ಗದಗ: ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ (Gims Hospital Gadag) ನೀರಿನ ಬರದ ಬಿಸಿ ರೋಗಿಗಳಿಗೂ ತಟ್ಟಿದೆ. ಅದರಲ್ಲೂ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆನಲ್ಲೂ ನೀರಿಗಾಗಿ ಪರದಾಡುವಂತಾಗಿದೆ.
ಆಸ್ಪತ್ರೆಯಲ್ಲಿ ನೀರಿಲ್ಲದಕ್ಕೆ ರೋಗಿಗಳು, ಬಾಣಂತಿಯತು, ಶಿಶುಗಳು ಪರಿಪಾಟು ಕೇಳ ತೀರದಾಗಿದೆ. ಬಾಣಂತಿ ಹಾಗೂ ಶಿಶುಗಳಿಗೆ ಬಿಸಿ ನೀರು ಅವಶ್ಯಕ. ಆದ್ರೆ ಅಲ್ಲಿ ಲೀಟರ್ ತನ್ನಿರು ಸಹ ಸಿಗ್ತಿಲ್ಲ. 1 ಲೀಟರ್ ನಿಂದ ಹಿಡಿದು 20 ಲೀಟರ್ ಕ್ಯಾನ್ ನಲ್ಲಿ ನೀರು ಹಣ ಕೊಟ್ಟು ತರುತ್ತಿದ್ದಾರೆ. ಹೊಟೆಲ್ ಗಳಲ್ಲಿ ಹಣ ಕೊಟ್ಟು ನೀರು ತರುವ ಸ್ಥಿತಿ ರೋಗಿಗಳಿಗೆ ಎದುರಾಗಿದೆ.
ಆಸ್ಪತ್ರೆಯಲ್ಲಿ ಮಿತವ್ಯಯವಾಗಿ ನೀರು ಬಿಡ್ತಿದ್ದಾರೆ. ಇತ್ತ ಕಾಲೇಜ್ ನಲ್ಲೂ ನೀರಿಲ್ಲ. ಜಿಮ್ಸ್ ಗೆ ಸಪ್ಲಾಯ್ ಆಗುವ 24/7 ನೀರು ಪೂರೈಕೆ ಆಗ್ತಿಲ್ಲ. ಜಿಮ್ಸ್ ವ್ಯಾಪ್ತಿಯ 6 ಬೋರವೆಲ್ ಪೈಕಿ 4 ಬೋರವೆಲ್ ಬಂದ್ ಬಂದ್ ಆಗಿವೆ. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗ್ತಿದೆ. ಅದು ಕೂಡಾ ಸರಿಯಾಗಿ ಆಗ್ತಿಲ್ಲ. ಈ ಎಲ್ಲದರಿಂದ ರೋಗಿಗಳು ಪರದಾಡುತ್ತಿದ್ದಾರೆ, ಅಧಿಕಾರಿಗಳು ಮಾತ್ರ ಕೈ ಚೆಲ್ಲಿ ಕೂತಂತಿದೆ.
ಕುಡಿಯುವ ನೀರಿಗಾಗಿ ಜನಾಕ್ರೋಶ: ಇಷ್ಟು ಮಾತ್ರವಲ್ಲದೇ ಕುಡಿಯುವ ನೀರಿಗಾಗಿ ಜನಾಕ್ರೋಶ ಎದ್ದಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿಯಲ್ಲಿರುವ ಗ್ರಾಮ ಪಂಚಾಯತ್‍ಗೆ ಮುತ್ತಿಗೆ ಹಾಕಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಶವ ಪತ್ತೆ
ಸವಡಿ ಗ್ರಾಮ ಪಂಚಾಯತ್ ಕಳೆದ 20 ದಿನಗಳಿಂದ ನೀರು ಪೂರೈಸಿಲ್ಲ. ಹೀಗಾಗಿ ಪಿಡಿಓ, ಸಿಬ್ಬಂದಿ, ಜನಪ್ರತಿನಿಧಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯರು, ಮಕ್ಕಳು, ಪುರುಷರು ಖಾಲಿ ಕೊಡಗಳೊಂದಿಗೆ ಗ್ರಾ.ಪಂ ಗೆ ಮುತ್ತಿಗೆ ಹಾಕಿದ್ದಾರೆ.
ಮೊದಲು ಇತರೆ ಬಳಕೆಗೆ ಫ್ಲೋರೈಡ್ ಹಾಗೂ ಗಡಸು ನೀರನ್ನಾದ್ರೂ ಬಿಡುತ್ತಿದ್ದರು. ಈಗ ಯಾವ ಕಲುಷಿತ ನೀರೂ ಸಹ ಪೂರೈಸುತ್ತಿಲ್ಲ ಅಂತ ಜನ ಆರೋಪ ಮಾಡುತ್ತಿದ್ದಾರೆ. ಜೊತೆಗೆ ಸಮರ್ಪಕ ನೀರು ಪೂರೈಸದಕ್ಕೆ ಖಾಲಿ ಕೊಡಗಳು ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಡಿಸಿ, ಜಿ.ಪಂ ಸಿ.ಇ.ಓ, ತಹಶೀಲ್ದಾರ್ ಬರುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.