ನವದೆಹಲಿ: 2020ರ ದೆಹಲಿ ಗಲಭೆ ಪ್ರಕರಣದ ಆರೋಪಿ ಮತ್ತು ಸುಮಾರು ಐದು ವರ್ಷಗಳಿಂದ ಜೈಲಿನಲ್ಲಿರುವ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‌ಗೆ (Umar Khalid) ಅಮೆರಿಕದ ನ್ಯೂಯಾರ್ಕ್ ನಗರದ ಹೊಸ ಮೇಯರ್ ಝೊಹ್ರಾನ್ ಮಮ್ದಾನಿ (Zohran Mamdani) ಬೆಂಬಲ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಉಮರ್ ಅವರ ಪೋಷಕರನ್ನು ಭೇಟಿಯಾದ ಸಂದರ್ಭದಲ್ಲಿ ಮಮ್ದಾನಿ ಅವರು ಕೈಯಾರೆ ಬರೆದ ಪತ್ರವೊಂದನ್ನು ನೀಡಿದ್ದರು. ಈ ಪತ್ರದಲ್ಲಿ ಅವರು, ‘ನಾವೆಲ್ಲ ನಿನ್ನ ಯೋಚಿಸುತ್ತಿದ್ದೇವೆ’ ಎಂದು ಬರೆದಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್ ಮೇಯರ್ ಆಗಿ ಪ್ರಮಾಣ ವಚನ – ಇತಿಹಾಸ ಬರೆದ ಮಮ್ದಾನಿ

ಪ್ರಿಯ ಉಮರ್, ನಿನ್ನ ಮಾತುಗಳನ್ನು ನಾನು ಆಗಾಗ ಯೋಚಿಸುತ್ತೇನೆ. ಕಹಿಯನ್ನು ತನ್ನೊಳಗೆ ತುಂಬಿಕೊಳ್ಳದಿರುವುದರ ಮಹತ್ವದ ಬಗ್ಗೆ. ನಿನ್ನ ಪೋಷಕರನ್ನು ಭೇಟಿಯಾಗಿದ್ದು ಸಂತೋಷ. ನಾವೆಲ್ಲ ನಿನ್ನ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಮಮ್ದಾನಿ ಬರೆದಿದ್ದಾರೆ.
ಈ ಪತ್ರವನ್ನು ಉಮರ್ ಖಾಲಿದ್ ಅವರ ಸಹಚರಿ ಬನೋಜ್ಯೋತ್ಸ್ನಾ ಲಾಹಿರಿ ಅವರು ಜನವರಿ 1 ರಂದು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ದಿನವೇ ಮಮ್ದಾನಿ ಅವರು ನ್ಯೂಯಾರ್ಕ್ ನಗರದ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದನ್ನೂ ಓದಿ: 2020ರ ದೆಹಲಿ ಗಲಭೆ ಕೇಸ್ – ಉಮರ್ ಖಾಲಿದ್ ಸೇರಿ ಇತರೆ ಆರೋಪಿಗಳ ಜಾಮೀನಿಗೆ ದೆಹಲಿ ಪೊಲೀಸರ ವಿರೋಧ
ಜೆಎನ್‌ಯು ವಿದ್ಯಾರ್ಥಿ ನಾಯಕ ಮತ್ತು ಕಾರ್ಯಕರ್ತ ಉಮರ್ ಖಾಲಿದ್ 2020ರ ಸೆಪ್ಟೆಂಬರ್‌ನಲ್ಲಿ ದೆಹಲಿ ಗಲಭೆಗೆ ಪ್ರೇರಣೆ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. ಉಮರ್ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು ಐದು ವರ್ಷಗಳಿಂದ ತಿಹಾರ್ ಜೈಲಿನಲ್ಲಿದ್ದಾರೆ.

