ಮುಂಬೈ: ನಾವಿ ಮುಂಬೈನಿಂದ ದಕ್ಷಿಣ ಮುಂಬೈಗೆ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದ ವಾಟರ್ ಟ್ಯಾಕ್ಸಿಯು 2022ರ ಜನವರಿ ತಿಂಗಳಿಂದ ಮುಂಬೈನಲ್ಲಿ ಸೇವೆ ಆರಂಭವಾಗಲಿದೆ.
ವಾಟರ್ ಟ್ಯಾಕ್ಸಿ ಸೇವೆಯು ದಕ್ಷಿಣ ಮುಂಬೈ ಮತ್ತು ನಾವಿ ಮುಂಬೈ ನಡುವೆ, ಫೆರ್ರಿ ವಾರ್ಫ್‌ನಲ್ಲಿರುವ ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ ಮತ್ತು ಬೆಲಾಪುರ್ ಹಾಗೂ ನೆರೂಲ್‌ನಲ್ಲಿರುವ ಟರ್ಮಿನಲ್‌ನಿಂದ ಸಾರಿಗೆ ಸೇವೆ ಒದಗಿಸುವ ಗುರಿಯನ್ನು ಹೊಂದಲಾಗಿದೆ. ಇದನ್ನೂ ಓದಿ: ತೆರಿಗೆ ದಾಳಿ, 150 ಕೋಟಿ ನಗದು ವಶ – ಕಂತೆ ಕಂತೆ ನೋಟುಗಳ ಪತ್ತೆ
Advertisement
Advertisement
ವಾಟರ್ ಟ್ಯಾಕ್ಸಿ ಸೇವೆಗೆ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್, ರೇವಾಸ್‌ನಿಂದ ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ (ಡಿಸಿಟಿ), ಧರ್ಮತಾರ್, ಕರಂಜಾಡೆ, ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್, ನೆರೂಲ್, ಐರೋಲಿ, ವಾಶಿ, ಖಂಡೇರಿ, ದ್ವೀಪಗಳು ಮತ್ತು ಜವಾಹರ್‌ಲಾಲ್ ಸೇರಿದಂತೆ ವಿವಿಧ ಮಾರ್ಗಗಳನ್ನು ಸರ್ಕಾರ ನಿಗದಿಪಡಿಸಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್
Advertisement
Advertisement
ಜನವರಿ ಮೊದಲ ವಾರದಿಂದಲೇ ವಾಟರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಸದ್ಯಕ್ಕೆ ಮೂರು ಆಪರೇಟರ್ ವ್ಯವಸ್ಥೆ ಮಾಡಲಾಗಿದೆ. 2-3 ತಿಂಗಳಲ್ಲಿ ನಾಲ್ಕನೇ ಆಪರೇಟರ್ ವ್ಯವಸ್ಥೆ ಮಾಡಲಾಗುವುದು.
ಡೊಮೆಸ್ಟಿಕ್ ಟರ್ಮಿನಲ್‌ನಿಂದ (ಡಿಸಿಟಿ) ನಾವಿ ಮುಂಬೈ ಪ್ರಯಾಣಕ್ಕೆ ಒಬ್ಬ ಪ್ರಯಾಣಿಕರಿಗೆ 1,200ರಿಂದ 15,000 ರೂ. ಟಿಕೆಟ್ ದರ ಇರಲಿದೆ. ಮುಂಬೈನ ಡಿಸಿಟಿಯಿಂದ ಜವಾಹರ್‌ಲಾಲ್ ನೆಹರೂ ಮತ್ತು ನಾವಿ ಮುಂಬೈಗೆ 800ರಿಂದ 1,100 ರೂ. ದರ ಇದೆ.