ಬೆಂಗಳೂರು: ರಾಹುಲ್ ಗಾಂಧಿಗೆ (Rahul Gandhi) ವಿಪಕ್ಷ ನಾಯಕನ ಸ್ಥಾನ ಸಿಗಲಿ ಅನ್ನೋದು ನಮ್ಮೆಲ್ಲರ ಆಸೆ, ನಿರೀಕ್ಷೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwara) ಹೇಳಿದರು.
ಬೆಂಗಳೂರಿನಲ್ಲಿ (Bengaluru) ಮಾತಾಡಿದ ಅವರು, ರಾಹುಲ್ ಗಾಂಧಿ ವಿಪಕ್ಷ ನಾಯಕ ಆಗಬೇಕು ಅನ್ನೋದು ನಮ್ಮೆಲ್ಲರ ಆಸೆ. ಅದನ್ನ ಪಕ್ಷ ತೀರ್ಮಾನ ಮಾಡಬೇಕು. ಜೊತೆಗೆ ಇಂಡಿಯಾ ಒಕ್ಕೂಟ ತೀರ್ಮಾನ ಮಾಡಬೇಕು. ಅದನ್ನ ಅವರು ಮಾಡುತ್ತಾರೆ. ಆದರೆ ನಮ್ಮ ಆಸೆ ಇರೋದು, ರಾಹುಲ್ ಗಾಂಧಿ ಹೋರಾಟ ಮಾಡಿದ್ದಾರೆ. ಇಡೀ ದೇಶದಲ್ಲಿ ಪಾದಯಾತ್ರೆ ಮಾಡಿದ್ದಾರೆ. ಈಗ ನೂರು ಸೀಟು ಬರೋದಕ್ಕೂ ರಾಹುಲ್ ಗಾಂಧಿ ಕಾರಣ ಆಗಿದ್ದಾರೆ. ದೇಶದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಹೀಗಾಗಿ ಅವರೇ ವಿಪಕ್ಷ ನಾಯಕ ಆಗಲಿ ಅಂತಾ ತಿಳಿಸಿದರು. ಇದನ್ನೂ ಓದಿ: ಲೋಕಸಭೆಯ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ನೇಮಕಕ್ಕೆ CWC ನಿರ್ಣಯ ಅಂಗೀಕಾರ
Advertisement
Advertisement
ನಿನ್ನೆ ನಡೆದ ರಾಹುಲ್ ಗಾಂಧಿ ಸಭೆಯಲ್ಲಿ ಸಚಿವರ ತರಾಟೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಸಮ್ಮುಖದಲ್ಲಿ ಸ್ವಾಭಾವಿಕವಾಗಿ ಚರ್ಚೆಯಾಗಿದೆ. ಯಾಕೆ ಹೀಗಾಗಿದೆ ಅಂತಾ ವಿಶ್ಲೇಷಣೆ ಮಾಡಲಾಗಿದೆ. ನನ್ನನ್ನೂ ಸೇರಿಸಿ ಯಾವೆಲ್ಲಾ ಜಿಲ್ಲೆಗಳಲ್ಲಿ ಹಿನ್ನಡೆಯಾಗಿದೆ ಅಂತಾ ವಿಶ್ಲೇಷಣೆ ಮಾಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ. ನಾವು ಅವರು ಕೊಟ್ಟ ಸೂಚನೆಗೆ ಬದ್ಧರಾಗಿ ನಡೆದುಕೊಳ್ತೀವಿ ಎಂದರು.
Advertisement
ವಾಲ್ಮೀಕಿ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರದಲ್ಲಿ ಶರಣು ಪ್ರಕಾಶ್ ಪಾಟೀಲ್ ಹೆಸರು ತಳುಕು ಹಾಕಿರೋ ವಿಚಾರವಾಗಿ ಮಾತನಾಡಿ, ತನಿಖೆ ನಡೆಯುತ್ತಿರುವಾಗ ಅನೇಕ ವಿಚಾರ ಬರುತ್ತದೆ. ತನಿಖೆ ಮಾಡುವಾಗ ಯಾರು ಅಪರಾಧಿ ಸ್ಥಾನದಲ್ಲಿ ಇರ್ತಾರೆ ಅವರು ಹೇಳಿಕೆಗಳನ್ನು ಕೊಡ್ತಾರೆ. ಆ ಹೇಳಿಕೆಯಲ್ಲಿ ಹಲವರ ಹೆಸರು ಬರುತ್ತದೆ. ಅದನ್ನ ಎಸ್‌ಐಟಿ ಅವರು ತನಿಖೆ, ವಿಚಾರಣೆ ಮಾಡ್ತಾರೆ. ನಾವು ಅದರ ಬಗ್ಗೆ ವ್ಯಾಖ್ಯಾನ ಮಾಡೋದು ಸರಿಯಲ್ಲ. ಅದಕ್ಕೆ ಸಂಬಂಧಪಟ್ಟ ಹೇಳಿಕೆ ಕೊಡಲು ಆಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಯ ಸಂವಿಧಾನ ವಿರೋಧಿ ನೀತಿಗಳಿಗೆ ಜನ ಎಚ್ಚರಿಕೆ ನೀಡಿದ್ದಾರೆ: ಹೆಚ್.ಸಿ.ಮಹದೇವಪ್ಪ
Advertisement
ವಾಲ್ಮೀಕಿ ನಿಗಮದ ಭ್ರಷ್ಟಾಚಾರದ ತನಿಖೆ ವಹಿಸುವಂತೆ ಸಿಬಿಐಯಿಂದ ಸರ್ಕಾರಕ್ಕೆ ಇನ್ನೂ ಪತ್ರ ಬಂದಿಲ್ಲ. ಮುಂದಿನ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಇದರ ಅಜೆಂಡಾ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದರು.