ತಮ್ಮ ಸಿನಿಮಾವನ್ನು ತಪ್ಪದೇ ನೋಡಿ, ಮರೆಯಬೇಡಿ, ಮರೆತು ನಿರಾಸೆಯಾಗಬೇಡಿ ಎಂದು ಹೇಳುವುದರ ಜೊತೆಗೆ ಥಿಯೇಟರ್ ಗೆ ಜನರನ್ನು ಕರೆತರಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ ಸಿನಿಮಾ ಮಂದಿ. ಅದರಲ್ಲೂ ನಟರು ತಮ್ಮ ಪಾತ್ರ, ಕಥೆ, ಸನ್ನಿವೇಶ ಹೀಗೆ ಸಾಕಷ್ಟು ವಿಷಯಗಳನ್ನು ಪ್ರಚಾರ ಮಾಡಿ, ಜನರಿಗೆ ಸಿನಿಮಾ ನೋಡಿ ಎಂದು ಹೇಳುತ್ತಾರೆ.
ಆದರೆ, ದಕ್ಷಿಣದ ಹೆಸರಾಂತ ನಟ ಫಹಾದ್ ಫಾಸಿಲ್ (Fahad Faasil), ‘ಸಿನಿಮಾ ನೋಡುವುದೇ ಜನರ (Audience) ಉದ್ಯೋಗವಲ್ಲ. ಅವರಿಗೆ ಅವರದ್ದೇ ಆದ ಕೆಲಸವಿರುತ್ತದೆ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಫಾಸಿಲ್ ಆಡಿದ ಈ ಮಾತು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಫಹಾದ್ ಈ ರೀತಿ ಹೇಳಬಾರದಿತ್ತು ಎಂದು ಇಂಡಸ್ಟ್ರಿಯವರು ಪ್ರತಿಕ್ರಿಯಿಸಿದ್ದಾರೆ.
ಫಹಾದ್ ಹೀಗೆ ಮಾತನಾಡುವುದಕ್ಕೆ ಕಾರಣವಿದೆ. ಸಿನಿಮಾ ನೋಡಿದ ಮೇಲೆ, ಅದನ್ನು ಮನೆವರೆಗೂ ತಗೆದುಕೊಂಡು ಹೋಗಬಾರದು. ನಿಮಗೆ ನಿಮ್ಮದೇ ಆದ ಖಾಸಗಿ ಬದುಕಿದೆ. ಸಿನಿಮಾ ನೋಡಿದ ತಕ್ಷಣ ಅದರಿಂದ ಆಚೆ ಬಂದು ಬಿಡಬೇಕು. ಅಷ್ಟಕ್ಕೂ ಸಿನಿಮಾ ನೋಡೋದೇ ನಿಮ್ಮ ಉದ್ಯೋಗವಲ್ಲ ಎಂದಿದ್ದಾರೆ. ಈ ಮಾತನ್ನು ಬೇರೆ ರೀತಿಯಲ್ಲಿ ತಿರುಗಿಸಲಾಗುತ್ತಿದೆ.