ಕೊಪ್ಪಳ: ನಾವು ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಡಿವೋರ್ಸ್ ಕೊಟ್ಟಿದ್ದೇವೆ. ಡಿವೋರ್ಸ್ ಕೊಟ್ಟವರು, ಯಾವುದೇ ಕಾರಣಕ್ಕೂ ಮತ್ತೆ ಒಂದಾಗಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಡಿವೋರ್ಸ್ ಕೊಟ್ಟಿದ್ದೇವೆ. ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ನಾವು ಹೋಗೋದಿಲ್ಲ. ಬಿಜೆಪಿ ಮನೆಗೆ ಸೊಸೆಯಾಗಿ ಬಂದಿದ್ದೇವೆ. ಮುಂದೆ ಇಲ್ಲಿಯ ಮಕ್ಕಳಾಗಿಯೇ ಇರುತ್ತೇವೆ ಎಂದರು.
Advertisement
Advertisement
ಇದೇ ವೇಳೆ ಸಿಎಂ ಬದಲಾವಣೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಯಾವ ಕಾಲಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಅಮಿತ್ ಶಾ, ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿಲ್ಲ. ಯಡಿಯೂರಪ್ಪ ಅವರೇ ರಾಜೀನಾಮೆ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಮಂಡ್ಯದಲ್ಲಿ ಸೋಲಿಗೆ ದುಡ್ಡು ವಿಳಂಬವೇ ಕಾರಣ- ಮೇಲ್ಮನೆ ಸೋಲಿನ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ
Advertisement
Advertisement
ಬಿಜೆಪಿ ಶಾಸಕರ ವಿರುದ್ಧ ಗರಂ ಆದ ಕೌರವ, ಹಾದಿ ಬೀದಿಲಿ ಯಾರೂ ಮಾತನಾಡಬಾರದು ಎಂದು ರೇಣುಕಾಚಾರ್ಯ, ಯತ್ನಾಳ್, ಸೋಮಶೇಖರ್ ರೆಡ್ಡಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಇನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಫೋಟೋ ಶೂಟ್ ನಲ್ಲಿ ಬ್ಯುಸಿಯಾಗಿದ್ದಾರೆಂದು ಕಾಂಗ್ರೆಸ್ ಆರೋಪದ ಕುರಿತು ಮಾತನಾಡಿ, ನಾನು ಕೃಷಿ ಸಚಿವನಾಗಿ ಕೃಷಿ ಉತ್ತೇಜನಕ್ಕಾಗಿ ಫೋಟೋ ತೆಗೆಸಿಕೊಂಡಿದ್ದೇನೆ. ಅದು ನಾಟಕೀಯ ಅಲ್ಲ, ವಾಸ್ತವ. ನಾನೇನು ಕಿಕ್ ಬ್ಯಾಕ್ ಪಡೆದಿಲ್ಲ. ಕಾಂಗ್ರೆಸ್‍ಗೆ ನಾನು ಉತ್ತರ ಕೊಡೋ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದರು.