ಚೂರಲ್ಮಾಲಾ: ವಯನಾಡು ಜಲ ಪ್ರಳಯ (Wayanad Land Slide) ಮಾಡಿದ ಹಾನಿ ಏನು ಎನ್ನುವುದು ಎಲ್ಲರಿಗೂ ಈಗಾಗಲೇ ತಿಳಿದಿದೆ. ಆದರೆ ಈ ಮಧ್ಯರಾತ್ರಿ ದುರಂತ ಹೇಗೆ ನಡೆಯಿತು? ಆದರ ತೀವ್ರತೆ ಹೇಗಿತ್ತು ಎನ್ನುವುದು ಈಗ ಸಿಸಿಟಿವಿ ದೃಶ್ಯದಿಂದ ಗೊತ್ತಾಗಿದೆ.
ಮುಂಡಕ್ಕೈ ಚರ್ಚ್ ಮತ್ತು ಚೂರಲ್ಮಾಲಾದ ಅಂಗಡಿಯೊಂದರ ಸಿಸಿಟಿವಿ ದೃಶ್ಯಾವಳಿಗಳು (CCTV Visuals) ಜುಲೈ 30 ರಂದು ನಡೆದ ಘೋರ ದುರಂತವನ್ನು ವಿವರಿಸುತ್ತದೆ. ಇದನ್ನೂ ಓದಿ:ಭಾರತೀಯರು ಜನಸಂಖ್ಯೆ ನಿಯಂತ್ರಣಕ್ಕೆ ಹೆಚ್ಚು ಗಮನ ಹರಿಸುತ್ತಿಲ್ಲ: ನಾರಾಯಣ ಮೂರ್ತಿ
ಭೂಕುಸಿತದಿಂದ ಭಾಗಶಃ ನಾಶವಾದ ಮುಂಡಕ್ಕೈ ಚರ್ಚ್‌ನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ಅಂದು ಮಳೆ ಹೇಗಿತ್ತು ಎನ್ನುವುದನ್ನು ತೋರಿಸುತ್ತದೆ. ರಭಸವಾಗಿ ಬಂದ ನೀರಿನಲ್ಲಿ ವಸ್ತುಗಳು ಹೇಗೆ ಕೊಚ್ಚಿಕೊಂಡು ಹೋಯ್ತು? ಅಂಗಡಿಯನ್ನು ಹೇಗೆ ನಾಶ ಮಾಡಿತು ಎನ್ನುವುದು ಅಂಗಡಿಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ನೋಡಬಹುದು.
ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಸುಮಾರು ಮೂರು ವಾರಗಳ ನಂತರ ರಾಜ್ಯ ಸರ್ಕಾರ ನಾಪತ್ತೆಯಾದವರ ಸಂಖ್ಯೆಯನ್ನು 119 ಕ್ಕೆ ಇಳಿಸಿದೆ. ಆರಂಭದಲ್ಲಿ 128 ಜನರು ಕಾಣೆಯಾಗಿದ್ದಾರೆ ಎಂದು ಪಟ್ಟಿ ಮಾಡಲಾಗಿದ್ದರೂ, ಡಿಎನ್‌ಎ ಪರೀಕ್ಷೆಗಳು ಪೂರ್ಣಗೊಂಡ ನಂತರ ಸಂಖ್ಯೆಗಳನ್ನು ನವೀಕರಿಸಲಾಗಿದೆ.
ಆಗಸ್ಟ್ 14 ರವರೆಗೆ 401 ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗಿದೆ. ಕೊಳೆತ ದೇಹದ ಭಾಗಗಳನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲಿ ಸಮಸ್ಯೆ ಇರುವುದರಿಂದ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ.