– ಇರೋ ಬೋರ್‍ವೆಲ್‍ಗಳಲ್ಲಿ ವಿಷಯುಕ್ತ ನೀರು
ಬಳ್ಳಾರಿ: ರಾಜ್ಯದಲ್ಲಿ ಈ ಬಾರಿ ಕಂಡು ಕೇಳರಿಯದ ಬರಗಾಲ ಆವರಿಸಿದೆ. ಕುಡಿಯುವ ನೀರಿಗಾಗಿ ಜನರು ಪರಿತಪಿಸುವಂತಾಗಿದೆ. ಅತ್ತ ಗಣಿನಾಡು ಬಳ್ಳಾರಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿನ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆಯೆಂದರೆ ಕುಡಿಯಲು ನೀರು ಬೇಕಾದ್ರೆ ದುಡ್ಡು ಕೊಡಲೇಬೇಕಾದ ಪರಿಸ್ಥಿತಿ ಎದುರಾಗಿದೆ.
Advertisement
ವಾಹನದಲ್ಲಿ ಸಿಂಟ್ಯಾಕ್ಸ್ ಇಟ್ಟುಕೊಂಡು ನೀರಿನ ಬ್ಯುಸಿನೆಸ್. ದುಡ್ಡು ಕೊಟ್ಟು ನೀರು ತುಂಬಿಸಿಕೊಳ್ತಿರುವ ಜನ. ಈ ದೃಶ್ಯ ಕಂಡು ಬಂದಿದ್ದು ಗಣಿನಾಡು ಬಳ್ಳಾರಿಯಲ್ಲಿ. ಇಲ್ಲಿನ ಚಳ್ಳರ್ಗುಕಿ, ಯಾಳ್ಬಿ, ಕಗ್ಗಲ್ ಮತ್ತು ಸಂಡೂರಿನ ಕುಡತಿನಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೀಗಾಗಿ ಒಂದು ಬಿಂದಿಗೆ ನೀರಿಗೆ 10 ರೂಪಾಯಿ ಕೊಡಬೇಕಾದ ಪರಿಸ್ಥಿತಿ ಬಂದೊದಗಿದೆ.
Advertisement
Advertisement
ಈ ಗ್ರಾಮಗಳಲ್ಲಿ ಹೆಸರಿಗೇನೋ ಬೋರ್‍ವೆಲ್‍ಗಳಿವೆ. ಆದ್ರೆ ಅವುಗಳಲ್ಲಿ ಬರ್ತಿರೋದು ಮಾತ್ರ ಫ್ಲೋರೈಡ್‍ಯುಕ್ತ ನೀರು. ಆ ನೀರು ಕುಡಿದರೆ ವಾಂತಿ, ಬೇದಿ, ಹೊಟ್ಟೆನೋವು, ಕೀಲುಬೇನೆಯಂತಹ ರೋಗಗಳಿಗೆ ತುತ್ತಾಗೋದು ಗ್ಯಾರಂಟಿ. ಹೀಗಾಗಿ ಆಂಧ್ರದಿಂದ ಪೂರೈಕೆಯಾಗ್ತಿರುವ ನೀರೇ ಇವರ ಪಾಲಿಗೆ ಜೀವಜಲವಾಗಿದೆ.
Advertisement
ಜಿಲ್ಲಾಡಳಿತ ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ರೂ ಅವುಗಳಿಂದ ಜನರಿಗೆ ಪ್ರಯೋಜನವೇ ಅಗಿಲ್ಲ. ಜನನಾಯಕರು ಇನ್ನಾದ್ರೂ ಎಚ್ಚೆತ್ತುಕೊಂಡು ಜನರ ದಾಹ ತಣಿಸುವ ಕೆಲಸ ಮಾಡಬೇಕಿದೆ.