ತೆಲುಗು ನಟ ನರೇಶ್ (Naresh) ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ನಡುವಿನ ಸಂಬಂಧವೇನು ಎನ್ನುವ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಪರೋಕ್ಷವಾಗಿ ಅವರಿಬ್ಬರೂ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎನ್ನುವಂತೆ ತೋರಿಸುತ್ತಲೇ ಬಂದರು. ಇದೀಗ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗ ಪಡಿಸಿದ್ದಾರೆ. ತಮ್ಮ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು, ತಾವು ಸಹಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನರೇಶ್, ‘ಸುಪ್ರೀಂಕೋರ್ಟ್ ಕೂಡ ಲೀವ್ ಇನ್ ರಿಲೇಶನ್ ಶಿಪ್ (Live in relationship) ಅನ್ನು ಮದುವೆಗೆ ಸಮ ಎಂದು ಹೇಳಿದೆ. ಹಾಗಾಗಿ ನಾವು ಸಹಜೀವನ ನಡೆಸುತ್ತಿದ್ದೇವೆ. ನಾನು ಸಿಂಗಲ್ ಆಗಿ ಇದ್ದೀನಿ ಅಂತ ಅಂದ್ಕೊಳ್ಳಬೇಡಿ. ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಖುಷಿಯಾಗಿದ್ದೇವೆ’ ಎಂದು ಪವಿತ್ರಾ ಲೋಕೇಶ್ ಕೈ ಹಿಡಿದುಕೊಂಡೇ ಹೇಳಿದರು. ಇದನ್ನೂ ಓದಿ:ಪ್ಯಾರಿಸ್‌ಗೆ ಹಾರಿದ Love ಬರ್ಡ್ಸ್ ಡಾರ್ಲಿಂಗ್ ಕೃಷ್ಣ- ಮಿಲನಾ
ಮದುವೆಯ (Marriage) ಕುರಿತಾಗಿಯೂ ಮಾತನಾಡಿದ ಅವರು, ‘ಬಹುಪತ್ನಿತ್ವ ತಪ್ಪು ಎನ್ನುವುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಹಾಗಂತ ಬಲವಂತವಾಗಿ ಯಾರೊಂದಿಗೂ ಬದುಕುವುದಕ್ಕೆ ಆಗುವುದಿಲ್ಲ. ಸಮಾಜಕ್ಕೆ ಹೆದರಿ ತುಂಬಾ ಜನ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಆದರೆ, ಅವರು ಯಾರೂ ಸುಖವಾಗಿ ಇಲ್ಲ. ಕಿರುಕುಳದ ನಡುವೆಯೂ ಬದುಕು ನಡೆಸುವುದು ನನ್ನ ಮಟ್ಟಿಗೆ ತಪ್ಪು’ ಎಂದರು ನರೇಶ್.
ಮುಂದುವರೆದು ಮಾತನಾಡಿದ ನರೇಶ್, ‘ತುಂಬಾ ಜನರು ನನಗೆ ಮದುವೆ ಆಗಿದ್ದೀರಾ ಎಂದು ಕೇಳುತ್ತಾರೆ. ಮದುವೆ ಅಂದರೆ ಏನು? ಉಂಗುರು ಬದಲಾಯಿಸಿಕೊಳ್ಳುವುದಾ ಅಥವಾ ತಾಳಿ ಕಟ್ಟುವುದಾ? ಇದೆಲ್ಲವೂ ಸಂಪ್ರದಾಯವಷ್ಟೇ. ಒಟ್ಟಿಗೆ ಖುಷಿಯಾಗಿ ಇರುವುದೇ ಮದುವೆ. ನಾವಿಬ್ಬರೂ ಆ ಅಡಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಇಬ್ಬರೂ ನೆಮ್ಮದಿಯಾಗಿ ಇದ್ದೇವೆ’ ಎಂದರು.