ಮುಂಬೈ: ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಎಂದೇ ಹೆಸರು ಪಡೆದಿರುವ ಮಾಜಿ ನಾಯಕ ಎಂ.ಎಸ್ ಧೋನಿ ಲಂಕಾ ಆಟಗಾರರಿಗೆ ಕೋಚ್ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೌದು, ಧೋನಿ ತಮ್ಮ ಕೂಲ್ ವ್ಯಕ್ತಿತ್ವದ ಮೂಲಕ ವಿಶ್ವ ಕ್ರಿಕೆಟ್ ನ ಹಲವು ಯುವ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೊಂದು ದೊರೆತಿದ್ದು, ಭಾನುವಾರ ಮುಂಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧ ಅಂತಿಮ ಟಿ20 ಪಂದ್ಯದ ಮುಕ್ತಾಯದ ಬಳಿಕ ಲಂಕಾ ಆಟಗಾರರಿಗೆ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
Advertisement
Advertisement
2017ರಲ್ಲಿ ಭಾರತ ಶ್ರೀಲಂಕಾ ಪ್ರವಾಸ ಮಾಡಿದ್ದರೆ, ಶ್ರೀಲಂಕಾ ಭಾರತ ಪ್ರವಾಸ ಮಾಡಿತ್ತು. ಎರಡು ತಂಡಗಳ ನಡುವಿನ ಟೆಸ್ಟ್, ಏಕದಿನ, ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿತ್ತು. ಭಾನುವಾರ ನಡೆದ ಕೊನೆಯ ಪಂದ್ಯದಲ್ಲೂ ಶ್ರೀಲಂಕಾ ಸೋತು ಸುಣ್ಣವಾಗಿತ್ತು. ಈ ವೇಳೆ ಲಂಕಾ ಆಟಗಾರರ ಮನಸ್ಥಿತಿ ಕಂಡ ಧೋನಿ ಅವರ ಬಳಿಗೆ ತೆರಳಿ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Advertisement
ಲಂಕಾದ ಉಪುಲ್ ತರಂಗ, ಅಕಿಲ ಧನಂಜಯ ಮತ್ತು ಸಮರ ವಿಕ್ರಮ ಅವರು ಧೋನಿ ನೀಡುತ್ತಿರುವ ಸಲಹೆಗಳನ್ನು ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ ಧೋನಿ ಅವರ ಈ ವ್ಯಕ್ತಿತ್ವವನ್ನು ಹಲವು ಕ್ರಿಕೆಟ್ ಅಭಿಮಾನಿಗಳ ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಧೋನಿ, 2019ರ ವಿಶ್ವಕಪ್ ಆಡ್ತಾರಾ: ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದು ಹೀಗೆ
Advertisement
ಧೋನಿ ಅವರು ಲಂಕಾ ವಿರುದ್ಧ ಏಕದಿನ ಸರಣಿಯ ವೇಳೆ ಹಲವರ ಟೀಕೆಗೆ ಗುರಿಯಾಗಿದ್ದರು. ನಂತರದ ಟಿ20 ಸರಣಿಯಲ್ಲಿ ಧೋನಿ ಅವರ ಬ್ಯಾಟಿಂಗ್ ನಲ್ಲಿ ಮುಂಬಡ್ತಿ ನೀಡಲಾಗಿತ್ತು. ಈ ವೇಳೆ ಉತ್ತಮ ಪ್ರದರ್ಶನ ನೀಡಿ, ತಮ್ಮ ವಿರುದ್ಧ ಟೀಕೆ ಮಾಡುತ್ತಿದವರ ಬಾಯಿ ಮುಚ್ಚಿಸಿದ್ದಾರೆ. ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಹಾಗೂ ಕೋಚ್ ರವಿ ಶಾಸ್ತ್ರಿ ಅವರು ಸಹ ಧೋನಿ ಪರ ಬ್ಯಾಟ್ ಬೀಸಿದ್ದು, 2019 ರ ವಿಶ್ವಕಪ್ ನಲ್ಲಿ ಧೋನಿ ಆಡುವುದನ್ನು ಖಚಿತ ಪಡಿಸಿದ್ದಾರೆ.
https://twitter.com/VideosShots/status/945136128247640064