ಬೆಂಗಳೂರು: ನಾವು ಒಡಿಶಾ ಸರ್ಕಾರ (Odisha Government) ದ ಜೊತೆ ಸಂಪರ್ಕದಲ್ಲಿ ಇದ್ದೇವೆ. ಕರ್ನಾಟಕದ ಬಗ್ಗೆ ಮಾಹಿತಿ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಸಚಿವ ಸಂತೋಷ್ ಲಾಡ್ (Santhosh Lad) ಅವರನ್ನ ಕಳಿಸಿದ್ದೇನೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಾವತ್ತೂ ಆಗಿರಲಿಲ್ಲ. ದೊಡ್ಡ ಪ್ರಮಾಣದ ಅಪಘಾತ. ಕರ್ನಾಟಕದವರ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಸಂತೋಷ್ ಲಾಡ್ 3 ಗಂಟೆ ಫ್ಲೈಟ್‍ಗೆ ಹೋಗಿದ್ದಾರೆ ಎಂದರು.
Advertisement
ಕೇಂದ್ರ ರೈಲ್ವೆ ಇಲಾಖೆ ಮತ್ತು ಒಡಿಶಾ ಸರ್ಕಾರದ ಜೊತೆ ಸಂಪರ್ಕದಲ್ಲಿ ಇದ್ದೇವೆ. ಪರಿಶೀಲನೆ ಮಾಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ
Advertisement
Advertisement
ಒಡಿಶಾ ರೈಲು ದುರಂತ ಸಂಬಂಧ ಯಶವಂತಪುರ ರೈಲ್ವೆ ನಿಲ್ದಾಣ (Yeshwantpura Railway Station) ದಲ್ಲಿಯೂ ಹೆಲ್ಪ್ ಡೆಸ್ಕ್ ಕಾರ್ಯಾರಂಭ ಮಾಡಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಹೆಲ್ಪ್ ಡೆಸ್ಕ್ ಕಾರ್ಯ ನಡೆಯುತ್ತಿದೆ. ಕರ್ನಾಟಕದವರಿಗೆ ಯಾವುದೇ ಹಾನಿ ಆಗಿರೋ ಬಗ್ಗೆ ಮಾಹಿತಿ ಇಲ್ಲ. ಇಲ್ಲಿಂದ ಜನ ಪ್ರಯಾಣ ಮಾಡಿರೋ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.
Advertisement