ಬೆಂಗಳೂರು: ನಾವೇನು ಒತ್ತಡದ ಮೇಲೆ ಯಾರನ್ನೂ ಸೆಳೆಯುತ್ತಿಲ್ಲ. ಆಪರೇಷನ್ ಹಸ್ತ (Operation Hasta) ಮಾಡುತ್ತಿಲ್ಲ. ಆದರೂ ಕೆಲವರು ನಮ್ಮ ಪಕ್ಷಕ್ಕೆ ಬರಲು ಆಸಕ್ತಿ ಹೊಂದಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಐದು ವರ್ಷ ಸ್ಥಿರ ಸರ್ಕಾರ ನೀಡಲಿದೆ ಎಂಬ ನಂಬಿಕೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಯಾರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕೆಂಬುದನ್ನ ಸಿಎಂ, ಡಿಸಿಎಂ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ ಪ್ರಕರಣ – ಜಮೀರ್ ಅಹ್ಮದ್ ವಿಚಾರಣೆ ಮುಂದೂಡಿಕೆ
Advertisement
Advertisement
ರಾಜಕೀಯ, ವೈಯಕ್ತಿಕ ಕಾರಣಗಳಿಂದ ಕಾಂಗ್ರೆಸ್ ಕಡೆ ಬರುವ ಪರಿಸ್ಥಿತಿ ಇರಬಹುದು. ಬಹಳಷ್ಟು ಜನರಿಗೆ ನಮ್ಮ ಜೊತೆಗೆ ಸೇರಿಕೊಳ್ಳಬೇಕು ಎಂಬ ಮನಸ್ಸಿದೆ. ಶಾಸಕರೇ ಇರಬಹುದು ಅಥವಾ ಮುಖಂಡರು ಇರಬಹುದು. ಆದರೆ ಹೇಗಾಗುತ್ತೆ, ಏನಾಗುತ್ತೆ ಎಂಬ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಮಾತನಾಡಿದ್ದಾರೆ.
Advertisement
Advertisement
ಎರಡೂವರೆ ವರ್ಷದ ಬಳಿಕ ಹಿರಿಯರು ಸಚಿವ ಸ್ಥಾನ ಬಿಟ್ಟು ಕೊಡಬೇಕೆಂಬ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಗುಂಡೂರಾವ್, ಸಚಿವ ಸಂಪುಟ ಪುನಾರಚನೆ ಎಂಬುದು ಸಿಎಂ ಅಧಿಕಾರ. ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ಸಿಎಂ ನಿರ್ಧಾರ ಮಾಡುತ್ತಾರೆ. ಮುನಿಯಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯ. ಬೇರೆಯವರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಿಂದ್ಲೇ 50 ಜನ ಶಾಸಕರು ಬಿಜೆಪಿಗೆ ಬರ್ತಾರೆ: ಮಾಜಿ ಶಾಸಕ ಅಮೃತ ದೇಸಾಯಿ
Web Stories