– ಕಾರ್ಖಾನೆಗೆ ನೀರು ಬಿಡಲು ಪ್ರತ್ಯೇಕ ಸಭೆ
ಕೊಪ್ಪಳ: ಸದ್ಯದ ನೀರು ಲಭ್ಯತೆ ಆಧರಿಸಿ ನವೆಂವರ್ 30ರವರೆಗೆ ಎಡದಂಡೆ ಕಾಲುವೆಗೆ 4,100 ಕ್ಯೂಸೆಕ್ ನೀರು ಬಿಡಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದರು.
Advertisement
ಕೊಪ್ಪಳ (Koppal) ತಾಲೂಕಿನ ಮುನಿರಾಬಾದ್‌ನಲ್ಲಿನ ತುಂಗಭದ್ರಾ (Tungabhadra) ಕಾಡಾ ಕಚೇರಿಯಲ್ಲಿ ನಡೆದ ಐಸಿಸಿ ಸಭೆಯ (ICC Meeting) ಬಳಿಕ ಮಾತನಾಡಿದ ಅವರು, ಇಂದು ತುಂಗಭದ್ರಾ ಜಲಾಶಯದಲ್ಲಿ ಒಟ್ಟು 88 ಟಿಎಂಸಿ ನೀರಿದ್ದು, ಈಗಾಗಲೇ ಕರ್ನಾಟಕದ ಪಾಲಿನ 10 ಟಿಎಂಸಿ ಮತ್ತು ಆಂಧ್ರದ 3 ಟಿಎಂಸಿ ನೀರು ಬಳಕೆ ಆಗಿದೆ. ಈವರೆಗೆ ಒಟ್ಟು 101 ಟಿಎಂಸಿ ನೀರು ಸಿಕ್ಕಿದೆ. ಈ ಪೈಕಿ ರಾಜ್ಯದ ಪಾಲಿಗೆ 65 ಟಿಎಂಸಿ ನೀರು ಹಂಚಿಕೆ ಆಗಲಿದೆ. ಮುಂದಿನ ನೀರು ಲಭ್ಯತೆ ಆಧರಿಸಿ ನೀರು ಬಿಡುಗಡೆಗೆ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆರೋಪ ಮಾಡಿ ಓಡಿ ಹೋಗುವ ಬಹಳ ಮಂದಿಯನ್ನು ನೋಡಿದ್ದೇನೆ: ಡಿಕೆ ಸುರೇಶ್
Advertisement
Advertisement
ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1,300 ಕ್ಯೂಸೆಕ್ ಮತ್ತು ಬಲದಂಡೆ ಕೆಳಮಟ್ಟದ ಕಾಲುವೆಗೆ 850 ಕ್ಯೂಸೆಕ್ ನೀರನ್ನು ನವೆಂಬರ್ 30ರವರೆಗೆ ನೀರು ಬಿಡುಗಡೆ ಮಾಡಲಾಗುವುದು. ಈ ಎಲ್ಲಾ ಕಾಲುವೆಗೆ ಆಗಸ್ಟ್ 3ರಿಂದ ಹಂತ ಹಂತವಾಗಿ ನೀರು ಬಿಡುಗಡೆ ಮಾಡಲಾಗಿದೆ. ರಾಯ ಬಸವಣ್ಣ ಕಾಲುವೆಗೆ ಜೂನ್ 1ರಿಂದ 270 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನವೆಂಬರ್ 30ರ ವರಗೆ ನೀರು ಹರಿಸಲಾಗುವುದು. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆಗಸ್ಟ್ 3ರಿಂದ 25 ಕ್ಯೂಸೆಕ್ ನೀರು ನೀಡಲಾಗುತ್ತಿದ್ದು, ನವೆಂಬರ್ 30ರವರಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ: ಬೊಮ್ಮಾಯಿ ಆಗ್ರಹ
Advertisement
ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯ ಕಾಲುವೆ ಸೇರಿ ಎಲ್ಲಾ ವಿತರಣಾ ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಈ ಬಗ್ಗೆ ಕಲಬುರಗಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ನೀರು ಕಳ್ಳತನ ಸೇರಿ ಇತರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ದೇವರಾಜ ಅರಸು ಉತ್ಸವವನ್ನು ಸರ್ಕಾರ ಕೈಬಿಟ್ಟಿದೆ: ಕೋಟಾ ಶ್ರೀನಿವಾಸ ಪೂಜಾರಿ
ಆಗಸ್ಟ್ 19ಕ್ಕೆ ವಿಶೇಷ ಐಸಿಸಿ ಸಭೆ:
ಕಾರ್ಖಾನೆಗಳಿಗೆ ನೀರು ನೀಡುವ ಬಗ್ಗೆ ಚರ್ಚಿಸಲು ಆ.19ರಂದು ಬೆಂಗಳೂರಿನಲ್ಲಿ ವಿಶೇಷ ಐಸಿಸಿ ಸಭೆ ನಡೆಸಲಾಗುವುದು. ನೀರಾವರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ರಾಯಚೂರು- ಕೊಪ್ಪಳ, ವಿಜಯನಗರ- ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಮಳೆಯ ಕೊರತೆ ಇದೆ. ಆದ್ದರಿಂದ ಕಾರ್ಖಾನೆಗಳಿಗೆ ನೀರು ಬಿಡುಗಡೆ ಮಾಡಬೇಕೋ? ಬೇಡವೋ? ಅಥವಾ ಎಷ್ಟು ಪ್ರಮಾಣದ ನೀರು ನೀಡಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಗುತ್ತಿಗೆ ನೌಕರರ ಬಾಕಿ ವೇತನ ಪಾವತಿ ಸಂಬಂಧಿಸಿದಂತೆ ಚರ್ಚೆ ಮಾಡಲಾಗುವುದು ಎಂದರು. ಇದನ್ನೂ ಓದಿ: ಎಲ್ಲರ ಮಾತು ಮುಗಿಯಲಿ, ನಮಗೆ ಉತ್ತರ ನೀಡಲು ಸಾಕಷ್ಟು ಸಮಯವಿದೆ: ಡಿಕೆಶಿ
Web Stories