ತೆಲುಗು ಸಿನಿಮಾ ರಂಗದಲ್ಲಿ ನಟರಾದ ಜ್ಯೂನಿಯರ್ ಎನ್.ಟಿ.ಆರ್ (Jr. NTR) ಮತ್ತು ರಾಮ್ ಚರಣ್ (Ram Charan) ಪ್ರಬಲ ಸ್ಪರ್ಧಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು ಚಿತ್ರೋದ್ಯಮದಲ್ಲಿ ಸ್ಟಾರ್ ವಾರ್ ಅಂತಿದ್ದರೆ, ಅದು ಇವರಲ್ಲಿ ಮಾತ್ರವಿತ್ತು. ಈ ಇಬ್ಬರ ಅಭಿಮಾನಿಗಳು ಕೂಡ ಹಾಗೆಯೇ ಕಿತ್ತಾಡಿಕೊಂಡೆ ಬಂದಿದ್ದಾರೆ. ಆದರೆ, ಈ ಎಲ್ಲವನ್ನೂ ಆರ್.ಆರ್.ಆರ್ (R.R.R) ಸಿನಿಮಾ ಅಳಿಸಿ ಹಾಕಿತ್ತು. ಇಬ್ಬರೂ ಜನ್ಮಜನ್ಮಾಂತರದ ಬಂಧುಗಳು ಎನ್ನುವಂತೆ ಬೆರೆತರು.
Advertisement
ಆರ್.ಆರ್.ಆರ್ ಸಿನಿಮಾದಲ್ಲಿ ಜ್ಯೂನಿಯರ್ ಮತ್ತು ರಾಮ್ ಚರಣ್ ಒಟ್ಟಾಗಿ ನಟಿಸಲಿದ್ದಾರೆ ಎನ್ನುವುದೇ ಬ್ರೇಕಿಂಗ್ ನ್ಯೂಸ್ ಆಗಿತ್ತು. ಇಬ್ಬರೂ ತೆರೆ ಹಂಚಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಚರ್ಚೆ ಕೂಡ ಆಗಿತ್ತು. ಆದರೆ, ರಾಜಮೌಳಿ (Rajamouli) ಎನ್ನುವ ದೊಡ್ಡ ಶಕ್ತಿ, ಇವರನ್ನು ಒಟ್ಟಾಗಿಸುವಂತೆ ಮಾಡಿತ್ತು. ಈ ಇಬ್ಬರೂ ಕಲಾವಿದರಿಗೆ ಮತ್ತು ಅವರ ಅಭಿಮಾನಿಗಳಿಗೆ ಯಾವುದೇ ನೋವಾಗಂತೆ ಕಥೆ ಬರೆದಿದ್ದರು ರಾಜಮೌಳಿ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್ನಲ್ಲಿ ಮಿಂಚಿದ `ಜೋಶ್’ ನಟಿ ಪೂರ್ಣ
Advertisement
Advertisement
ಸಿನಿಮಾ ರಿಲೀಸ್ ಆದಾಗಲೂ ಅಷ್ಟೇ.. ಇಬ್ಬರಿಗೂ ಸಮಾನ ರೀತಿಯಲ್ಲಿ ಅವಕಾಶ ನೀಡಲಾಗಿತ್ತು. ಪ್ರಚಾರದಲ್ಲೂ ಅದನ್ನು ಮುಂದುವರೆಸಿಕೊಂಡು ಹೋಗಿದ್ದರು ರಾಜಮೌಳಿ. ಇನ್ಮುಂದೆ ಜ್ಯೂನಿಯರ್ ಮತ್ತು ರಾಮ್ ಚರಣ್ ಮಧ್ಯ ಅಷ್ಟೊಂದು ಪೈಪೋಟಿ ಇರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ರಾಮ್ ಚರಣ್ ಬೇರೆಯ ರೀತಿಯಲ್ಲೇ ಉತ್ತರ ಕೊಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.
Advertisement
ಜ್ಯೂನಿಯರ್ ಎನ್.ಟಿ.ಆರ್ ಮತ್ತು ನಾನು ಆಪ್ತರು, ಸ್ನೇಹಿತರು ಇರಬಹುದು. ಆದರೆ, ಸಿನಿಮಾ ವಿಷಯದಲ್ಲಿ ಜ್ಯೂನಿಯರ್ ನನ್ನ ಪ್ರಬಲ ಸ್ಪರ್ಧಿ ಎಂದು ಹೇಳಿದ್ದಾರೆ. ಈ ಸ್ಪರ್ಧೆ ಇದ್ದೇ ಇರುತ್ತದೆ. ಅದು ಯಾವತ್ತೂ ಮುಗಿಯುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ. ಸದ್ಯ ತೆಲುಗು ಚಿತ್ರೋದ್ಯಮದಲ್ಲಿ ರಾಮ್ ಚರಣ್ ಹೇಳಿದ ಮಾತು ಮಹತ್ವ ಪಡೆದುಕೊಂಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k