ಬೆಂಗಳೂರಿನಲ್ಲಿ ನೀರಿನ ಸಮಸ್ಯೆ- ಸರ್ಕಾರಕ್ಕೆ ತೇಜಸ್ವಿ ಸೂರ್ಯ ಎಚ್ಚರಿಕೆ

Public TV
2 Min Read
Tejasvi Surya

ಬೆಂಗಳೂರು: ಸಿಲಿಕಾನ್ ಸಿಟಿಯ ನೀರಿನ ಸಮಸ್ಯೆ ಕುರಿತು ವಾರದೊಳಗೆ ಕ್ರಮ ತೆಗೆದುಕೊಳ್ಳದಿದ್ರೆ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುವುದಾಗಿ ಸಂಸದ ತೇಜಸ್ವಿ ಸೂರ್ಯ ಎಚ್ಚರಿಕೆ ನೀಡಿದ್ದಾರೆ.

ಸಿಲಿಕಾನ್ ಸಿಟಿಯ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ತೇಜಸ್ವಿಸೂರ್ಯ (Tejasvi Surya) ಜಲಮಂಡಳಿ ಛೇರ್ಮನ್ ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ನೀರಿನ ಅಭಾವ ಬರುತ್ತೆ ಅಂತಾ ಗೊತ್ತಿದ್ರೂ ಕ್ರಮ ಕೈಗೊಳ್ಳಲಿಲ್ಲ. ಈಗ ಟ್ಯಾಂಕರ್ ಗಳನ್ನ ಸುಪರ್ದಿಗೆ ತಗೋತಿವೆ ಅಂತಾರೆ. ಆದರೆ ಬರೀ ಸಭೆಗಳಿಂದ ಮಾಧ್ಯಮ ಹೇಳಿಕೆಯಿಂದ ಸಮಸ್ಯೆ ಬಗೆಹರಿಯಲ್ಲ. ಇನ್ನೊಂದು ವಾರದೊಳಗೆ ಸರ್ಕಾರ ತಾತ್ಕಾಲಿಕ ಪರಿಹಾರ ನೀಡಬೇಕು. ವಾರದೊಳಗೆ ಕ್ರಮ ತೆಗೆದುಕೊಳ್ಳದಿದ್ರೆ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡ್ತೀವೆ. ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ನಾಯಕರು ಪ್ರತಿಭಟಿಸುತ್ತೇವೆ ಎಂದರು.

WATER PROBLEM

ನೀರಿನ ಸಮಸ್ಯೆಗೆ (Water Problem In Bengaluru) ಶಾಶ್ವತ ಪರಿಹಾರ ಏನು ಅನ್ನೋದನ್ನು ಹೇಳಬೇಕು. ಸರ್ಕಾರ ನೀರಿನ ಸಮಸ್ಯೆಗೆ ಏನ್ ಮಾಡ್ತಿದೆ ಅಂತಾ ಜನರಿಗೆ ತಿಳಿಸಬೇಕು. ಇಲ್ಲದಿದ್ರೆ ಪ್ರತಿಭಟನೆ ನಡೆಸಿ ಸರ್ಕಾರವನ್ನ ಎಚ್ಚರಿಸುತ್ತೇವೆ. ವಾಣಿಜ್ಯ ಉದ್ದೇಶಕ್ಕೆ ಟ್ರೀಟೆಡ್ ವಾಟರ್ ಕೊಡಲಿ. ಅಪಾರ್ಟ್ ಮೆಂಟ್ ಗಳನ್ನೇ ಗಮನಿಸೋದು ಬಿಟ್ಟು ಜನರಿಗೆ ನೀರು ಕೊಡಲಿ. ಬಿಬಿಎಂಪಿಯಿಂದ ಟ್ಯಾಂಕರ್ ಕೊಡ್ತೀವೆ ಅಂದಿದ್ರು. ಇದುವರೆಗೂ ಒಂದು ಏರಿಯಾಗೂ ಒಂದು ಹನಿ ನೀರು ಕೊಟ್ಟಿಲ್ಲ. ಟ್ಯಾಂಕರ್ ಗಳನ್ನ ವಶಕ್ಕೆ ಪಡೆದ್ರೆ ಜನರಿಗೆ ಸಮಸ್ಯೆಯಾಗುತ್ತೆ. ಸರ್ಕಾರ ಪರಿಹಾರ ಕೊಡೋ ಬದಲು ಸಮಸ್ಯೆ ಸೃಷ್ಟಿಸುತ್ತಿದೆ. ಸರ್ಕಾರದ ವಿರುದ್ಧ ಸಂಸದರು ಕಿಡಿಕಾರಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ವಿಚಾರಕ್ಕೆ ಪ್ರತಿಕ್ರಿಯಿಸಿ, ಫ್ರೀಹ್ಯಾಂಡ್ ಕೊಟ್ಟು ಪೊಲೀಸ್ರಿಗೆ ತನಿಖೆಗೆ ಅವಕಾಶ ಕೊಡಬೇಕು. ಆರೋಪಿಗಳ ಪರವಾಗಿ ವಕೀಲರಾಗಿ ಕಾಂಗ್ರೆಸ್ ಪಾರ್ಟಿಯವರು ಯಾಕೆ ಬರುತ್ತಾರೆ. ಪಾಕ್ ಪರ ಘೋಷಣೆ ಕೇಸ್‍ನಲ್ಲಿ ಕಾಂಗ್ರೆಸ್‍ನವರು ಮಾಧ್ಯಮದವರ ಮೇಲೆ ಗೂಬೆಕೂರಿಸಿದ್ರು. ಬಾಂಬ್ ಬ್ಲಾಸ್ಟ್ ಕೇಸ್‍ನಲ್ಲಿ ರೈವರ್ರಿ ಅಂತಾ ಹೇಳಿದ್ರು. ಇದು ಏನ್ ಸಿನಿಮಾ ಕಥೆನಾ..?. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಂಸದರು ಸಿಡಿಮಿಡಿಗೊಂಡರು.  ಇದನ್ನೂ ಓದಿ: ದೇಶದ್ರೋಹಿಗಳಿಗೂ, ಕೈ ನಾಯಕರಿಗೂ ಅಪ್ಪುಗೆಯ ನಂಟಿನ ಕಾರಣ FSL ವರದಿ ವಿಳಂಬ: ಸಿ.ಟಿ.ರವಿ

WATER PROBLEM 1

ಸರ್ಕಾರ ಯಾಕೆ ಇಂತಹ ಘಟನೆಗಳಿಗೆ ವಕೀಲರಂತಾಗ್ತಿದೆ. ತನಿಖೆಗೆ ಮೊದಲೇ ಯಾಕೆ ಪರ ವಹಿಸಿಕೊಂಡು ಮಾತಾಡ್ತಿದೆ. ಪಾಕಿಸ್ತಾನ್ ಜಿಂದಾಬಾದ್ ಅಂದಾಗಲೂ ಸಮರ್ಥನೆ ಮಾಡಿಕೊಂಡರು. ಬಾಂಬ್ ಬ್ಲಾಸ್ಟ್ ಗೂ ಬೇರೆ ಬೇರೆ ಹೇಳಿಕೆ ಕೊಟ್ಟರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನಿಖೆಗೆ ಪೆÇಲೀಸರಿಗೆ ಫ್ರೀ ಹ್ಯಾಂಡ್ ಕೊಡಲಿ. ಅದು ಬಿಟ್ಟು ವ್ಯಾಪಾರದ ದ್ವೇಷ ಅಂತಾ ಕತೆ ಹೇಳಬಾರದು. ಸರ್ಕಾರ ಯಾಕೆ ಇಂತ ಘಟನೆಗೆ ಸಮರ್ಥನೆ ಕೊಡುತ್ತೆ ಗೊತ್ತಿಲ್ಲ. ಎನ್‍ಐಎ ಸದ್ಯ ಸಾರ್ವಜನಿಕರ ಸಹಾಯ ಕೇಳಿದೆ. ಜನರು ಸುಳಿವು ಸಿಕ್ಕರೇ ಸಹಕರಿಸಬೇಕಿರೋದು ಕರ್ತವ್ಯ. ಇಂತ ಘಟನೆಗಳ ಬಗ್ಗೆ ಕೂಲಂಕುಶ ತನಿಖೆಯಾಗಲಿ ಎಂದು ಆಗ್ರಹಿಸಿದರು.

Share This Article