– ತಮಿಳುನಾಡು ಆಗ್ರಹಕ್ಕೆ ರಾಜ್ಯದ ವಿರೋಧ
ನವದೆಹಲಿ: ಭೀಕರ ಬರಕ್ಕೆ ತತ್ತರಿಸಿರುವ ಕರ್ನಾಟಕ (Karnataka) ಸುಡುವ ಬೇಸಿಗೆಗೆ ಬೆಂದು ಕುಡಿಯುವ ನೀರಿಗೆ ತಾತ್ವರ ಎದುರಿಸುತ್ತಿದೆ. ಈ ನಡುವೆ ಕಾವೇರಿ ನೀರು (Cauvery Water) ಹಂಚಿಕೆ ವಿಚಾರದಲ್ಲಿ ತಮಿಳುನಾಡು (Tamil Nadu) ಮತ್ತೆ ಕ್ಯಾತೆ ತೆಗೆದಿದ್ದು, ಮೇ ತಿಂಗಳ ಪರಿಸರ ಹಂಚಿಕೆಯ ಪಾಲು 2.5 ಟಿಎಂಸಿಯ ಜೊತೆಗೆ ಬಾಕಿ ಉಳಿಸಿಕೊಂಡ ನೀರಿನ ಪಾಲಿನ ಪೈಕಿ 25 ಟಿಎಂಸಿ ನೀರು ಹರಿಸಲು ಕರ್ನಾಟಕದ ಮೇಲೆ ಒತ್ತಡ ಹೇರಿದೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ಅಧಿಕಾರಿಗಳು, ಮಳೆಯ ಕೊರತೆ ಹಿನ್ನೆಲೆ ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ. ನಿಗದಿತ ಪ್ರಮಾಣದ ನೀರು ಹರಿಸಿಲ್ಲ. ಫೆ.1 ರಿಂದ ಏ.28 ವರೆಗೂ ಪರಿಸರಕ್ಕೆ 7.33 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಕರ್ನಾಟಕ 5.31 ಟಿಎಂಸಿ ನೀರು ಹರಿಸಿದೆ. ಇದರಲ್ಲೂ 2.016 ಟಿಎಂಸಿ ಬಾಕಿ ಉಳಿಸಿಕೊಂಡಿದೆ ಎಂದರು. ಇದನ್ನೂ ಓದಿ: ರಾಯ್‌ಬರೇಲಿಯಿಂದ ಸ್ಪರ್ಧಿಸಲ್ಲ ಪ್ರಿಯಾಂಕಾ – ಇನ್ನೂ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್
ಮೆಟ್ಟೂರಿನಲ್ಲಿ 20 ಟಿಎಂಸಿಯಷ್ಟು ನೀರಿದೆ. ಕುಡಿಯಲು ಮತ್ತು ಪರಿಸರಕ್ಕೆ ಬಳಸಲಾಗುತ್ತಿದೆ. ಕರ್ನಾಟಕ ಬಾಕಿ ಉಳಿಸಿಕೊಂಡ ಪರಿಸರ ಬಳಕೆ ನೀರು ಬಿಡುಗಡೆ ಮಾಡಬೇಕು. ಈ 2.5 ಟಿಎಂಸಿ ಜೊತೆಗೆ ಕೊರತೆಯ ಭಾಗದಲ್ಲಿ 25 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ರಾಕೇಶ್ ಸಿದ್ದರಾಮಯ್ಯ ವಿಚಾರ ಕೆದಕಿದ ಹೆಚ್‌ಡಿಕೆ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿರುವ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. ಈ ಹಂತದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೆ ಮಧ್ಯಪ್ರವೇಶ ಮಾಡಿದ ತಮಿಳುನಾಡು, ಕುಡಿಯಲು 0.5 ಟಿಎಂಸಿ ನೀರು ಸಾಕು. ಕುಡಿಯುವ ನೀರಿನ ನೆಪದಲ್ಲಿ ನೀರು ಬಿಡುಗಡೆಗೆ ನಿರಾಕರಿಸಬಾರದು. ಹವಾಮಾನ ಇಲಾಖೆ ಉತ್ತಮ ಮಳೆಯ ಭರವಸೆ ನೀಡಿದೆ. ಹೀಗಾಗೀ ನೀರು ಹರಿಸಬೇಕು ಎಂದು ಒತ್ತಾಯಿಸಿತು. ಇದನ್ನೂ ಓದಿ: ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಹಿನ್ನಡೆ – ಎರಡನೇ ಬಾರಿಗೆ ಜಾಮೀನು ಅರ್ಜಿ ವಜಾ
ಮಧ್ಯಪ್ರವೇಶ ಮಾಡಿದ CWRC ಅಧ್ಯಕ್ಷ ವಿನೀತ್ ಗುಪ್ತಾ, ಸುಪ್ರೀಂ ಆದೇಶದ ಅನ್ವಯ ಬಿಳಿಗುಂಡ್ಲು ಬಳಿ ಮೇ ತಿಂಗಳ 2.5 ಟಿಎಂಸಿ ಪರಿಸರ ನೀರು ಹರಿವಿನ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಆದರೆ ಇದಕ್ಕೆ ಪರಿಸ್ಥಿತಿ ಅವಲೋಕಿಸುವುದಾಗಿ ಕರ್ನಾಟಕದ ಅಧಿಕಾರಿಗಳು ಹೇಳಿದ್ದಾರೆ. ಇನ್ನು 25 ಟಿಎಂಸಿ ನೀರು ಹರಿಸುವ ಬೇಡಿಕೆಯನ್ನು ತಿರಸ್ಕರಿಸಲಾಯಿತು. ಎರಡೂ ರಾಜ್ಯಗಳ ವಾದ ಆಲಿಸಿರುವ ಸಿಡಬ್ಲ್ಯೂಆರ್‌ಸಿ ಮೇ 16ಕ್ಕೆ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದೆ. ಇದನ್ನೂ ಓದಿ: ಚುನಾವಣೆ ಮುಂಚಿತವಾಗಿ ಕೇಜ್ರಿವಾಲ್ ಬಂಧನ ಮಾಡಿದ್ಯಾಕೆ – ಇಡಿಗೆ ಸುಪ್ರೀಂ ಪ್ರಶ್ನೆ