ಚಿಕ್ಕಮಗಳೂರು: ಹುಲಿ ಉಗುರುಗೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ಹಳ್ಳಿಕಾರ್ ಸಂತೋಷ್ (Bigg Boss Santhosh) ಅವರನ್ನು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ ಬೆನ್ನಲ್ಲೇ ಇದೀಗ ಲಾಕೆಟ್, ಚರ್ಮ ಬಳಕೆ ಮಾಡಿದ ಆರೋಪದ ಮೇಲೆ ಎಲ್ಲರ ಫೋಟೋ ವೀಡಿಯೋಗಳು ಒಂದೊಂದಾಗಿಯೇ ಹೊರಗೆ ಬರುತ್ತಿವೆ. ಅಂತೆಯೇ ವಿನಯ್ ಗುರೂಜಿ (Vinay Guruji) ಅವರು ಕೂಡ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ವಿನಯ್ ಗುರೂಜಿ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಆಶ್ರಮದಿಂದ ಸ್ಪಷ್ಟನೆ ಕೊಡಲಾಗಿದೆ. 2 ವರ್ಷದ ಹಿಂದೆ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಎಂಬವರು ವಿನಯ್ ಗುರೂಜಿಗೆ ಉಡುಗೊರೆ ನೀಡಿದ್ದರು. ಕಿರೀಟಿಯವರು ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ಉಡುಗೊರೆ ನೀಡಿದ್ದರು. ಅಮರೇಂದ್ರ ಅವರ ತಂದೆ ಕಾಲದಿಂದಲೂ ಹುಲಿ ಚರ್ಮ ಮನೆಯಲ್ಲಿತ್ತು. ಆ ಹುಲಿ ಚರ್ಮವನ್ನ ವಿನಯ್ ಗುರೂಜಿಗೆ ನೀಡಿದ್ದರು. ಇದನ್ನೂ ಓದಿ: ಹುಲಿ ಉಗುರು ಕಂಟಕ: ದರ್ಶನ್, ಜಗ್ಗೇಶ್, ನಿಖಿಲ್ ಕ್ರಮಕ್ಕೆ ಒತ್ತಾಯ
ಈ ಹಿಂದೆಯೂ ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕೂತಿರೋ ಫೋಟೋ ವೈರಲ್ ಆಗಿತ್ತು. ಹೀಗಾಗಿ 2022 ರಲ್ಲಿ ಅದನ್ನ ಅರಣ್ಯ ಇಲಾಖೆಗೆ ಹಿಂದಿರುಗಿಸಲಾಗಿದೆ ಎನ್ನುವ ಮೂಲಕ ಹುಲಿ ಚರ್ಮದ ಬಗ್ಗೆ ಸ್ಪಷ್ಟನೆ ಕೊಡಲಾಗಿದೆ.
Web Stories