ಬಳ್ಳಾರಿ: ಮಲೆನಾಡು ಹಾಗೂ ಪಶ್ಚಿಮಘಟ್ಟಗಳಲ್ಲಿ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಿ ನೀರಿನ ಒಳಹರಿವು ಹೆಚ್ಚಾಗಿದೆ. ಹಾಗಾಗಿ 33 ಕ್ರಸ್ಟ್ ಗೇಟುಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದನ್ನು ಓದಿ: ತುಂಗಭದ್ರಾ ಜಲಾಶಯಕ್ಕೆ ಉಜ್ಜಯಿನಿ ಜಗದ್ಗುರುಗಳಿಂದ ಬಾಗಿನ ಅರ್ಪಣೆ.
ಪರಿಣಾಮ ನದಿಪಾತ್ರ ಹಂಪಿಯ ಸ್ಮಾರಕಗಳು ಹಾಗೂ ಸಾಲುಮಂಟಪಗಳು ಮುಳುಗಡೆಯಾಗಿವೆ. ದೇವಸ್ಥಾನಕ್ಕೆ ತೆರಳುವ ರಸ್ತೆ ನದಿ ನೀರಿನಿಂದ ಆವೃತವಾಗಿದ್ದು, ಕಂಪ್ಲಿ ಸೇತುವೆ ಮುಳುಗಡೆಯಾಗಲು ಕೆಲ ಅಡಿಗಳು ಮಾತ್ರ ಬಾಕಿಯಿದೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಶ್ರೀ ಪುರಂದರದಾಸರ ಮಂಟಪ, ಸಾಲುಮಂಟಪಗಳು ನದಿ ನೀರಿಗೆ ಮುಳುಗಿದೆ. ರಾಮಲಕ್ಷ್ಮಣ ಹಾಗೂ ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನಕ್ಕೆ ತೆರಳುವ ರಸ್ತೆ ಕೂಡ ನದಿ ನೀರಿನಿಂದ ಆವೃತವಾಗಿದೆ. ಇದನ್ನು ಓದಿ: ಬಣ್ಣದ ಓಕುಳಿಯಲ್ಲಿ ಕಂಗೊಳಿಸುತ್ತಿರುವ ಟಿಬಿ ಡ್ಯಾಂ – ಒಮ್ಮೆ ನೀವು ನೋಡಿ
ಸದ್ಯ ಜಲಾಶಯಕ್ಕೆ 57,285 ಒಳಹರಿವು ಇದ್ದು, 34,147 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ. 97.59 ಟಿಎಂಸಿ ನೀರು ಶೇಖರಣೆಯಾಗಿದ್ದು, ನಾಳೆ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟುಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಸಚಿವ ಡಿ ಕೆ ಶಿವಕುಮಾರ್ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನೀರು ಬಿಡುವ ಸಾಧ್ಯತೆಯಿದೆ. ಹೀಗಾಗಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಜಿಲ್ಲಾಡಳಿತ ಸೂಚಿಸಿದೆ. ಇದನ್ನು ಓದಿ: ಹಂಪಿಯ ಶ್ರೀ ಪುರಂದರದಾಸ ಮಂಟಪ ಮುಳುಗಡೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv