ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಮುಸ್ಲಿಮರು ನಮಾಜ್ ಮಾಡಿ ಹೇಗೆ ಸಂಭ್ರಮಿಸುತ್ತಾರೋ ನಮಗೂ ಗಣೇಶೋತ್ಸವ ಮಾಡಿ ಸಂಭ್ರಮಿಸಲು ಅವಕಾಶವಿದೆ ಎಂದು ಮಾಜಿ ಸಚಿವ, ಶಾಸಕ ಸಿಟಿ ರವಿ ಹೇಳಿದರು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್‌ಗೆ ಹೋಗಲು ಎಲ್ಲರಿಗೂ ಅವಕಾಶ ಇದೆ. ಅವರು ಹೋಗಿದ್ದಾರೆ. ಸುಪ್ರೀಂಕೋರ್ಟ್ ಏನು ತೀರ್ಮಾನ ಮಾಡುತ್ತದೋ ನೋಡೋಣ ಎಂದು ಹೇಳಿದರು. ಇದನ್ನೂ ಓದಿ: ರಾಮನಗರದಲ್ಲಿ ಕಂಡು ಕೇಳರಿಯದ ಮಳೆ – ಶಾಲಾ, ಕಾಲೇಜುಗಳಿಗೆ ರಜೆ
Advertisement
Advertisement
ವಾಯುದೇವನನ್ನು ಹಿಂದೂಗಳು ಪೂಜೆ ಮಾಡುತ್ತಾರೆ. ಹಾಗಂತ ವಾಯುವನ್ನು ದ್ವೇಷ ಮಾಡುತ್ತೇನೆ ಎನ್ನಲು ಆಗುತ್ತಾ? ಸೂರ್ಯನನ್ನು ಪೂಜೆ ಮಾಡುತ್ತೇವೆ ಎಂಬ ಕಾರಣಕ್ಕೆ ವಿರೋಧ ಮಾಡುತ್ತೇನೆ ಎಂದರೆ ಆಗುತ್ತಾ? ನೀರನ್ನು ದೇವರು ಅಂತ ಪೂಜೆ ಮಾಡುತ್ತೇವೆ. ಹಾಗಂತ ನೀರು ಕುಡಿಯಲ್ಲ ಎಂದು ಹೇಳಲು ಆಗುತ್ತಾ ಎಂದು ಪ್ರಶ್ನಿಸಿದರು.
Advertisement
ನನ್ನಂತ ಕಾರ್ಯಕರ್ತರ ಭಾವನೆ ಪ್ರತಿನಿಧಿಸಿಯೇ ಈ ಸರ್ಕಾರ ಬಂದಿದೆ. ಗಣೇಶೋತ್ಸವ ಆಚರಣೆಗೆ ಸರ್ಕಾರ ಅನುಮತಿ ಕೊಡುತ್ತದೆ ಎಂಬ ವಿಶ್ವಾಸವಿದೆ ಎಂದರು.