರಿಂದ ಗೊತ್ತಾಗುತ್ತಿದೆ. ದೇವಸ್ಥಾನಕ್ಕೆ ನೋಟಿಸ್ ನೀಡಲು ಇವರು ಯಾರು? ಕೇವಲ ವಿಜಯಪುರ ಮಾತ್ರವಲ್ಲ ಅಳ್ನಾವರ ಪೊಲೀಸ್ ಠಾಣೆ ಮುಂದಿನ ಜಾಗ ವಕ್ಫ್ ಆಸ್ತಿ ಎನ್ನುತ್ತಿದ್ದಾರೆ. ಪೊಲೀಸರಿಗೆ ಕಾಂಪೌಂಡ್ ಕಟ್ಟಲು ಬಿಡುತ್ತಿಲ್ಲ. ವಿಜಾಪುರದಲ್ಲಿ ಇದು ದೊಡ್ಡ ಹಾವಳಿಯಾಗಿದೆ ಎಂದರು. ಇದನ್ನೂ ಓದಿ: 14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ: ಕೃಷ್ಣಭೈರೇಗೌಡ
ಉಪಿನಬೆಟ್ಟಗೇರಿ, ದ್ಯಾನೂರಿನಲ್ಲಿ ಸಹ ನೋಟಿಸ್ ನೀಡಿದ್ದಾರೆ. ಇಡೀ ಪ್ರಪಂಚದಲ್ಲಿ ಭಾರತ ಏಕೈಕ ಹಿಂದೂ ರಾಷ್ಟ್ರ. ವಕ್ಫ್ ಬೋರ್ಡ್ ಇಲ್ಲಿನ ಜನರ ಆಸ್ತಿ ಕಸಿದರೆ, ಹೀಗೆ ಇಲ್ಲಿನ ಆಸ್ತಿ ಕಬಳಿಸಿದರೆ ಜನರು ಹೇಗೆ ಜೀವನ ಮಾಡಬೇಕು? ಕಾಂಗ್ರೆಸ್ ಸರ್ಕಾರದಲ್ಲಿ ಸಾಬ್ರಿಗೆ ಏನಾದರೂ ಮಾಡಬೇಕೆನ್ನುವ ಮಾನಸಿಕತೆ ವಕ್ಫ್ ಬೋರ್ಡ್ ಇದೆ. ಇದರಿಂದ ಜನ ಆಘಾತಕ್ಕೊಳಗಾಗಿದ್ದಾರೆ. ಇದನ್ನು ರಾಜ್ಯ ಖಂಡಿಸಲ್ಲ ಅಂದರೆ ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇರೋದು ಪಕ್ಕಾ ಆಗುತ್ತದೆ. ಇದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಿದೆ. ನಮ್ಮ ನಿಯೋಗ ವಿಜಯಪುರಕ್ಕೆ ಭೇಟಿ ನೀಡಿ ವರದಿ ತಯಾರಿಸಿದ ಬಳಿಕ ಮುಂದಿನ ಹೋರಾಟ ರೂಪುರೇಷೆಗಳನ್ನು ಚರ್ಚಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: 1974 ಮುಂಚಿನ ದಾಖಲೆ ಇದ್ದರೆ ರೈತರು ಟಾಸ್ಕ್ ಫೋರ್ಸ್‌ಗೆ ತಂದುಕೊಡಿ – ಎಂ.ಬಿ ಪಾಟೀಲ್