ಬೆಂಗಳೂರು: ಪಕ್ಷಕ್ಕೆ ವೋಟ್ ಹಾಕಿಲ್ಲ. ಹೀಗಾಗಿ ನೀರು ಬಿಡಬೇಡಿ ಎಂದಿದ್ದಾರೆ ಅನ್ನೋ ಗಂಭೀರ ಆರೋಪವೊಂದು ಮೈತ್ರಿ ಸರ್ಕಾರದ ಕಾಂಗ್ರೆಸ್ ಶಾಸಕನ ವಿರುದ್ಧ ಕೇಳಿಬಂದಿದೆ.
ಯಶವಂತಪುರ ಶಾಸಕ ಎಸ್.ಟಿ ಸೋಮ್ ಶೇಖರ್ ವಿರುದ್ಧ ಈ ಆರೋಪ ಕೇಳಿಬರುತ್ತಿದೆ. ಹೇರೋಹಳ್ಳಿ ವಾರ್ಡ್ ಏರಿಯಾದ ಜನ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಮಾಡಿಲ್ಲ. ಹೀಗಾಗಿ ಆ ಏರಿಯಾಗೆ ನೀರು ಬಿಡಬೇಡಿ ಅಂತ ಶಾಸಕರು ಕಾರ್ಪೋರೇಟರ್ ರಾಜಣ್ಣಗೆ ತಿಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
Advertisement
ಹೆರೋಹಳ್ಳಿ ವಾರ್ಡ್ ನ ಏಕದಂತ ಬಡಾವಣೆಗೆ ಕಳೆದು ಐದು ತಿಂಗಳಿಂದ ನೀರಿನ ಪೂರೈಕೆ ಇಲ್ಲ. ಈ ಬಡಾವಣೆಯ ಜನ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಶಾಸಕ ಎಸ್.ಟಿ ಸೋಮ್ ಶೇಖರ್ ಮತ್ತು ಕಾಂಗ್ರೆಸ್ ಕಾರ್ಪೋರೇಟರ್ ನೀರು ಬಿಡುತ್ತಿಲ್ಲ ಎಂದು ಈ ಭಾಗದ ಜನರು ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ.
Advertisement
Advertisement
ಈ ಆರೋಪ ಕೇಳಿ ಬರುತ್ತಿದ್ದಂತೆಯೇ ಕಾರ್ಪೋರೇಟರ್ ರಾಜಣ್ಣ ಇದನ್ನು ತಳ್ಳಿ ಹಾಕಿದ್ದು, ಈ ಭಾಗದಲ್ಲಿ ಇರುವ ಬಿಜೆಪಿ ಮತ್ತು ಜೆಡಿಎಸ್ ಅವರು ಸುಮ್ ಸುಮ್ನೆ ಆರೋಪ ಮಾಡುತ್ತಿದ್ದಾರೆ. ನನಗೆ ನಮ್ಮ ಶಾಸಕರು ಬೈದಿಲ್ಲ. ನಮ್ಮ ಆತ್ಮಾವಲೋಕನ ಸಭೆಯಲ್ಲಿ ಜನರಿಗೆ ಸ್ಪಂದಿಸು ಅಂತಾ ಹೇಳಿದ್ದಾರೆ. ಆದ್ರೆ ಇದನ್ನು ರಾಜಕೀಯ ಲೀಡರ್ ಗಳು ತಪ್ಪು ಅರ್ಥ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಇದೇ ವೇಳೆ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ಈ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ನಾಲ್ಕು ತಿಂಗಳಿನಿಂದಲೂ ನೀರಿಲ್ಲ. ಕಾವೇರಿ ಪೈಪ್ ಅಳವಡಿಸಲಾಗುತ್ತಿದೆ. ಅದಕ್ಕೆ ಹದಿನೈದು ದಿನಕ್ಕೊಮ್ಮೆ ನಾನೇ ಟ್ಯಾಂಕರ್ ಮೂಲಕ ನೀರನ್ನ ಏರಿಯಾಗಳಿಗೆ ಪೂರೈಕೆ ಮಾಡುತ್ತಿದ್ದೇನೆ. ಆದರೆ ಸರಿಯಾಗಿ ಟ್ಯಾಂಕರ್ ಗಳಲ್ಲಿ ನೀರು ಬರುತ್ತಿಲ್ಲ ಅಂತ ಜನ ಆರೋಪ ಮಾಡುತ್ತಿದ್ದಾರೆ ಅಂತ ಕಾರ್ಪೋರೇಟರ್ ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ ಹೆರೋಹಳ್ಳಿ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಅವರಿಗೆ 183 ಮತ, ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡರಿಗೆ 399 ಮತ ಹಾಗೂ ಬಿಜೆಪಿಯ ಅಭ್ಯರ್ಥಿ ಜಗ್ಗೇಶ್‍ಗೆ 129 ವೋಟ್ ಬಿದ್ದಿತ್ತು. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಜನ ವೋಟ್ ಮಾಡಿದ್ದಾರೆ. ಕಾಂಗ್ರೆಸ್ಸಿಗೆ ಕಡಿಮೆ ಮತ ಬಿದ್ದಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews