ಬೆಳಗಾವಿ: ಶಿವಮೊಗ್ಗ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಖಂಡಿಸಿ ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಗೋಕಾಕ್ ತಾಲೂಕು ಅಧ್ಯಕ್ಷ ರವಿ ಪೂಜೇರಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಗೋಕಾಕ್ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ಹರ್ಷ ಹತ್ಯೆಯ ಆರೋಪಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಮಾತನಾಡಿದ ಗೋಕಾಕ್ ತಾಲೂಕು ಅಧ್ಯಕ್ಷ ರವಿ ಪೂಜೇರಿ, ಕಾಂಗ್ರೆಸ್ ಸರ್ಕಾರದಲ್ಲೂ ಹಿಂದೂಗಳ ಹತ್ಯೆ, ಬಿಜೆಪಿ ಸರ್ಕಾರದಲ್ಲೂ ಹಿಂದೂಗಳ ಹತ್ಯೆಯಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು
ನಾವು ಹಿಂದೂಗಳು ಪರ ಅಷ್ಟೇ. ಯಾವ ಸರ್ಕಾರಕ್ಕೂ ಸಾಥ್ ನೀಡಲ್ಲ. ಈ ಪ್ರಕರಣವನ್ನು ಸರ್ಕಾರ ಕಡೆಗಣಿಸಬಾರದು. ಅವರೇನಾದರೂ ಬೇಲ್ ಮೇಲೆ ಆಚೆ ಬಂದರೆ, ಉತ್ತರ ನೀಡಲು ನಮಗೂ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್, ಸಂಬಾಜಿ ಪಾಟೀಲ್, ಸಂಗೊಳ್ಳಿ ರಾಯಣ್ಣ ರಕ್ತದಲ್ಲಿ ಹುಟ್ಟಿದ್ದೇವೆ. ನಾವು ಗಾಂಧಿವಾದಿಗಳಲ್ಲ, ಗೋಡ್ಸೆವಾದಿಗಳು. ಇನ್ಮುಂದೆ ವಿಚಾರ ಮಾಡಿ ಹೆಜ್ಜೆ ಇಡಿ. ನಮಗೂ ಉತ್ತರ ಕೊಡಲು ಬರುತ್ತೆ. ಭಯಾನಕ ಉತ್ತರ ಕೊಡುತ್ತೇವೆ. ನೀವು ಸುಮ್ಮನಿದ್ದರೆ ನಾವು ಸುಮ್ಮನಿರುತ್ತೇವೆ. ಇದೆ ಕಡೆಯಾಗಬೇಕು. ನಮ್ಮ ಹರ್ಷ ಹತ್ಯೆ ಪ್ರಕರಣಕ್ಕೆ ಎಲ್ಲವೂ ಕೊನೆಯಾಗಬೇಕು. ಇನ್ಮುಂದೆ ಹಿಂದೂ ಕಾರ್ಯಕರ್ತರ ತಂಟೆಗೆ ಬಂದರೆ, ಇಡೀ ಕರ್ನಾಟಕದ ಹಿಂದೂಗಳು ಸೇರಿ 2002ರ ಗೋದ್ರಾ ಹತ್ಯಾಕಾಂಡ ರೀತಿ ಕರ್ನಾಟಕದಲ್ಲೂ ಆಗಬಹುದು ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ನೀಡಿ-ಸರ್ಕಾರಕ್ಕೆ ಶ್ರೀರಾಮ ಸೇನೆ ಒತ್ತಾಯ