ತಮಿಳುನಾಡಿಗೆ ಎಷ್ಟು ನೀರು ಕೊಡಬೇಕೊ ಅದನ್ನ ಕೊಡಲಿಕ್ಕೆ ನಾವು ಬದ್ಧರಿದ್ದೇವೆ: ಡಿ.ಕೆ.ಶಿವಕುಮಾರ್

Public TV
2 Min Read
DK Shivakumar

ಮೈಸೂರು: ತಮಿಳುನಾಡಿಗೆ (Tamil Nadu) ಎಷ್ಟು ನೀರು ಕೊಡಬೇಕೋ ಅದನ್ನು ಕೊಡಲಿಕ್ಕೆ ನಾವು ಬದ್ಧರಿದ್ದೇವೆ. ನಮಗೇನು ಬೇಜಾರಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)  ಹೇಳಿದ್ದಾರೆ.

ಪಿರಿಯಾಪಟ್ಟಣದ ಕೊಪ್ಪ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಕೆದಾಟು ಯೋಜನೆ ಕುರಿತು ಮಾತನಾಡಿ, ಮೇಕೆದಾಟು ಯೋಜನೆಗೆ ಹೆಚ್.ಡಿ.ದೇವೇಗೌಡರು (H.D.Deve Gowda) ಅನುಮತಿ ಕೊಡಿಸಲಿ. ಅವರು ಮೇಕೆದಾಟು ವಿಚಾರದಲ್ಲಿ ಸರ್ಕಾರ ಕೆಲಸ ಮಾಡುತ್ತಿಲ್ಲ. ಪ್ರಧಾನಿಯವರಿಗೆ ಅವರು ಹತ್ತಿರವಿದ್ದಾರೆ. ಅವರನ್ನು ತಡೆದುಕೊಂಡಿರುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.  ಇದನ್ನೂ ಓದಿ: ರಾಹುಲ್ ಗಾಂಧಿ ಪರ ರೋಡಿಗಿಳಿದ ಮೊಹಮ್ಮದ್ ನಲಪಾಡ್ ವಿರುದ್ಧ ಎಫ್‌ಐಆರ್

ನಮ್ಮನ್ನು ಸೇರಿಸಿಕೊಂಡು ಮೇಕೆದಾಟು ಸಮಸ್ಯೆ ಬಗೆಹರಿಸಬಹುದಲ್ವ? ನಮ್ಮ ನಡಿಗೆ ನೀರಿಗೋಸ್ಕರ. ನಮ್ಮ ಅವಧಿ ಮುಗಿಯೋ ಒಳಗೆ ಮೇಕೆದಾಟು ಯೋಜನೆಯನ್ನು ಜಾರಿ ಮಾಡುತ್ತೇವೆ. ರಾಜ್ಯದ ಯಾವೊಬ್ಬ ಸಂಸದ ಕೂಡ ಮಾತನಾಡಿಲ್ಲ. ಸಂಸದ ಪ್ರತಾಪ್ ಸಿಂಹ ಮಾತನಾಡಿದ್ರ? ನಮಗೆ ನೀರೇ ಆಧಾರ ಸ್ಥಂಭ ಎಂದು ಡಿಕೆಶಿ, ದೇವೇಗೌಡರು ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.  ಇದನ್ನೂ ಓದಿ: 900ಕ್ಕೂ ಹೆಚ್ಚು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಹುದ್ದೆಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ: ಪರಮೇಶ್ವರ್

Congress Flag 1

ಪಿರಿಯಾಪಟ್ಟಣ ಜನರಿಗೆ ಧನ್ಯವಾದ ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಈ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಶಾಸಕರನ್ನ ನೀಡಿದ್ದೀರಾ. ಈ ಸರ್ಕಾರವನ್ನು ರಾಜ್ಯದಲ್ಲಿ ತಂದ ಮೇಲೆ ಒಳ್ಳೆಯ ಅಭಿವೃದ್ಧಿ ಮಾಡಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ:  ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ

ಬಿಜೆಪಿ ಕುರಿತು ಮಾತನಾಡಿದ ಅವರು, ನಮ್ಮದು ಬದುಕು, ಅವರದ್ದು (ಬಿಜೆಪಿ) ಭಾವನೆ. ಅವರು ಭಾವನೆ ಹಿಂದೆ ಹೊರಟಿದ್ದಾರೆ. ನಾವು ಬದುಕಿನ ಹಿಂದೆ ಹೊರಟಿದ್ದೇವೆ. ರಾಮಮಂದಿರ ಉದ್ಘಾಟನೆ ಮಾಡಿದ್ದಾರೆ ಬಹಳ ಸಂತೋಷ. ರಾಮ ಎಲ್ಲಾ ಕಡೆ ಇದ್ದಾನೆ. ನಮಗೂ ಭಾವನೆಗಳಿವೆ. ಆದರೆ ಬದುಕು ನಡೆಯಬೇಕಲ್ಲ. ಜನರ ಬದುಕಿಗೆ ಬೇಕಾದ ಯೋಜನೆಗಳನ್ನು ನಾವು ಗ್ಯಾರಂಟಿಗಳ ಮೂಲಕ ನೀಡಿದ್ದೇವೆ. ಸಿದ್ದರಾಮಯ್ಯ ಹೆಸರಲ್ಲಿ ರಾಮ, ನನ್ನ ಹೆಸರಲ್ಲಿ ಶಿವ, ವೆಂಕಟೇಶ್ ಹೆಸರಲ್ಲಿ ವೆಂಕಟೇಶ್ವರ, ಮಹದೇವಪ್ಪ ಹೆಸರಲ್ಲಿ ಮಹದೇಶ್ವರ ಇದ್ದಾನೆ. ನಾವೂ ಹಿಂದೂಗಳಲ್ಲವೆ? ಅವರು ಕೊಟ್ಟ ಮಂತ್ರಾಕ್ಷತೆಯಲ್ಲಿ ಸಿದ್ದರಾಮಯ್ಯ ನೀಡಿರುವ ಅನ್ನ ಭಾಗ್ಯದ ಅಕ್ಕಿ ಇದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಇದನ್ನೂ ಓದಿ: ಮೇಲುಕೋಟೆ ಶಿಕ್ಷಕಿ ಕೊಲೆ ಪ್ರಕರಣ – ಆರೋಪಿ ಅರೆಸ್ಟ್

ಸಚಿವ ವೆಂಕಟೇಶ್ ಕುರಿತು ಪ್ರತಿಕ್ರಿಯಿಸಿ, ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಸಚಿವ ವೆಂಕಟೇಶ್‌ರವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ರೈತರ ಬವಣೆ ಮತ್ತು ನೀರಿನ ಸಮಸ್ಯೆಯನ್ನು ಬಗೆಹರಿಸಲು ನಾವೆಲ್ಲರೂ ಸಿದ್ಧರಿದ್ದೇವೆ. ಪಾರ್ಲಿಮೆಂಟ್‌ನಲ್ಲಿ ಡಬಲ್ ವೋಟ್ ಹಾಕಿ ಗೆಲ್ಲಿಸಿ. ಆಮೇಲೆ ಜೈಕಾರ ಹಾಕಿ ಹೆಚ್ಚಿನ ಶಕ್ತಿಯನ್ನು ಪಕ್ಷಕ್ಕೆ ತುಂಬಿ. ನಾವಿನ್ನು ಸಾಲ ತೀರಿಸೋದು ಬಾಕಿಯಿದೆ ಎಂದು ಜನರಿಗೆ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ. ಇದನ್ನೂ ಓದಿ: ಇಂಡಿಯಾ ಒಕ್ಕೂಟ ಛಿದ್ರವಾಗಲಿದೆ – ಮಮತಾ ಬಳಿಕ ಮತ್ತಷ್ಟು ನಾಯಕರು ಹೊರಕ್ಕೆ: ಬೊಮ್ಮಾಯಿ

Share This Article