ಕ್ಯಾನ್ಬೆರಾ: ಪಿಜ್ಜಾ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ, ಅದರಲ್ಲಿಯೂ ಈಗ ಹಲವು ವಿಭಿನ್ನ ಟೇಸ್ಟಿ ಪಿಜ್ಜಾಗಳಿದ್ದು, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇಷ್ಟ ಪಡುತ್ತಾರೆ. ಸದ್ಯ ವ್ಯಕ್ತಿಯೋರ್ವ ಕಲ್ಲಂಗಡಿ ಹಣ್ಣಿನಿಂದ ಪಿಜ್ಜಾ ತಯಾರಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋವನ್ನು ಓಲಿ ಪ್ಯಾಟರ್ಸನ್ ಎಂಬವರು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಮೊದಲಿಗೆ ಕಲ್ಲಂಗಡಿ ಹಣ್ಣನ್ನು ಕತ್ತರಿಸುತ್ತಾರೆ. ಬಳಿಕ ಅದನ್ನು ಗ್ರಿಲ್ ಮೇಲೆ ಬೇಯಿಸಿಕೊಳ್ಳುತ್ತಾರೆ. ನಂತರ ಅದನ್ನು ಪಕ್ಕಕ್ಕೆ ತೆಗೆದುಕೊಂಡು ಬಾರ್ಬೆಕ್ಯೂ ಸಾಸ್‍ನನ್ನು ಹಚ್ಚಿ, ಅದರ ಸುತ್ತಾ ಚೀಸ್ ಉದುರಿಸುತ್ತಾರೆ ಮತ್ತು ಪೆಪ್ಪೆರೋನಿ ಹರಡಿ, ಚೀಸ್ ಕರಗುವವರೆಗೂ ಓವೆನ್‍ನಲ್ಲಿಟ್ಟು ಬೇಯಿಸಿದ್ದಾರೆ. ಕೊನೆಗೆ ತಯಾರಾದ ಕಲ್ಲಂಗಡಿ ಪಿಜ್ಜಾವನ್ನು ಹೊರ ತೆಗೆದು ಕಟ್ ಮಾಡಿ ಪಿಜ್ಜಾ ಸವಿದಿದ್ದಾರೆ.ಇದನ್ನೂ ಓದಿ:ಬಾಲಕಿಗೆ ಸೆಕ್ಸ್ ವೀಡಿಯೋ ಕಳಿಸ್ತಿದ್ದ ಆಂಟಿ ವಿರುದ್ಧ FIR
ಸದ್ಯ ಓಲಿ ಪ್ಯಾಟರ್ಸನ್ ಪಿಜ್ಜಾ ರೆಸಿಪಿ ವೀಡಿಯೋ ನೋಡಿ ಡೊಮಿನೋಸ್ ಆಸ್ಟ್ರೇಲಿಯಾ ಪ್ರೇರಿತಗೊಂಡು ಇದನ್ನು ಟ್ರೈ ಮಾಡಲು ಪ್ರಯತ್ನಿಸಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ:ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ
View this post on Instagram