`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ

Public TV
1 Min Read
India House Movie

ತೆಲುಗಿನ ʻದಿ ಇಂಡಿಯಾ ಹೌಸ್ʼ (The India House) ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಭಾರೀ ಅವಘಡ ಸಂಭವಿಸಿದೆ. ಚಿತ್ರೀಕರಣದ ವೇಳೆ ನೀರಿನ ಟ್ಯಾಂಕರ್‌ ಸ್ಫೋಟಗೊಂಡು (Water Tank Burst), ಪ್ರವಾಹ ರೀತಿಯಲ್ಲಿ ನೀರು ನುಗ್ಗಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ.

ನೀರಿನ ದೊಡ್ಡ ಟ್ಯಾಂಕರ್‌ ಒಡೆದು ಪ್ರವಾಹ ಸೃಷ್ಟಿಯಾದ ಪರಿಣಾಮ ಸಹಾಯಕ ಕ್ಯಾಮೆರಾಮೆನ್‌ (cameraman) ಮತ್ತು ಇನ್ನೂ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕುರಿತ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯಲ್ಲಿ ಇದ್ದಿದ್ದು ಬರೀ ಲೋಕಲ್‌ ಡ್ರಿಂಕ್ಸ್‌ ಮಾತ್ರ – ಮಂಗ್ಲಿ ಸ್ಪಷ್ಟನೆ

India House Movie 2

ಶಂಷಾಬಾದ್ ಬಳಿ ಸಿನಿಮಾ ಶೂಟಿಂಗ್‌ಗಾಗಿ ದೊಡ್ಡ ನೀರಿನ ಟ್ಯಾಂಕರ್‌ ನಿರ್ಮಾಣ ಮಾಡಲಾಗಿತ್ತು. ಭಾರೀ ಒತ್ತಡದಿಂದಾಗಿ ನೀರಿನ ಟ್ಯಾಂಕರ್‌ ಸ್ಫೋಟಗೊಂಡು ಪ್ರವಾಹವೇ ಸೃಷ್ಟಿಯಾಯ್ತು. ಭಾರೀ ಪ್ರಮಾಣದ ನೀರಿನ ವೇಗಕ್ಕೆ ಸಿಕ್ಕಿ ಕ್ಯಾಮೆರಾಮೆನ್‌, ಇತರ ಸಿಬ್ಬಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

ಖ್ಯಾತನಟ ರಾಮ್ ಚರಣ್ ನಿರ್ಮಾಣದ ಈ ʻದಿ ಇಂಡಿಯಾ ಹೌಸ್‌ʼ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದ ಹೊರತಾಗಿಯೂ ಸೆಟ್‌ನಲ್ಲಿ ಅವಘಡ ಸಂಭವಿಸಿದ್ದು, ಚಿತ್ರೀಕರಣಕ್ಕಾಗಿ ಹಾಕಲಾದ ಸೆಟ್ ಸಂಪೂರ್ಣ ನಾಶವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದನ್ನೂ ಓದಿ: ಮಂಗ್ಲಿ ಬರ್ತ್‍ಡೇ ಪಾರ್ಟಿ ಮೇಲೆ ದಾಳಿ – ಮಾದಕ ವಸ್ತು ಪತ್ತೆ, ಪೊಲೀಸರಿಗೆ ಆವಾಜ್ ಹಾಕಿದ ಗಾಯಕಿ!

Share This Article