ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದೆ. ಪ್ಲಾಸ್ಟಿಕ್ ಬಳಕೆ ಪರಿಸರ ಹಾಗೂ ನಿಮ್ಮ ಆರೋಗ್ಯಕ್ಕೆ ಹಾನಿ ಎಂದೇ ಬ್ಯಾನ್ ಮಾಡಿದೆ. ಹೀಗಿರುವಾಗ ಇರುವ ಹಾನಿಕಾರಕ ವಸ್ತುವಿಗೆ ಮತ್ತಷ್ಟು ಹಾನಿಕಾರಕ ಆ್ಯಡ್ ಮಾಡಿರುವ ನೀರನ್ನು ಬಡ ಜನರಿಗೆ ಸಪ್ಲೈ ಮಾಡುತ್ತಿದ್ದಾರೆ. ಅದರಲ್ಲೂ ಟೋಲ್‌ಗಳ ಬಳಿ ಬಸ್ ಪ್ರಯಾಣಿಕರಿಗೆ, ಬಾರ್ ಗಳಲ್ಲಿ, ಪ್ರತಿಭಟನೆಗೆ ಬಂದವರಿಗೆ ಈ ನೀರು ಕೊಡಲಾಗುತ್ತದೆ.
ನಗರದ ಹಲವು ಟೋಲ್‌ಗಳ ಬಳಿ ಬಕೆಟ್‌ಗಳನ್ನು ಬಳಸಿ ಈ ಪಾಕೆಟ್ ನೀರನ್ನು ಮಾರಾಟ ಮಾಡುತ್ತಾರೆ. ಕಡಿಮೆ ಬೆಲೆ ಸಿಗುತ್ತೆ ಎಂದು ಖರೀದಿಸುವವರು ಜಾಸ್ತಿ. ಕಳಪೆ ಬೆಲೆಗೆ ಪ್ಯಾಕೆಟ್ ನೀರು ನೀಡಲಾಗುತ್ತಿದೆ. ಇದು ಅಪಾಯಕಾರಿ ನೀರು. ರೋಗ ತರುವ ನೀರಾಗಿದ್ದು, ಇದರಲ್ಲಿ ಅನುಮಾನ ಇಲ್ಲ. ಕಾರಣ ಈ ಪಾಕೆಟ್ ನೀರಿಗೆ ಅನುಮತಿಯೆ ಇಲ್ಲ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಪ್ರಕಾರ ಐಎಸ್ ಐ ಮಾರ್ಕ್ ಇದ್ದರೆ ಮಾತ್ರ ಪಾಕೆಟ್ ನೀರು ಮಾರಾಟಕ್ಕೆ ಅವಕಾಶವಿದೆ. ಆದರೆ ಈ ಯಾವ ಪಾಕೆಟ್‌ಗೂ ಮಾರ್ಕ್ ಇಲ್ಲ. ಅಷ್ಟೇ ಅಲ್ಲ ಶುದ್ಧವಾಗಿರಬೇಕಾದ ನೀರಿನ ತುಂಬಾ ಹುಳುಗಳೇ ಓಡಾಡುತ್ತೆ.
Advertisement
Advertisement
ಪ್ರತಿನಿಧಿ: ಪಾಕೆಟ್ ಬೇಕಾ ಶಿವಾಜಿನಗರ ಬನ್ನಿ
ವ್ಯಾಪಾರಿ: ನಮ್ಮದು ಕ್ಯಾನ್ ಬಿಸಿನೆಸ್ ಇದೆ. ಈಗ ನೀವು ಬಾರ್ ಗೆ ಹಾಕ್ತಿದ್ದೀರಾ. ನಾವು ಇದನ್ನು ಹಾಕೋಣ ಎಂದು ಕೇಳ್ತಿದ್ದೀವಿ
ಪ್ರತಿನಿಧಿ: ಬ್ಯಾನ್ ಆಗಿದೆ ಅಲ್ವ
ವ್ಯಾಪಾರಿ: ಅದೆಲ್ಲ ಏನಿಲ್ಲ ಬರೀ ಮೂರು ಬೇರೆ ಬೇರೆ ಬ್ಯಾನ್ ಆಗಿದೆ ಅಷ್ಟೇ
ಪ್ರತಿನಿಧಿ: ಇದ್ರಿಂದ ಲಾಭ ಇದೇಯಾ
ವ್ಯಾಪಾರಿ: ಇದ್ರಿಂದ ಲಾಸ್ ಇಲ್ಲ ಲಾಭ ಇದೆ
Advertisement
Advertisement
ಪ್ರತಿನಿಧಿ: ಲೈಸೆನ್ಸ್ ಇಲ್ಲವಾದ್ರೆ ಏನ್ ಮಾಡೋದು
ವ್ಯಾಪಾರಿ: ಇಲ್ಲ ಏನ್ ಆಗಲ್ಲ
ಪ್ರತಿನಿಧಿ: ಅದು ನಮ್ಮದು ಕ್ಯಾನ್ ಬಿಸಿನೆಸ್ ಇದೆ. ಈಗ ಪ್ಲಾಸ್ಟಿಕ್ ವಾಟರ್ ಬಾಟೆಲ್ ಗೆ ನಿಷೇಧ ಇದ್ದರೆ ಎರಡು ಲೈಸೆನ್ಸ್ ಕ್ಯಾನ್ಸಲ್ ಆಗುತ್ತೆ.
ವ್ಯಾಪಾರಿ: ಹಾಗಾ ನೋಡೋಣ
ಪ್ರತಿನಿಧಿ: ಎಷ್ಟಿದು?
ವ್ಯಾಪಾರಿ: ನೋಡಿ ಇದರ ಮೇಲೆ 3 ರೂ ಬರೆದಿದ್ದಾರೆ. 100 ರೂ. ಬೇಕಾದ್ರು ಸಿಗುತ್ತೆ. ಒಂದ್ ಬ್ಯಾಗ್ ನಲ್ಲಿ 100 ಪಾಕೆಟ್ ಇರುತ್ತೆ. 75 ಪೈಸೆ ಹೋಲ್ ಸೆಲ್ ಸಿಗುತ್ತೆ.
ಪ್ರತಿನಿಧಿ: ಎಲ್ಲಿಂದ ಬರುತ್ತೆ
ವ್ಯಾಪಾರಿ: ತಮಿಳುನಾಡಿನಿಂದಲೂ ಈ ಪಾಕೆಟ್ ವಾಟರ್ ಸಿಗುತ್ತೆ
ಪ್ರತಿನಿಧಿ: 30 ದಿನ ಇರುತ್ತಾ
ವ್ಯಾಪಾರಿ: ಇಲ್ಲ ಹಾಕಿದ್ದಾರೆ. ಆದರೆ ನಾವ್ ಬೇಗ ಮಾರಾಟ ಮಾಡಿಬಿಡ್ತಿವಿ
ಪ್ರತಿನಿಧಿ: ಎಣ್ಣೆ ಗಾ ಇದು ತುಂಬಾ ಬಳಕೆ ಆಗುತ್ತಾ?
ವ್ಯಾಪಾರಿ: ಹೌದು. ಅದ್ರು ಪ್ರೊಟೆಸ್ಟ್ಗೂ ಜಾಸ್ತಿ ಆಗುತ್ತೆ.
ಪ್ರತಿನಿಧಿ: ಎಲ್ಲೆಲ್ಲಿ ಹಾಕ್ತಿರಾ
ವ್ಯಾಪಾರಿ: ವಿಧಾನಸೌದಕ್ಕೆಲ್ಲ ಹಾಕ್ತಿನಿ, ಫ್ರೀಡಂಪಾರ್ಕ್ ಹತ್ತಿರನೂ ಹಾಕ್ತಿನಿ
ಪರವಾನಿಗೆ ಎಂದ್ರೇನೆ ಗೊತ್ತಿಲ್ಲ. ಇನ್ನು ಶುದ್ಧೀಕರಣ ಮಾತು ಬಿಡಿ. ಈ ನೀರು ಕಲುಷಿತ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಪಕ್ಕಾ ಆಗಿದೆ. ದೇಶದಲ್ಲಿ ಶುದ್ಧೀಕರಣ ಮಾಡಿರುವ ನೀರು, ಯಾವುದೇ ರೋಗಾಣುಗಳಿಲ್ಲದ ನೀರು ಪೂರೈಕೆಗೆ ಮಾತ್ರ ಅವಕಾಶ ಇದೆ. ಆದರೆ ಲೈಸೆನ್ಸ್ ಇಲ್ಲದೆ ನೂರಾರು ವಹಿವಾಟು ಶುರುವಾಗಿದೆ. ಈ ಸಂಬಂಧ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳಲು ಸಿದ್ಧ ಎಂದು ಹೇಳುತ್ತಿದ್ದಾರೆ.
ಈ ನಿಷೇಧಿತ ಪ್ಲಾಸ್ಟಿಕ್ ನೀರಿನ ಬಗ್ಗೆ ಗಮನ ಹೆಚ್ಚು ಕೊಡಬೇಕಿದೆ ಈ ನೀರು ಕುಡಿಯುವದರಿಂದ ಸಾಂಕ್ರಾಮಿಕ ರೋಗ, ಲಿವರ್ ಸಂಬಂಧಿತ ಕಾಯಿಲೆ ಬರುತ್ತೆ. ಹೆಪಟೈಟಿಸ್ ಸಂಬಂಧಿಯ ಕಾಯಿಲೆ ಕೂಡ ಬರಲಿದೆ.