ರಾಯಚೂರು: ಜಿಲ್ಲೆಯಲ್ಲಿ ಶುದ್ಧೀಕರಣ ಘಟಕವಿದ್ದರೂ ನೀರಿನ ಸಮಸ್ಯೆಯಿರುವುದರಿಂದ ಪರಿಸ್ಥಿತಿಯನ್ನು ಪರಿಶೀಲಿಸಲು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು (NS Bosaraju) ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದು ಸಾಮಾನ್ಯ. ಆದರೆ ಜಿಲ್ಲಾ ಕೇಂದ್ರದಲ್ಲಿ ನೀರಿನ ಶುದ್ಧೀಕರಣ ಘಟಕವಿದ್ದರೂ ನಗರದ ನಿವಾಸಿಗಳಿಗೆ ಕಲುಷಿತ ನೀರು ಕುಡಿಯುವ ಕೆಟ್ಟ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಒಂದೆಡೆ ನೀರಿನ ಸಮಸ್ಯೆ, ಇನ್ನೊಂದೆಡೆ ಶುದ್ದ ಕುಡಿಯುವ ನೀರಿನ ಸಮಸ್ಯೆಗೆ ಜನ ಬೇಸಿಗೆ ಆರಂಭದಲ್ಲೇ ಬೇಸತ್ತು ಹೋಗಿದ್ದಾರೆ.ಇದನ್ನೂ ಓದಿ:Ind vs Pak ಬ್ಲಾಕ್‌ಬಸ್ಟರ್ ಪಂದ್ಯದ VIP ಟಿಕೆಟ್ 3.50 ಕೋಟಿಗೆ ಮಾರಿಕೊಂಡ ಪಿಸಿಬಿ ಅಧ್ಯಕ್ಷ
Advertisement
Advertisement
ರಾಯಚೂರು ನಗರದ ಹೊರವಲಯದ ರಾಂಪೂರ ಬಳಿಯ ಶುದ್ಧೀಕರಣ ಘಟಕ ವಿದ್ಯುತ್ ಸಮಸ್ಯೆಯಿಂದ ನೀರಿನ ಶುದ್ಧೀಕರಣವನ್ನೇ ನಿಲ್ಲಿಸಿದೆ. ನಿರಂತರ ವಿದ್ಯುತ್ ಎಕ್ಸ್ಪ್ರೆಸ್ ಲೈನ್ ಇಲ್ಲದ ಕಾರಣ ಆಗಾಗ ವಿದ್ಯುತ್ ಸಮಸ್ಯೆ ಎದುರಾಗುತ್ತಲೇ ಇದ್ದು, ನೀರಿನ ಶುದ್ಧೀಕರಣ ನಿಂತುಹೋಗಿದೆ. ಕೆರೆಯಲ್ಲಿ ನೀರಿದ್ದರೂ ಶುದ್ಧೀಕರಣವಿಲ್ಲದೆ ಸುಮಾರು 13 ರಿಂದ 18 ವಾರ್ಡ್ಗಳ ನಿವಾಸಿಗಳು ಅಶುದ್ಧ ನೀರನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಘಟಕದಲ್ಲಿ ಹೆಸರಿಗೆ ಮಾತ್ರ ಪ್ರಯೋಗಾಲಯವಿದ್ದು, ನೀರಿನ ಪರೀಕ್ಷೆಯೇ ನಡೆಯುವುದಿಲ್ಲ. ಹೀಗಾಗಿ ಶುದ್ಧೀಕರಣ ಘಟಕದ ಸಂಪ್‌ನಿಂದ ನೇರವಾಗಿ ಓವರ್ ಹೆಡ್ ಟ್ಯಾಂಕ್, ಅಲ್ಲಿಂದ ಮನೆಗಳಿಗೆ ನೀರು ಸರಬರಾಜಾಗುತ್ತಿದೆ.
Advertisement
ವಿದ್ಯುತ್ ಇಲ್ಲದೆ ಶುದ್ಧೀಕರಣ ಘಟಕ ಬಂದ್ ಆಗಿರುವದರಿಂದ ಸಚಿವ ಬೋಸರಾಜು ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡರು. ಬೇಸಿಗೆಯಲ್ಲಿ ಜನರಿಗೆ ನೀರಿನ ತೊಂದರೆಯಾಗದಂತೆ ಕೂಡಲೇ ಸಮಸ್ಯೆಗಳನ್ನ ಬಗೆಹರಿಸಿಕೊಂಡು ಶುದ್ಧ ಕುಡಿಯುವ ನೀರನ್ನ ನಗರಕ್ಕೆ ಸರಬರಾಜು ಮಾಡುವಂತೆ ಆಗ್ರಹಿಸಿದರು.
Advertisement
ಈ ಹಿಂದೆ ನಗರದಲ್ಲಿ ಕಲುಷಿತ ನೀರು ಕುಡಿದು ಏಳು ಜನ ಸಾವನ್ನಪ್ಪಿದ್ದ ಘಟನೆ ಜನಮಾನಸದಲ್ಲಿ ಹಾಗೇ ಉಳಿದಿದ್ದು, ಈಗ ಪುನಃ ಬೇಸಿಗೆಯಲ್ಲಿ ಅಶುದ್ಧ ನೀರನ್ನೆ ಕುಡಿಯುವ ಪರಸ್ಥಿತಿ ಎದುರಾಗಿರುವುದಕ್ಕೆ ಜನ ಹೆದರುತ್ತಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಬ್ರಿಟಿಷರ ಮೆಂಟಾಲಿಟಿ ಸಿದ್ದರಾಮಯ್ಯನವರದ್ದು – ನೆಟ್ಟಗೆ ಆಡಳಿತ ಮಾಡಿ, ಇಲ್ಲವೇ ರಾಜೀನಾಮೆ ಕೊಡಿ: ಶೋಭಾ ಕರಂದ್ಲಾಜೆ