ಹಾಸನ: ಜಿಲ್ಲೆಯ ಜೀವನದಿ ಹಾಗೂ ಕಾವೇರಿ ಕೊಳ್ಳದ ಪ್ರಮುಖ ಜಲಾಶಯವೂ ಆಗಿರುವ ಹೇಮಾವತಿಯಲ್ಲಿ (Hemavati Reservoir) ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ರೈತರಿಗೆ ಹಾಗೂ ಹಾಸನ ನಗರವಾಸಿಗಳಿಗೆ ಆತಂಕ ಎದುರಾಗಿದೆ.
ಇನ್ನೂ 18 ದಿನಗಳ ಕಾಲ KRSನಿಂದ ತಮಿಳುನಾಡಿಗೆ (TamilNadu) ನೀರು ಹರಿಸುವಂತೆ ಆದೇಶ ಬಂದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ ಹೇಮಾವತಿ ನದಿಯಿಂದ ಪ್ರತಿದಿನ 1,300 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ಹೇಮಾವತಿ ನದಿಯ ಒಡಲು ಬರಿದಾಗುತ್ತಿದೆ.
ಕಳೆದ ಎರಡು ತಿಂಗಳ ಕಾಲ ನಾಲೆಗೆ ನೀರು ಹರಿಸಿದ್ದರಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಸದ್ಯ ನಾಲೆಯಲ್ಲಿ ನೀರು ನಿಲ್ಲಿಸಲಾಗಿದ್ದು, ಇನ್ನೂ ಮೂರ‍್ನಾಲ್ಕು ತಿಂಗಳ ಕಾಲ ಭತ್ತಕ್ಕೆ ನೀರಿನ ಅವಶ್ಯಕತೆ ಇದೆ. ಆದರೆ ಹೇಮಾವತಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ 2ನೇ ಹಂತದಲ್ಲಿ ನಾಲೆಗಳಿಗೆ ನೀರು ಬಿಡುವ ಸಾಧ್ಯತೆ ಕಡಿಮೆ ಇದೆ. ಇದನ್ನೂ ಓದಿ: ಪ್ಲಾಟ್‍ಫಾರ್ಮ್ ಮೇಲೆ ರೈಲು ಏರಿದ ಪ್ರಕರಣಕ್ಕೆ ಟ್ವಿಸ್ಟ್ – ಕುಡಿದ ಮತ್ತಿನಲ್ಲಿ ಸಹಾಯಕನ ಎಡವಟ್ಟು
18 TMC ನೀರಿನಲ್ಲಿ 12 ಟಿಎಂಸಿ ನೀರನ್ನು ಬಳಸಬಹುದಾಗಿದೆ. ಹಾಸನ ನಗರಕ್ಕೆ (Hassan City) ಇನ್ನೂ 7-8 ತಿಂಗಳ ಕಾಲ ಕುಡಿಯುವ ನೀರು ಪೂರೈಕೆ ಮಾಡಬೇಕಾಗಿದ್ದು ಮಳೆ ಸಂಪೂರ್ಣ ಕ್ಷೀಣಿಸಿರುವುದರಿಂದ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಆತಂಕ ಉಂಟಾಗಿದೆ. ಇದನ್ನೂ ಓದಿ: Asian Games 2023: ಈಕ್ವೆಸ್ಟ್ರೀಯನ್‌ನಲ್ಲಿ ಭಾರತಕ್ಕೆ ಕಂಚು – ಇತಿಹಾಸ ನಿರ್ಮಿಸಿದ ಅನುಷ್
ಸೆಪ್ಟೆಂಬರ್ 29 ರಂದು (ಶುಕ್ರವಾರ) ಕಾವೇರಿ ನೀರಿಗಾಗಿ ಕರ್ನಾಟಕ ಬಂದ್‌ಗೆ (Karnataka Bandh) ಕರೆ ಕೊಟ್ಟಿದ್ದು ಹಾಸನ ಜಿಲ್ಲೆಯಲ್ಲೂ ಬಂದ್ ಮಾಡಲು ಹಲವು ಸಂಘಟನೆಗಳು ನಿರ್ಧರಿಸಿವೆ. ಜೊತೆಗೆ ಹೇಮಾವತಿ ನದಿಯಿಂದ ಕೆಆರ್‌ಎಸ್‌ಗೆ ಹರಿಸಲಾಗುತ್ತಿರುವ ನೀರು ನಿಲ್ಲಿಸುವಂತೆಯೂ ಆಗ್ರಹಗಳು ಕೇಳಿಬಂದಿವೆ.
Web Stories