ಲಂಡನ್: ಭಾರತ (India) ತಂಡವು 2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಿಂದ (World Championship of Legends) ಅಧಿಕೃತವಾಗಿ ಹಿಂದೆ ಸರಿದಿದೆ.
ಗುರುವಾರ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ (Pakistan) ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಈ ಪಂದ್ಯದಲ್ಲಿ ಭಾರತ ಪಾಕ್ ವಿರುದ್ಧ ಆಡುವುದಿಲ್ಲ ಎಂದು ಹೇಳಿದೆ. ಹೀಗಾಗಿ ಪಾಕ್ ತಂಡ ಫೈನಲ್ ಪ್ರವೇಶಿಸಿದೆ.
ಲೀಗ್ ಪಂದ್ಯದಲ್ಲೂ ಭಾರತ ಪಾಕ್ ಮುಖಾಮುಖಿಯಾಗಬೇಕಿತ್ತು. ಪಾಕ್ ಪಂದ್ಯಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಬೆನ್ನಲ್ಲೇ ಭಾರತದ ಹಿರಿಯ ಆಟಗಾರರು ಆಡಲು ನಿರಾಕರಿಸಿದ್ದರಿಂದ ಆಯೋಜಕರು ಪಂದ್ಯವನ್ನೇ ರದ್ದು ಮಾಡಿದ್ದರು. ಇದನ್ನೂ ಓದಿ: India vs England Test; ನಿರ್ಣಾಯಕ ಪಂದ್ಯದಿಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಔಟ್
India vs Pakistan – WCL Semi-Final
We applaud Team India @India_Champions for their outstanding performance in the World Championship of Legends, you’ve made the nation proud.
However, the upcoming semi-final against Pakistan is not just another game, Terror and cricket cannot…
— Nishant Pitti (@nishantpitti) July 30, 2025
ಭಾರತೀಯ ತಂಡದ ಪ್ರಾಯೋಜಕರಲ್ಲಿ ಒಬ್ಬರಾದ ಈಸ್‌ಮೈಟ್ರಿಪ್, ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿದಿತ್ತು.
ಟೂರ್ನಿಯಲ್ಲಿ9 ಅಂಕ ಪಡೆದಿರುವ ಪಾಕಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, 8 ಅಂಕ ಪಡೆದಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಬೆನ್ ಸ್ಟೋಕ್ಸ್ ಡ್ರಾ ಆಫರ್ ರಿಜೆಕ್ಟ್ – ಬ್ಯಾಟಿಂಗ್ ಮುಂದುವರಿಸಿ ಚಮಕ್ ಕೊಟ್ಟ ಜಡೇಜಾ, ಸುಂದರ್
ಪಹಲ್ಗಾಮ್ ದಾಳಿ (Pahalgam Attack), ಆಪರೇಷನ್ ಸಿಂಧೂರ (Operation Sindoor) ವಿಚಾರವನ್ನು ಪ್ರಸ್ತಾಪಿಸಿ ಪಾಕ್ ಜೊತೆ ಆಡುವ ಅಗತ್ಯ ಏನು ಎಂದು ಪ್ರಶ್ನಿಸಿ ಭಾರತದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸುತ್ತಿದ್ದರು.
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಎರಡನೇ ಆವೃತ್ತಿಯಲ್ಲಿ ಯುವರಾಜ್ ಸಿಂಗ್ ಭಾರತ ತಂಡವನ್ನು, ಮೊಹಮ್ಮದ್ ಹಫೀಸ್ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ ಆರಂಭಗೊಂಡಿತ್ತು. ಫೈನಲಿನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ 5 ವಿಕೆಟ್ ಜಯ ಸಾಧಿಸಿ ಕಪ್ ಗೆದ್ದಿತ್ತು. ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್‌ನ ಹಿರಿಯ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.