ಬೆಂಗಳೂರು: ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದರೂ ನಮ್ಮನ್ನು ಭೇಟಿ ಮಾಡಲೇ ಇಲ್ಲ ಎಂದು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಬಿಎಸ್ ಯಡಿಯೂರಪ್ಪ, ಮಾಜಿ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ರಾಮಚಂದ್ರ ಗೌಡರ ಜೊತೆ ಧರಣಿ ಸ್ಥಳಕ್ಕೆ ಆಗಮಿಸಿದರು.
ಈ ವೇಳೆ, ಯಡಿಯೂರಪ್ಪರನ್ನು ರೈತ ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನೀವು ಕೊಟ್ಟ ಮಾತನ್ನು ಮೊದಲು ಉಳಿಸಿಕೊಳ್ಳಿ ಎಂದು ಆಗ್ರಹಿಸಿದರು. ಈ ವೇಳೆ ಯಡಿಯೂರಪ್ಪ ಹೋಗಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಿ ಅಂತಾ ಹೇಳುತ್ತಲೇ ಹೋರಾಟಗಾರರು ಗರಂ ಆದರು.
Advertisement
Advertisement
ಮುಂದೆ ಬಿಎಸ್‍ವೈಗೆ ಮಾತನಾಡಲು ಅವಕಾಶ ನೀಡದೇ ಧಿಕ್ಕಾರ ಕೂಗಿದರು. ಬಸವರಾಜ್ ಬೊಮ್ಮಾಯಿ ಕೈಮುಗಿದು ಬೇಡಿದರೂ ಹೋರಾಟಗಾರರು ಕೇಳಲಿಲ್ಲ. ಹಸಿರು ಶಾಲೂ ಬೀಸಿದರು. ಈ ವೇಳೆ ಕೂಗಾಟ, ತಳ್ಳಾಟ ನಡೆಯಿತು. ಬಿಎಸ್‍ವೈಗೆ ಘೇರಾವ್ ಹಾಕುವ ಯತ್ನವೂ ನಡೆಯಿತು. ಕೊನೆಗೆ ಅಲ್ಲಿಂದ ಯಡಿಯೂರಪ್ಪ ನಿರ್ಗಮಿಸಿದರು. ಈ ವೇಳೆ ಫಕೀರವ್ವ ಎಂಬ ಮಹಿಳೆ ಅಸ್ವಸ್ಥರಾದರು.
Advertisement
ಈ ನಡುವೆ ಬುಧವಾರ ಮಹದಾಯಿ ಹೋರಾಟಗಾರರು ರಾಜಭವನ, ಸಿಎಂ ಸಿದ್ದರಾಮಯ್ಯ ನಿವಾಸ, ಎಚ್ ದೇವೇಗೌಡ ನಿವಾಸಕ್ಕೆ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: Exclusive ಮಹದಾಯಿ ಪ್ರತಿಭಟನೆ, ಅನಂತ್ ಕುಮಾರ್ ಭಾಷಣ: ಬಿಜೆಪಿ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ
Advertisement
ರೈತರು ಮತ್ತು ಬಿಎಸ್‍ವೈ ನಡುವೆ ಮಾತುಕತೆ ಹೀಗೆ ನಡೆಯಿತು:
ಬಿಎಸ್‍ವೈ – ಸಿಎಂ ಮನೆ ಮುಂದೆಯೇ ಹೋಗಿ ಧರಣಿ ನಡೆಸಿ.. ಇಲ್ಲಿ ಯಾಕೆ ಬಂದು ಧರಣಿ ಮಾಡುತ್ತೀರಾ..?
ರೈತರು – ಅದು ನಮ್ಮ ಕೈಯಾಗ ಸಾಧ್ಯ ಇಲ್ರಿ.. ನೀವು ಕೊಟ್ಟ ಭರವಸೆಯನ್ನ ಮೊದಲು ಈಡೇರಿಸ್ರಿ ಸಾಯೇಬ್ರಾ.
ಬಿಎಸ್‍ವೈ – ಗೋವಾ ಸಿಎಂ ಬರೆದಿರುವ ಪತ್ರವನ್ನ ನಿಮಗೆ ಕೊಡುತ್ತೇನೆ. ನನ್ನ ಕೈಯಲ್ಲಿ ಆಗುವುದು ಇಷ್ಟೇನೆ.. ನೀವು ಅದನ್ನ ತೆಗೆದುಕೊಂಡು ಹೋಗಿ ನ್ಯಾಯಾಧೀಕರಣಕ್ಕೆ ಕೊಡಿ
ರೈತರು – ಅದೆಲ್ಲಾ ಆಗಲ್ರೀ. ಶೆಟ್ರು ಮನೆ ಮುಂದ ಹೋದಾಗ ನಿವ್ಯಾಕ ಬಂದಿದ್ದು. ಅವತ್ತು ಸಮಾವೇಶದಾಗ ಓದಿದ ಪತ್ರ ನಮಗೆ ಕೊಡಿ. ಗೋವಾ ಸಿಎಂ ರೈಟಿಂಗ್‍ನಲ್ಲಿ ಕೊಟ್ಟ ಕಾಪಿಯನ್ನ ನಮಗೆ ಕೊಡಿ
ಬಸವರಾಜ ಬೊಮ್ಮಯಿ – ನಿಮ್ಮ ಕೈ ಮುಗೀತಿನ್ರಪ್ಪ, ಸುಮ್ನೆ ರಾಜಕೀಯ ಮಾಡ್ತಾಯಿರೋದು ಕಾಂಗ್ರೆಸ್ ಮಂದಿ. ನಮ್ಮ ಮಾತು ಕೇಳಿ ಪ್ರತಿಭಟನೆ ವಾಪಸ್ಸು ತಕ್ಕೊಳಿ. ಈ ಹಿಂದಾ ಕೂಡ ಕೃಷ್ಣಾ ಗಲಾಟೆಯಾದಾಗ ರೈತರೇ ನ್ಯಾಯಾಧೀಕರಣದ ಮುಂದೆ ಹೋಗಿದ್ರು. ಆಗ ನ್ಯಾಯ ನಮಗೆ ಸಿಕ್ಕಿತ್ತು. ಈಗ್ಲೂ ಹಂಗೆ ಮಾಡುದ್ರಾತು. ಇದನ್ನೂ ಓದಿ: ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್: ಎಲ್ಲಿ ಬಂದ್? ಏನ್ ಇರುತ್ತೆ? ಏನ್ ಇರಲ್ಲ?
ರೈತರು – ರೀ ಸಾಯೇಬ್ರಾ. ನಿಮ್ಮ ಸಾಧನೆ ನಾವು ನೋಡಿದ್ದೀವಿ ನೀವು ತೆಪ್ಪಗಿರಿ. ನಾವು ಬಂದಿರೋದಾ ಯಡಿಯ್ಯೂರಪ್ಪ ಜೊತೆ ಮಾತನಾಡ್ಲಿಕ್ಕಾ. ನಿಮ್ಮ ಜೊತೆ ಅಲ್ಲ, ಸುಮ್ಮನ ಹೊರಡಿ ಇಲ್ಲಿಂದ
ಬಿಎಸ್‍ವೈ – ಆಯ್ತು ಬಿಡ್ರಪ್ಪ ನನ್ನ ಕೈಯಿಂದ ಆಗೋದಿಲ್ಲ ನಿಮಗೆ ಹೇಳೋದಕ್ಕೆ. ಬರ್ತೀನಿ ಬಿಡ್ರಪ್ಪ. ಇದನ್ನೂ ಓದಿ: ಮಹದಾಯಿ ಬಂದ್- ಬುಧವಾರದ ವಿಟಿಯು ಪರೀಕ್ಷೆಗಳು ಮುಂದೂಡಿಕೆ