ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹೋದರಿಯರು ಉತ್ತರಾಖಂಡ್ ದೇವಸ್ಥಾನವೊಂದರಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಇಬ್ಬರು ಸಹೋದರಿಯರು ಭೇಟಿಯಾದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Sister of PM Narendra Modi and Sister of Yogi Adityanath met with each other! pic.twitter.com/zMM0KtPtIE
— Keshavamurthy C (@Keshava05503084) August 4, 2023
ಉತ್ತರಾಖಂಡ್‍ನ ನೀಲಕಂಠ ಧಾಮ್‍ನಲ್ಲಿರುವ ಶಶಿ ದೇವಿ ದೇಗುಲದಲ್ಲಿ ಇಬ್ಬರು ಮುಖಾಮುಖಿಯಾಗಿದ್ದಾರೆ. ಇದನ್ನು ಕುಟುಂಬಸ್ಥರು ವೀಡಿಯೋ ಮಾಡಿದ್ದು, ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಅರೆಸ್ಟ್ – ಇಮ್ರಾನ್ ಖಾನ್‌ಗೆ 3 ವರ್ಷ ಜೈಲು, 5 ವರ್ಷ ರಾಜಕೀಯದಿಂದ ಬ್ಯಾನ್
ಶ್ರಾವಣ ಮಾಸದಲ್ಲಿ ಶಿವನ ದರ್ಶನ ಪಡೆಯಲು ಮೋದಿ ಮತ್ತು ಸಿಎಂ ಯೋಗಿ ಅವರ ಸಹೋದರಿಯರು ಉತ್ತರಾಖಂಡಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೊಠಾರಿಯ ದೇವಸ್ಥಾನದ ಬಳಿ ಇಬ್ಬರೂ ಭೇಟಿಯಾದರು. ವೀಡಿಯೋದಲ್ಲಿ ಇಬ್ಬರೂ ಪರಸ್ಪರ ಆಲಿಂಗನ ಮಡಿಕೊಂಡು ಖುಷಿಯ ನಗೆ ಬೀರಿರುವುದನ್ನು ಕಾಣಬಹುದಾಗಿದೆ. ಒಬ್ಬರಿಗೊಬ್ಬರು ಶುಭಾಶಯ ಕೋರಿದ ನಂತರ ಇಬ್ಬರೂ ಪರಸ್ಪರ ಕೈ ಹಿಡಿದು ದೇವಸ್ಥಾನದ ಕಡೆಗೆ ಸಾಗಿದರು.
ಪ್ರಧಾನಿ ಮೋದಿ ಅವರ ಸಹೋದರಿ ವಸಂತಿಬೆನ್ ತಮ್ಮ ಪತಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಇತ್ತ ಯೋಗಿ ಆದಿತ್ಯನಾಥ್ ಅವರು ನಾಲ್ವರು ಸಹೋದರರು ಮತ್ತು ಮೂವರು ಸಹೋದರಿಯರಲ್ಲಿ ಎರಡನೇಯವರಾಗಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]