ಬೆಂಗಳೂರು: ನೂರಾರು ವರ್ಷ ಹಳೆಯ ಪುರಾತನ ಕಾಲದ ಹತ್ತಿ ಮರವೊಂದರಲ್ಲಿ ಇದ್ದಕ್ಕಿದ್ದ ಹಾಗೆ ನೀರು ಬರುತ್ತಿರುದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿರುವ ಘಟನೆ ನೆಲಮಂಗಲ ತಾಲೂಕಿನ ಕೂಲಿಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿರುವ ಸುಮಾರು 200 ವರ್ಷದ ಹಳೆಯ ಪುರಾತನ ಹತ್ತಿ ಮರ ಇದಾಗಿದ್ದು, ಸಾಕಷ್ಟು ವರ್ಷಗಳಿಂದ ಗ್ರಾಮ ದೇವತೆ ಎಂಬ ಭಾವನೆಯಲ್ಲಿ ಗ್ರಾಮಸ್ಥರು ಈ ಮರವನ್ನು ಪೂಜಿಸುತ್ತಿದ್ದರು. ಆದರೆ ಇದಕ್ಕಿದ್ದ ಹಾಗೇ ಮರದಲ್ಲಿ ನೀರು ಬರುತ್ತಿರುವುದರಿಂದ ಆತಂಕಗೊಂಡಿದ್ದಾರೆ. ಮರದಲ್ಲಿ ನೀರು ಬರುತ್ತಿರುವ ಸುದ್ದಿ ತಿಳಿದ ಹಲವರು ಇದನ್ನ ನೋಡಲು ಮರದ ಬಳಿ ಆಗಮಿಸುತ್ತಿದ್ದಾರೆ.
Advertisement
ಈ ಕುರಿತು ಮಾತನಾಡಿರುವ ಗ್ರಾಮಸ್ಥರು, ಕೆಲ ದಿನಗಳ ಹಿಂದೆ ಬೇರೆ ಮರಕ್ಕೆ ಪೂಜೆ ಮಾಡಲು ತೀರ್ಮಾನ ಮಾಡಿದ್ದೆವು. ಹೀಗಾಗಿ ಗ್ರಾಮದೇವತೆ ಈ ರೀತಿ ಕಣ್ಣೀರು ಸುರಿಸುತ್ತ ಅಳಲನ್ನು ತೋಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಘಟನೆ ನಡೆದ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಮರದ ಬಳಿ ಬಂದು ಪೂಜೆ ಸಲ್ಲಿಸಿ ಗ್ರಾಮಕ್ಕೆ ಕೆಡುಕಾಗದಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.