– ಗುರುತು ಸಿಗದ ಶವಗಳ ಸಾಮೂಹಿಕ ಅಂತ್ಯಕ್ರಿಯೆ
ತಿರುವನಂತಪುರಂ: ಕೇರಳದ (Kerala) ವಯನಾಡು ಭೂಕುಸಿತ (Wayanad Landslide) ದುರಂತ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡಾ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ಮುಂದುವರಿಸಿವೆ. ಭೂಕುಸಿತ ದುರಂತವು ಹಲವು ಮನಕಲಕುವ ಘಟನಾವಳಿಗಳಿಗೆ ಸಾಕ್ಷಿಯಾಗಿದೆ.
Advertisement
ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆ ಆಗಿದೆ. ಮುಂಡಕ್ಕೈ, ಚೂರಲ್ಮಲದಲ್ಲಿ 206ಕ್ಕೂ ಹೆಚ್ಚು ಜನರು ಇನ್ನೂ ಕಣ್ಮರೆಯಾಗಿದ್ದಾರೆ. ಸೂಚಿಪ್ಪಾರ ಫಾಲ್ಸ್ನಲ್ಲಿ 11 ಮೃತದೇಹಗಳು ಸಿಕ್ಕಿವೆ. ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿ ಬಂದಿವೆ. ಇದನ್ನೂ ಓದಿ: Wayanad Landslides | ಸೂಚಿಪ್ಪಾರ ಫಾಲ್ಸ್‌ನಲ್ಲಿ 11 ಶವ ಪತ್ತೆ – ಕಣ್ಣಿಗೆ ರಾಚುತ್ತಿದೆ ಹೃದಯವಿದ್ರಾವಕ ದೃಶ್ಯ
Advertisement
Advertisement
ಭೂಕುಸಿತದಲ್ಲಿ ಒಟ್ಟು 1,208 ಮನೆಗಳಿಗೆ ಹಾನಿಯುಂಟಾಗಿದೆ. ಇದರಲ್ಲಿ ಮುಂಡಕ್ಕೈನಲ್ಲಿ 540 ಮನೆಗಳು, ಚೂರಲ್ಮಲದಲ್ಲಿ 600, ಅಟ್ಟಮಾಲದಲ್ಲಿ 68 ಮನೆಗಳು ನೆಲಸಮವಾಗಿದೆ.
Advertisement
3,700 ಎಕರೆ ಕೃಷಿಭೂಮಿ ನಾಶವಾಗಿದ್ದು, 21,111 ಕೋಟಿ ಮೌಲ್ಯದ ಬೆಳೆ ನೆಲಕಚ್ಚಿದೆ. ಭೂಕುಸಿತದಿಂದ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಕೇರಳ ಸರ್ಕಾರ ಉಚಿತ ಪಡಿತರ ಘೋಷಿಸಿದೆ. ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ತೆಲುಗು ನಟರಾದ ಚಿರಂಜೀವಿ-ರಾಮಚರಣ್ 1 ಕೋಟಿ, ಅಲ್ಲು ಅರ್ಜುನ್ 25 ಲಕ್ಷ ರೂ.ದೇಣಿಗೆ ನೀಡಿದ್ದಾರೆ. ಯುಡಿಎಫ್‌ನ ಶಾಸಕರು ತಮ್ಮ 1 ತಿಂಗಳ ಸಂಬಳವನ್ನು ಸಂತ್ರಸ್ತರಿಗೆ ನೀಡೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವಯನಾಡು ಭೂಕುಸಿತಕ್ಕೆ ಗೋ ಹತ್ಯೆ ಕಾರಣ – ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ
ಈ ನಡುವೆ ಶ್ವಾನವೊಂದು 6 ದಿನಗಳ ಬಳಿಕ ತನ್ನ ಮನೆ ಒಡತಿಯನ್ನು ಕಂಡ ತಕ್ಷಣ ಓಡಿ ಬಂದ ದೃಶ್ಯ ಮನಕಲುಕುವಂತಿದೆ. ಇನ್ನು ಭೂಕುಸಿತದಿಂದ ನಲುಗಿ ಹೋಗಿರುವ ವಯನಾಡಿನಲ್ಲಿ ಕಳ್ಳರ ಹಾವಳಿ ಆರಂಭವಾಗಿದೆ. ನಿರಾಶ್ರಿತರ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲಾಗುತ್ತಿದ್ದು, ಈ ಬಗ್ಗೆ ನಿರಾಶ್ರಿತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಗುರುತು ಸಿಗದ ಶವಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗ್ತಿದೆ.