Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಶ್ವ ಪ್ರಸಿದ್ಧ ಮಹಾರಾಷ್ಟ್ರದ ಲೋನಾರ್‌ ಸರೋವರದಲ್ಲಿ ನೀರಿನ ಮಟ್ಟ ದಿಢೀರ್‌ 20 ಅಡಿ ಏರಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Court | ವಿಶ್ವ ಪ್ರಸಿದ್ಧ ಮಹಾರಾಷ್ಟ್ರದ ಲೋನಾರ್‌ ಸರೋವರದಲ್ಲಿ ನೀರಿನ ಮಟ್ಟ ದಿಢೀರ್‌ 20 ಅಡಿ ಏರಿಕೆ

Court

ವಿಶ್ವ ಪ್ರಸಿದ್ಧ ಮಹಾರಾಷ್ಟ್ರದ ಲೋನಾರ್‌ ಸರೋವರದಲ್ಲಿ ನೀರಿನ ಮಟ್ಟ ದಿಢೀರ್‌ 20 ಅಡಿ ಏರಿಕೆ

Public TV
Last updated: January 22, 2026 8:50 pm
Public TV
Share
2 Min Read
Lonar Lake
SHARE

– ಉಪ್ಪು ನೀರಿನ ಸರೋವರದಲ್ಲಿ ಈಗ ಮೀನುಗಳ ಸಂಚಾರ
– ದಡದಲ್ಲಿದ್ದ ಶಿವನ ದೇವಾಲಯ ಮುಳುಗಡೆ
– ಪಿಐಎಲ್‌ ಸಲ್ಲಿಸುವಂತೆ ನಾಗ್ಪುರ ಪೀಠ ಆದೇಶ

ಮುಂಬೈ: ಸರೋವರದಲ್ಲಿ ನೀರಿನ ಮಟ್ಟ ಇಳಿಕೆಯಾಗುವುದನ್ನು ನೀವು ಓದಿರಬಹುದು. ಆದರೆ ಮಹಾರಾಷ್ಟ್ರದಲ್ಲಿರುವ ಪ್ರಸಿದ್ಧ ಲೋನಾರ್ ಸರೋವರದಲ್ಲಿ (Lonar Lake) ನೀರಿನ ಮಟ್ಟ ದಿಢೀರ್‌ ಏರಿಕೆಯಾಗಿದ್ದು ಕಳವಳಕ್ಕೆ ಕಾರಣವಾಗಿದೆ.

ಹೌದು. ಬುಲ್ಧಾನಾ ಜಿಲ್ಲೆಯಲ್ಲಿರುವ ಉಲ್ಕಾಶಿಲೆ ಪ್ರಭಾವದಿಂದ ರೂಪುಗೊಂಡ, ಉಪ್ಪು ನೀರಿನ ಲೋನಾರ್ ಸರೋವರದಲ್ಲಿ ನೀರಿನ ಮಟ್ಟ ಏರಿಕೆ ಕಾಣುತ್ತಿದೆ. ಸರೋವರದ ಸುತ್ತಲು ಇರುವ ನಾಲ್ಕು ಬುಗ್ಗೆಗಳಿಂದ 4-5 ತಿಂಗಳಿನಲ್ಲಿ ಸುಮಾರು 15 ರಿಂದ 20 ಅಡಿ ನೀರು ಏರಿಕೆಯಾಗಿದೆ.

ನೀರಿನ ಏರಿಕೆಯಿಂದಾಗಿ ಸರೋವರದ ಜೀವವೈವಿಧ್ಯತೆಗೆ ಎದುರಾಗಿರುವ ಅಪಾಯವನ್ನು ಗಂಭೀರವಾಗಿ ಪರಿಗಣಿಸಿ ಬಾಂಬೆ ಹೈಕೋರ್ಟ್‌ನ (Bombay High Court) ನಾಗ್ಪುರ ಪೀಠವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ಆದೇಶಿಸಿದೆ. ನ್ಯಾ. ಅನಿಲ್ ಕಿಲೋರ್ ಮತ್ತು ನ್ಯಾ.ರಾಜ್ ವಕೋಡ್ ಅವರನ್ನೊಳಗೊಂಡ ಪೀಠವು ವಕೀಲ ಮೋಹಿತ್ ಖಜಾಂಚಿ ಅವರನ್ನು ಅಮಿಕಸ್ ಕ್ಯೂರಿ ಆಗಿ ನೇಮಿಸಿದೆ ಮತ್ತು ಮುಂದಿನ ಏಳು ದಿನಗಳಲ್ಲಿ ವಿವರವಾದ ಪಿಐಎಲ್ ಸಲ್ಲಿಸುವಂತೆ ನಿರ್ದೇಶಿಸಿದೆ.

ನೀರಿನ ಮಟ್ಟ ಏರಿಕೆಯಿಂದಾಗಿ ದಡದಲ್ಲಿದ್ದ ಹಲವಾರು ಪ್ರಾಚೀನ ಶಿವ ದೇವಾಲಯಗಳು (Shiva Temple) ಮುಳುಗಿವೆ. ವಿಶ್ವಪ್ರಸಿದ್ಧ ಕಮಲಜಾ ದೇವಿ ದೇವಾಲಯದ ಗರ್ಭಗುಡಿಗೂ ನೀರು ಪ್ರವೇಶಿಸಿದೆ. ದೇವಾಲಯದ ಮುಂಭಾಗದಲ್ಲಿರುವ ದೀಪಸ್ತಂಭ ಹಿಂದೆ ಸಂಪೂರ್ಣವಾಗಿ ಗೋಚರಿಸುತ್ತಿತ್ತು. ಆದರೆ ಈಗ ಅರ್ಧ ಮುಳುಗಡೆಯಾಗಿದೆ.  ಇದನ್ನೂ ಓದಿ: ಮಧ್ಯಪ್ರದೇಶದ ಧಾರ್‌ನ ಭೋಜ್‌ಶಾಲಾದಲ್ಲಿ ಪ್ರಾರ್ಥನೆ ವಿವಾದ; ಹಿಂದೂ-ಮುಸ್ಲಿಮರ ಪ್ರಾರ್ಥನೆಗೆ ‘ಸುಪ್ರೀಂ’ ಅವಕಾಶ

lonar lake shiva temple

ಉಪ್ಪು ನೀರಿನ ಸರೋವರವಾಗಿದ್ದರೂ ಕಳೆದ ಕೆಲ ತಿಂಗಳಿನಿಂದ ಸಿಹಿನೀರು ಮಿಶ್ರಣವಾಗುತ್ತಿದೆ. ಇದರಿಂದಾಗಿ ನೀರಿನಲ್ಲಿ ಈಗ ಮೀನುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ದಿಢೀರ್‌ ನೀರು ಏರಿಕೆಯಾಗಿರುವುದು ಮತ್ತು ಮೀನು ಕಾಣಿಸಿಕೊಂಡಿರುವುದು ಜೀವವೈವಿಧ್ಯಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಛತ್ರಪತಿ ಸಂಭಾಜಿನಗರದ ಅಂತರ್ಜಲ ತಜ್ಞ ಪ್ರೊಫೆಸರ್ ಅಶೋಕ್ ತೇಜಂಕರ್ ಮತ್ತು ತಹಸೀಲ್ದಾರ್ ಭೂಷಣ್ ಪಾಟೀಲ್ ಸರೋವರವನ್ನು ಪರಿಶೀಲಿಸಿದ್ದಾರೆ. ನೀರಿನ ಮಟ್ಟ ಏರಿಕೆಗೆ ನಿಖರವಾದ ವೈಜ್ಞಾನಿಕ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕಾರಣ ಪತ್ತೆ ಹಚ್ಚಲು ಆಳವಾದ ಸಂಶೋಧನೆಯ ಅಗತ್ಯವಿದೆ ಎಂದಿದ್ದಾರೆ.

ಉಲ್ಕಾಶಿಲೆಯ ಘರ್ಷಣೆಯಿಂದ ರಚಿಸಲ್ಪಟ್ಟ ಲೋನಾರ್ ಸರೋವರವು ವೈಜ್ಞಾನಿಕ ಸಂಶೋಧನೆಗೆ ಜಾಗತಿಕವಾಗಿ ಮಹತ್ವದ್ದಾಗಿದೆ. ಪ್ರಪಂಚದಾದ್ಯಂತದ ವಿದ್ವಾಂಸರು ಮತ್ತು ಪ್ರವಾಸಿಗರನ್ನುಈ ಸರೋವರ ಆಕರ್ಷಿಸುತ್ತದೆ. ಈಗ ನೈಸರ್ಗಿಕ ಪರಂಪರೆಯನ್ನು ರಕ್ಷಿಸುವ ಹೈಕೋರ್ಟ್‌ನ ಆದೇಶವನ್ನು ಪರಿಸರ ಪ್ರೇಮಿಗಳು ಸ್ವಾಗತಿಸಿದ್ದಾರೆ.

ಸುಮಾರು 50,000 ವರ್ಷಗಳ ಹಿಂದೆ ಉಲ್ಕಾಶಿಲೆಯೊಂದು ಬಂಡೆಗೆ ಅಪ್ಪಳಿಸಿದ ಪರಿಣಾಮದಿಂದ ಈ ಸರೋವರ ಮತ್ತು ಕುಳಿ ರೂಪುಗೊಂಡಿದೆ. ಉಲ್ಕಾಶಿಲೆಯಿಂದ ಬಂಡೆಯ ಮೇಲೆ ನಿರ್ಮಾಣಗೊಂಡ ವಿಶ್ವದ ಏಕೈಕ ಉಪ್ಪು ನೀರಿನ ಸರೋವರ ಇದಾಗಿದ್ದು ರಾಷ್ಟ್ರೀಯ ಭೂಪಾರಂಪರಿಕ ಸ್ಮಾರಕ ತಾಣವೆಂದು ಘೋಷಿಸಲಾಗಿದೆ.

ಸ್ಥಳೀಯರು ವಿಷ್ಣುವು ರಾಕ್ಷಸ ಲವಣಾಸುರನನ್ನು ಸಂಹರಿಸಿದ ಸ್ಥಳವೆಂದು ನಂಬುತ್ತಾರೆ. ಈ ಕಾರಣಕ್ಕೆ ಈ ಪ್ರದೇಶದ ಸುತ್ತಮುತ್ತ ಅನೇಕ ದೇವಸ್ಥಾನಗಳಿವೆ.

TAGGED:Bombay High CourtLonar Lakeshiva templeಬಾಂಬೆ ಹೈಕೋರ್ಟ್ಲೋನಾರ್‌ ಸರೋವರಶಿವ ದೇವಸ್ಥಾನ
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

Auto Gas
Bengaluru City

ಗ್ಯಾಸ್ ಅಭಾವದಿಂದ ನಲುಗಿದ ಆಟೋ ಚಾಲಕರು – ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.. ಮನವಿ

Public TV
By Public TV
27 minutes ago
America China AI
Latest

ಯುಎಸ್ ಸೇನೆ ಮಾಹಿತಿ ಇರಾನ್‌ಗೆ ಮಾರಿದ ಚೀನಾ: ಅಮೆರಿಕ

Public TV
By Public TV
38 minutes ago
Tolll
Latest

ಏ.10 ರಿಂದ ಟೋಲ್‌ಗಳಲ್ಲಿ ನಗದು ಸ್ವೀಕಾರ ಸಂಪೂರ್ಣ ಬಂದ್‌!

Public TV
By Public TV
39 minutes ago
Chikkamagaluru School 2
Chikkamagaluru

ಮಕ್ಕಳ ಭವಿಷ್ಯಕ್ಕಾಗಿ ಅಡಿಕೆ ತೋಟ ಬೆಳೆಸಿದ ಸರ್ಕಾರಿ ಶಾಲೆ – ವಿದ್ಯಾರ್ಥಿಗಳನ್ನ ವಿಮಾನದಲ್ಲಿ ಕರೆದೊಯ್ಯಬೇಕೆಂಬ ಆಸೆ

Public TV
By Public TV
48 minutes ago
Chitradurga Nirmithi Kendra Former Accountant Lokayukta Raid
Chitradurga

ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಮನೆ ಮೇಲೆ ಲೋಕಾಯುಕ್ತ ದಾಳಿ

Public TV
By Public TV
1 hour ago
Israel Strikes Iran
Latest

ಕದನ ವಿರಾಮಕ್ಕೆ ಒಪ್ಪದ ಇರಾನ್‌ ಮೇಲೆ ಮಿಸೈಲ್‌ ಮಳೆಗರೆದ ಇಸ್ರೇಲ್‌ – ಹಲವೆಡೆ ಸ್ಫೋಟ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?