ಹಾಸನ: ಹೆಚ್ಚು ಮಳೆಯಾಗದ ಕಾರಣ ಹಾಸನ ನಗರ (Hasana) ಪ್ರದೇಶದ ನಿವಾಸಿಗಳಿಗೆಈಗ ನೀರಿನ ಸಮಸ್ಯೆ ಎದುರಾಗುತ್ತಿದೆ.
ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ (Hemavati Dam) ನಗರ ಪ್ರದೇಶಕ್ಕೆ ನೀರು (Drinking Water) ಪೂರೈಕೆ ಮಾಡುವ ಕೊಳವೆ ಪೈಪ್‌ನಿಂದ ಕೆಳಮಟ್ಟಕ್ಕೆ ನೀರು ಕುಸಿದಿದೆ. ಇದರಿಂದಾಗಿ ಹಾಸನ ನಗರ ನೀರು ಸರಬರಾಜು ಯೋಜನೆಯ ಕೆಳಮಟ್ಟದ ನೀರೆತ್ತುವ ಯಂತ್ರಗಾರಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದೆ. ಇದನ್ನೂ ಓದಿ: ಜೆಡಿಎಸ್ ಜೊತೆ ಮೈತ್ರಿಗೆ ಹೈಕಮಾಂಡ್‌ಗೆ ಒಲವು, ಕೆಲ ನಾಯಕರಿಂದ ವಿರೋಧ
Advertisement
Advertisement
ಮಳೆ ಕೊರತೆಯಿಂದ ಈ ಬಾರಿ ಹೇಮಾವತಿ ಜಲಾಶಯ ಭರ್ತಿಯಾಗಿಲ್ಲ. ಇದರ ನಡುವೆಯೂ ನಾಲೆಗಳಿಗೆ ಹಾಗೂ ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಹೇಮಾವತಿ ನದಿ ನೀರು ಖಾಲಿಯಾಗುತ್ತಿದ್ದು, ಕುಡಿಯುವ ನೀರು ಪೂರೈಕೆ ಮಾಡುವ ನೀರಿನ ಪೈಪ್‌ನಿಂದ ಕೆಳಮಟ್ಟಕ್ಕೆ ನೀರು ಕುಸಿದಿದೆ.
Advertisement
ಮುಂದಿನ ದಿನಗಳಲ್ಲಿ ನಗರ ಪ್ರದೇಶಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
Advertisement
Web Stories