ವಿಮಾನದೊಳಗೆ ಹೋಗುತ್ತೆಂದು ತಿಳಿದು ಲಗೇಜ್ ಬೆಲ್ಟ್ ಮೇಲೆ ನಿಂತ ಮಹಿಳೆ: ವಿಡಿಯೋ

Public TV
1 Min Read
airport women

ಅಂಕಾರಾ: ವಿಮಾನದೊಳಗೆ ಹೋಗುತ್ತೆ ಎಂದು ತಿಳಿದು ಮಹಿಳೆ ಲಗೇಜ್ ಬೆಲ್ಟ್ ಮೇಲೆ ನಿಲಲ್ಲು ಹೋಗಿ ಬಿದ್ದ ಘಟನೆ ಟರ್ಕೀಯ ಇಸ್ತಾನ್‍ಬುಲ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಲ್ಲದೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯದಲ್ಲಿ ಮಹಿಳೆ ಕೌಂಟರ್ ಬಳಿ ತನ್ನ ಲಗೇಜ್ ಪರಿಶೀಲಿಸುತ್ತಿರುತ್ತಾಳೆ. ಟರ್ಮಿನಲ್ ಬಳಿ ಹೋಗುವ ಬದಲು ಮಹಿಳೆ ಲಗೇಜ್ ಬೆಲ್ಟ್ ನಿಂತುಕೊಳ್ಳಲು ಪ್ರಯತ್ನಿಸುತ್ತಾಳೆ. ಈ ವೇಳೆ ಅಲ್ಲಿದ್ದ ಜನರು ಆಶ್ಚರ್ಯದಿಂದ ಮಹಿಳೆಯನ್ನೇ ನೋಡುತ್ತಾ ನಿಂತಿದ್ದಾರೆ.

airport women 1

ಲಗೇಜ್ ಬೆಲ್ಟ್ ಮೇಲೆ ನಿಂತಾಗ ಮಹಿಳೆಗೆ ಬ್ಯಾಲೆನ್ಸ್ ಸಿಗಲಿಲ್ಲ. ತಕ್ಷಣ ಆಕೆ ಕೆಳಗೆ ಬಿದ್ದಿದ್ದಾಳೆ. ಮಹಿಳೆ ಲಗೇಜ್ ಬೆಲ್ಟ್ ಮೇಲೆ ಬೀಳುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿ ಅದನ್ನು ಆಫ್ ಮಾಡಿ ಮಹಿಳೆಯ ಸಹಾಯಕ್ಕೆ ಮುಂದಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಾಕುತ್ತಿದ್ದಂತೆ ಸಾಕಷ್ಟು ಶೇರ್ ಆಗುತ್ತಿದೆ. ಅಲ್ಲದೆ ಮಹಿಳೆಯ ಲಗೇಜ್ ಬೆಲ್ಟ್ ಮೇಲೆ ನಿಲ್ಲುವ ಪ್ರಯತ್ನ ಕಂಡು ಜನರು ಆಕೆಯನ್ನು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *