ಕುಸಿದ ಕಬಿನಿ ಡ್ಯಾಂ ನೀರಿನ ಮಟ್ಟ – ಬೆಂಗಳೂರು, ಮೈಸೂರಿಗೆ ಹೆಚ್ಚಾಗಲಿದೆ ನೀರಿನ ಸಮಸ್ಯೆ

Public TV
1 Min Read
Water level dips at Kabini Dams

ಮೈಸೂರು: ಹೆಚ್.ಡಿ. ಕೋಟೆ (HD Kote) ತಾಲೂಕಿನ ಕಬಿನಿ ಜಲಾಶಯದಲ್ಲಿ (Kabini Dam) ನೀರಿನ ಮಟ್ಟ ದೊಡ್ಡ ಮಟ್ಟದಲ್ಲಿ ಕುಸಿಯುತ್ತಿದೆ.

ಕಬಿನಿ ಜಲಾಶಯದಲ್ಲಿ ಈಗ ಸದ್ಯ 12 ಟಿಎಂಸಿ ನೀರಿದ್ದು ಇದರಲ್ಲಿ ಕುಡಿಯಲು‌ ಕೇವಲ 8 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಉಳಿದ 4 ಟಿಎಂಸಿ ನೀರು ಡೆಡ್ ಸ್ಟೊರೇಜ್. ಕಬಿನಿ ಜಲಾಶಯದಿಂದ ಬೆಂಗಳೂರು, ಮೈಸೂರಿಗೆ ನೀರು ಪೂರೈಕೆ ಆಗುತ್ತಿದೆ. ಇದನ್ನೂ ಓದಿ: TMC ಪ್ರಭಾವಿ ಶೇಖ್ ಷಹಜಹಾನ್ ಬಂಧನಕ್ಕೆ ಕೋಲ್ಕತ್ತಾ ಹೈಕೋರ್ಟ್ ಆದೇಶ

 

ಜಲಾಶಯದಿಂದ ಕುಡಿಯುವ ನೀರಿಗಾಗಿ ಈಗ 500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು ಬೆಂಗಳೂರಿಗೆ 300 ಕ್ಯೂಸೆಕ್, ಮೈಸೂರು, ಚಾಮರಾಜನಗರಕ್ಕೆ 200 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.

Share This Article