ಬಾಗಲಕೋಟೆ: ಪೆಟ್ರೋಲ್, ಡೀಸೆಲ್ ಗೆ ನೀರು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿರುವುದು ತಿಳಿದ ಜನರು ಪೆಟ್ರೋಲ್ ಬಂಕ್ ಎದುರು ಜಮಾಯಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಕ್ರಾಸ್ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನನ್ನು ಜಮಖಂಡಿ ಮೂಲದ ಸದಾನಂದ್ ಪಾಟೀಲ್ ನಡೆಸುತ್ತಿದ್ದಾರೆ. ಇಲ್ಲಿ ಪೆಟ್ರೋಲ್, ಡಿಸೇಲ್ ಹಾಕಿಸಿಕೊಂಡ ಜನರು ಲೀಟರ್ ಗೆ ಅರ್ಧದಷ್ಟು ನೀರು ಮಿಶ್ರಣ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ
ಈ ಹಿನ್ನೆಲೆ 40ಕ್ಕೂ ಹೆಚ್ವು ವಾಹನಗಳು ಸೀಜ್ ಆಗಿದ್ದು, ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಅದು ಅಲ್ಲದೇ ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಜಗಳವನ್ನು ಮಾಡುತ್ತಿದ್ದಾರೆ. ಈ ಬಂಕ್ ನಲ್ಲಿ ಸುಮಾರು ದಿನಗಳಿಂದ ನೀರು ಮಿಕ್ಸ್ ಮಾಡಿ ಪೆಟ್ರೋಲ್ ಹಾಗೂ ಡೀಸೆಲ್ ಹಾಕ್ತಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಕ್ಯಾತಿನಕೊಪ್ಪ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿತ್ತು
ಈ ಪರಿಣಾಮ ಇಂಡಿಯನ್ ಆಯಿಲ್ ಕಂಪನಿಯ ಅಧಿಕಾರಿಗಳ ಜೊತೆ ಜನರು ವಾಗ್ವಾದ ನಡೆಸುತ್ತಿದ್ದಾರೆ.