ನವದೆಹಲಿ: ದೇಶದ ಮುಸ್ಲಿಮರ ಕುರಿತಾಗಿ ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ನೀಡಿರುವ ಹೇಳಿಕೆ ಈಗ ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಭಾರತದಲ್ಲಿರುವ ಮುಸ್ಲಿಮರಿಗೆ (Indian Muslims) ಯಾವುದೇ ಭಯ ಬೇಕಿಲ್ಲ. ಆದರೆ ಅಧಿಪತ್ಯ ಧೋರಣೆಯನ್ನು ಮುಸ್ಲಿಮರು ಬಿಡಬೇಕು ಎಂದು ಆರ್‍ಎಸ್‍ಎಸ್ ಮುಖವಾಣಿ ಆರ್ಗನೈಸರ್ ಮತ್ತು ಪಾಂಚಜನ್ಯ ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲಿ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.
Advertisement
Why this “chori” for China & “seenazori” for fellow citizens? If we’re indeed at war, has Swayamsevak sarkar been sleeping for 8+ years?
RSS’s ideology is a threat to India’s future. The sooner Indians recognise the real “internal enemies”, the better it will be.
— Asaduddin Owaisi (@asadowaisi) January 11, 2023
Advertisement
ಈ ಹಿಂದೆ ಇಂಡಿಯಾ, ಹಿಂದುತ್ವವನ್ನು ಮರೆತ ಸಂದರ್ಭಗಳಲ್ಲೆಲ್ಲಾ ದೇಶ ವಿಭಜನೆಗೊಂಡಿದೆ. ಹಿಂದೂಸ್ಥಾನ (Hindustan) ಹಿಂದೂಸ್ಥಾನವಾಗಿಯೇ ಮುಂದುವರೆಯಬೇಕು ಎಂದಿದ್ದಾರೆ. ದೇಶ ಹಿತ, ಹಿಂದೂಗಳ ಒಳಿತಿಗಾಗಿ ರಾಜಕೀಯದಲ್ಲಿ ನಮ್ಮ ಹಸ್ತಕ್ಷೇಪ ಇರುತ್ತದೆ. ಸ್ವಯಂ ಸೇವಕರ ಬಳಿ ಈಗ ಅಧಿಕಾರ ಸಿಕ್ಕಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಇದನ್ನೂ ಓದಿ: ನನ್ನ ರಕ್ತನೇ ಕಾಂಗ್ರೆಸ್, ನಾನು ‘ಕೈ’ ಪಕ್ಷ ಸೇರುತ್ತೇನೆ: ಹೆಚ್. ವಿಶ್ವನಾಥ್
Advertisement
There are enough Hindus who feel the Boisterous Rhetoric of Supremacy of RSS, leave alone how every minority feels.
You can't say Vasudhaiva Kutumbakam for the world if you're busy building divides in your own country
— Asaduddin Owaisi (@asadowaisi) January 11, 2023
Advertisement
ಮೋಹನ್ ಭಾಗವತ್ ಹೇಳಿಕೆಗೆ ಅಸಾದುದ್ದೀನ್ ಓವೈಸಿ (Asaduddin Owaisi) ಗರಂ ಆಗಿದ್ದಾರೆ. ಮುಸ್ಲಿಮರು ದೇಶ ತೊರೆಯಿರಿ ಅಥ್ವಾ ಅವರ ನಂಬಿಕೆ ಅನುಸರಿಸಿ ಎನ್ನಲು ಮೋಹನ್ ಭಾಗವತ್ ಯಾರು? ನಮ್ಮ ಪೌರತ್ವದ ಮೇಲೆ ಷರತ್ತುಗಳನ್ನು ವಿಧಿಸಲು ಅವರಿಗೆಷ್ಟು ಧೈರ್ಯ ಎಂದು ಪ್ರಶ್ನೆ ಮಾಡಿದ್ದಾರೆ. ನಾವು ಎಂದೆಂದಿಗೂ ಭಾರತೀಯರೇ ಎಂದು ಓವೈಸಿ ಸ್ಪಷ್ಟಪಡಿಸಿದ್ದಾರೆ.
Bhagwat :
“ Hindusthan should should remain Hindusthan “
Agree
But:
Insaan should remain Insaan
— Kapil Sibal (@KapilSibal) January 11, 2023
ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ (Kapil Sibal) ಟ್ವೀಟ್ ಮಾಡಿ, ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ಆದರೆ ಅದಕ್ಕೂ ಮುನ್ನ ಮನುಷ್ಯ ಮನುಷ್ಯನಾಗಿಯೇ ಇರಬೇಕು ಎಂದು ಟಾಂಗ್ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k