ಲಕ್ನೋ: ಭವ್ಯವಾಗಿ ನಿರ್ಮಾಣಗೊಳ್ಳುತ್ತಿರುವ ಅಯೋಧ್ಯೆಯ (Ayodhya) ರಾಮ ಮಂದಿರ (Ram Mandir) ಸಿದ್ಧತೆ ಭರ್ಜರಿಯಾಗಿ ಸಾಗಿದೆ. ರಾಮ್‍ಲಲ್ಲಾನ ಅಭಿಷೇಕಕ್ಕೆಂದು ಪಾಕಿಸ್ತಾನ, ಚೀನಾ, ಉಜ್ಬೇಕಿಸ್ತಾನ ಸೇರಿದಂತೆ ವಿವಿಧ ದೇಶಗಳ 155 ನದಿಗಳ ಜಲವು ಅಯೋಧ್ಯೆಗೆ ತಲುಪಿದೆ.
ಈ ಬಗ್ಗೆ ಬಿಜೆಪಿ (BJP) ಮಾಜಿ ಶಾಸಕ ವಿಜಯ್ ಜಾಲಿ ಮಾಹಿತಿ ನೀಡಿದ್ದಾರೆ. ತಾಂಜಾನಿಯಾ, ನೈಜೀರಿಯಾ, ಅಮೆರಿಕ, ಫ್ರಾನ್ಸ್, ಜರ್ಮನಿ, ಬ್ರಿಟನ್, ನೇಪಾಳ, ಭೂತಾನ್, ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದಂತಹ ದೇಶಗಳಿಂದಲೂ ನೀರು ತರಲಾಗಿದೆ. ಇದರ ಜೊತೆಗೆ ಅಂಟಾರ್ಟಿಕಾದಿಂದಲೂ ನೀರು ತರಲಾಗಿದೆ. ಈ ಎಲ್ಲಾ ನದಿಗಳ ನೀರನ್ನು ಏ. 23ರಂದು ಉತ್ತಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ರಾಮಲಲ್ಲಾಗೆ ಜಲಾಭಿಷೇಕ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
Advertisement
Advertisement
ಏಪ್ರಿಲ್ 23ರಂದು ಉತ್ತರ ಪ್ರದೇಶದ ಮಣಿರಾಮ್ ದಾಸ್ ಚಾವ್ನಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರು ಜಲ ಕಲಶವನ್ನು ಪಡೆದ ನಂತರ ಪೂಜಿಸಲಿದ್ದಾರೆ. ವಿಶ್ವದ ವಿವಿಧ ದೇಶಗಳಿಂದ ತಂದಿರುವ ನೀರಿನ ಕಲಶದ ಮೇಲೆ ಆ ದೇಶಗಳ ಹೆಸರು, ಧ್ವಜ ಹಾಗೂ ನದಿಗಳ ಹೆಸರುಗಳ ಸ್ಟಿಕ್ಕರ್‍ಗಳನ್ನು ಹಾಕಲಾಗಿದೆ. ಈ ಕಾರ್ಯಕ್ರಮಕ್ಕೆ ಹಲವು ದೇಶಗಳ ರಾಯಭಾರಿಗಳು ಭಾಗಿಯಾಗಲಿದ್ದಾರೆ ಎಂದರು.
Advertisement
Advertisement
ಪಾಕಿಸ್ತಾನದ ನೀರನ್ನು ಅಲ್ಲಿನ ಹಿಂದೂಗಳು ದುಬೈಗೆ ಕಳುಹಿಸಿದರು. ನಂತರ ಅದನ್ನು ದುಬೈನಿಂದ ದೆಹಲಿಗೆ ತಂದು ನಂತರ ಅಯೋಧ್ಯೆಗೆ ತರಲಾಯಿತು. ಪಾಕಿಸ್ತಾನವಲ್ಲದೆ, ಸುರಿನಾಮ್, ಉಕ್ರೇನ್, ರಷ್ಯಾ, ಕಜಕಿಸ್ತಾನ್, ಕೆನಡಾ ಮತ್ತು ಟಿಬೆಟ್ ಸೇರಿದಂತೆ ಹಲವು ದೇಶಗಳ ನದಿಗಳಿಂದಲೂ ನೀರು ಬಂದಿದೆ. ಇದನ್ನೂ ಓದಿ: ಅಯೋಧ್ಯೆಯ ಬಾಲರಾಮನ ನಿರ್ಮಾಣಕ್ಕೆ ಕರ್ನಾಟಕದ ಕಲ್ಲು
2 ಐಷಾರಮಿ ಹೋಟೆಲ್: 2024ರ ಜನವರಿಯಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಇದಕ್ಕೂ ಮೊದಲೇ ಸರ್ವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲೇ ಅಯೋಧ್ಯೆಯಲ್ಲಿ 2 ಐಷಾರಾಮಿ ಹೋಟೆಲ್‍ಗಳನ್ನು ನಿರ್ಮಿಸಲು ತಾಜ್ ಗ್ರೂಪ್ ಒಪ್ಪಂದಕ್ಕೆ ಸಹಿ ಹಾಕಿದೆ. 5 ಎಕರೆಗಳಲ್ಲಿರುವ ಈ ಹೋಟೆಲ್ ಪ್ರದೇಶವು ಒಂದರಲ್ಲಿ 100 ಕೊಠಡಿಗಳು ಮತ್ತೊಂದರಲ್ಲಿ 120 ಕೋಣೆಗಳನ್ನು ಹೊಂದಿದೆ. ಇದನ್ನೂ ಓದಿ: ಸೈನಿಕರ ವಾಹನದ ಮೇಲೆ ದಾಳಿ ಪ್ರಕರಣ – 12 ಶಂಕಿತರು ವಶಕ್ಕೆ