ವಯನಾಡು: ಇಲ್ಲಿ ಭೂಕುಸಿತ (Wayanad Landslides) ದುರಂತ ನಡೆದು ಏಳು ದಿನ ಕಳೆದಿದೆ. ಮೃತರ ಸಂಖ್ಯೆ 400 ದಾಟಿದೆ. ಇನ್ನೂ 250ಕ್ಕೂ ಹೆಚ್ಚು ಜನ ಪತ್ತೆಯಾಗಬೇಕಿದೆ. ಮುಂಡಕ್ಕೈ, ಚುರಲ್ಮಲದಲ್ಲಿ ಸೋಮವಾರವೂ(ಆ.5) ಶೋಧಕಾರ್ಯ ಮುಂದುವರಿದಿದೆ.
ಚಲಿಯಾರ್ ನದಿ ವ್ಯಾಪ್ತಿಯ 40 ಕಿಲೋಮೀಟರ್ ಉದ್ದಕ್ಕೂ ಶವಗಳಿಗಾಗಿ ಹುಡುಕಾಟ ನಡೆದಿದೆ. ಕಾಂತನ್‌ಪಾರಾ ಬಳಿ ಅಪಾಯಕ್ಕೆ ಸಿಲುಕಿದ್ದ 18 ರಕ್ಷಣಾ ಸಿಬ್ಬಂದಿಯನ್ನ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.
ಮಧ್ಯರಾತ್ರಿ ಗುಡ್ಡ ಕುಸಿತ ಸಂಭವಿಸುತ್ತಲೇ ಚುರುಲ್ಮಲದ (chooralmala) ನೀತು ಜೋಜೋ ಎಂಬಾಕೆ ಫೋನ್ ಮಾಡಿ ಸಹಾಯಕ್ಕೆ ಮೊರೆ ಇಟ್ಟಿದ್ರು. ಕೆಲವೇ ನಿಮಿಷ ನಿಮ್ಮನ್ನು ತಲುಪ್ತೀವಿ ಎಂದು ರಕ್ಷಣಾ ಪಡೆಗಳು ಭರವಸೆ ನೀಡಿದ್ವು. ಆದ್ರೆ, ಜಲಸ್ಫೋಟದ ತೀವ್ರತೆಯಿಂದ ಅವರನ್ನು ತಲುಪಲಾಗಲಿಲ್ಲ. ನಿನ್ನೆ ರಾತ್ರಿ ನೀತು ಅವರ ಶವ ಸಾವಿನ ದಿಬ್ಬದಲ್ಲಿ ಪತ್ತೆಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದೇಶ ತೊರೆದ ಶೇಖ್ ಹಸೀನಾಗೆ ಭಾರತ ಆಶ್ರಯ – ʻಮಹಾ ಪಲಾಯನʼ ಬೆನ್ನಲ್ಲೇ ಉದ್ರಿಕ್ತರಿಂದ ಸಂಭ್ರಮಾಚರಣೆ
ಇನ್ನು, ಚುರಲ್ಮಲದಲ್ಲಿ 16 ಮಂದಿಯ ಕೂಡು ಕುಟುಂಬದಲ್ಲಿ ಈಗ ಒಬ್ಬರಷ್ಟೇ ಉಳಿದಿದ್ದಾರೆ. ಅದು ಅವರು ಬೇರೆ ಕಡೆ ಹೋಗಿದ್ದರಿಂದ ಜೀವಂತವಾಗಿದ್ದಾರೆ. ಅಂದಿನಿಂದ ತಮ್ಮವರಿಗಾಗಿ ಹುಡುಕಾಟ ನಡೆಸಿದ್ದಾರೆ. ಈವರೆಗೂ ನಾಲ್ವರ ಶವಗಳಷ್ಟೇ ಸಿಕ್ಕಿವೆ. ಉಳಿದವರಿಗಾಗಿ ರಸೂಲ್ ಶೋಧ ಕಾರ್ಯ ಮಾಡ್ತಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ದುರಂತದಲ್ಲಿ ಬಚಾವ್ ಆದವರು ಬಿಕ್ಕಿ ಅಳುತ್ತಿದ್ದಾರೆ. ಮುಂದೆನು? ಎಲ್ಲಿಗ್ ಹೋಗೋದು? ನಮಗ್ಯಾರು ಗತಿ? ಅಂತ ದಿಕ್ಕು ತೋಚದಂತೆ ಕುಳಿತಿದ್ದಾರೆ. ಇದನ್ನೂ ಓದಿ: ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರ ಕಡೆಗಣನೆ – ಹೆಚ್‌ಡಿಡಿ ಬೇಸರ