– ಬಿಬಿಎಂಪಿ ಸರ್ವೇಯಲ್ಲಿ ಇಂಟ್ರೆಸ್ಟಿಂಗ್ ವಿಚಾರ ಬಯಲು
ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಬೀ ಕೇರ್ ಫುಲ್. ಬೆಂಗಳೂರಿನಲ್ಲಿ ಕುಡಿಯುವ ನೀರಿನ (Drinking Water) ಬಗ್ಗೆ ಆತಂಕಕಾರಿ ವಿಚಾರವೊಂದು ಹೊರಬಿದ್ದಿದೆ. ಬಿಬಿಎಂಪಿ (BBMP) ನಡೆಸಿರುವ ಸರ್ವೆಯಲ್ಲಿ ಇಂಟ್ರೆಸ್ಟಿಂಗ್ ವಿಚಾರ ಬಯಲಾಗಿದೆ. ಬೆಂಗಳೂರಿನ 8 ವಲಯಗಳಲ್ಲೂ ಕುಡಿಯಲು ನೀರು ಯೋಗ್ಯವಲ್ಲ. ಬಿಬಿಎಂಪಿ ನಡೆಸಿರೋ ಸರ್ವೆಯಲ್ಲಿ ಯಾವ್ಯಾವ ಏರಿಯಾ ನೀರು ಕಲುಷಿತ ಎಂಬುದರ ಕಂಪ್ಲೀಟ್ ವರದಿ ಇಲ್ಲಿದೆ.
Advertisement
ಹೌದು. ಮುಂಗಾರು ಅವಧಿಯಲ್ಲಿ ನೀರು ಕಲುಷಿತಗೊಳ್ಳೋದು ಸಾಮಾನ್ಯ. ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲೂ ಅತಿಸಾರ ಪ್ರಕರಣಗಳು ಜಾಸ್ತಿ ಆಗ್ತಿವೆ. ಹೀಗಾಗಿ ಬಿಬಿಎಂಪಿ ಕೆಲ ಏರಿಯಾಗಳ ನೀರಿನ ಮಾದರಿಗಳನ್ನ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ರು. ಆ ಪರೀಕ್ಷೆಯಲ್ಲಿ ಕುಡಿಯಲು ಯೋಗ್ಯವಲ್ಲದ ಮಾದರಿಗಳು ಇರೋದು ಪತ್ತೆಯಾಗಿದೆ. 692 ಸ್ಯಾಂಪಲ್‍ಗಳನ್ನ ಸಂಗ್ರಹ ಮಾಡಲಾಗಿತ್ತು. ಅದರಲ್ಲಿ 59 ಎನ್‍ಎಸ್‍ಎಸ್‍ಪಿಪಿ ಅಂತಾ ಗುರುತು ಮಾಡಲಾಗಿದೆ.
Advertisement
Advertisement
ನೀರಿನ ಕಲ್ಮಶಗಳನ್ನ ಪತ್ತೆ ಮಾಡಲು ಆರ್ ಓ ಪ್ಲಾಂಟ್, ಹೋಟೆಲ್‍ಗಳು ಮತ್ತು ಸಾರ್ವಜನಿಕ ಟ್ಯಾಪ್‍ಗಳಿಂದ ಮಾದರಿ ಸಂಗ್ರಹ ಮಾಡಲಾಗಿದೆ. ಅದರಲ್ಲಿ ಕಲ್ಮಶ ಇರೋದು ಪತ್ತೆಯಾಗಿದೆ.
Advertisement
ಈ ಏರಿಯಾಗಳ ನೀರು ಕುಡಿಯಲು ಯೋಗ್ಯವಲ್ಲ: ಬಿಟಿಎಂ ಲೇಔಟ್, ಬಸವನಗುಡಿ, ಚಿಕ್ಕಪೇಟೆ, ಜಯನಗರ, ಪದ್ಮನಾಭನಗರ, ವಿಜಯನಗರ, ಸಿವಿ ರಾಮನ್‍ನಗರ, ಹೆಬ್ಬಾಳ, ಪುಲಕೇಶಿನಗರ, ಚಾಮರಾಜಪೇಟೆ, ಗಾಂಧಿನಗರ, ಮಹಾಲಕ್ಷ್ಮೀಪುರ, ಮಲ್ಲೇಶ್ವರಂ ಹಾಗೂ ರಾಜಾಜಿನಗರದ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ಬಯಲಾಗಿದೆ.
ಈ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕೆಲ ಏರಿಯಾಗಳಲ್ಲಿ ನೀರು ಕಲುಷಿತ ಆಗಿರುವ ಬಗ್ಗೆ ವರದಿಯಾಗಿದೆ. ನೀರನ್ನು ಕ್ಲೋರಿನೇಟ್ ಮಾಡಿ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ವರದಿ ಏನು ಬರುತ್ತೋ ಎಂಬ ಕುತೂಹಲ ಇದೆ. ಆದರೆ ಜನ ನೀರು ಸೇವನೆಯಲ್ಲಿ ಮುನ್ನೆಚ್ಚರಿಕಾ ವಹಿಸಬೇಕು ಎಂದು ಬಿಬಿಎಂಪಿ ಹೇಳಿದೆ.
Web Stories