ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ವಿರಾಟ್ ಕೊಹ್ಲಿ

Public TV
1 Min Read
virat kohli

ಬೆಂಗಳೂರು: 2018 ರ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ತಂಡ ನಿರೀಕ್ಷಿತ ಫಲಿತಾಂಶ ನೀಡಿಲ್ಲ, ಈ ಕುರಿತು ಅಭಿಮಾನಿಗಳಲ್ಲಿ ನಾಯಕ ಕೊಹ್ಲಿ ಕ್ಷಮೆ ಕೇಳಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ವಿಡಿಯೋ ಫೋಸ್ಟ್ ಮಾಡಿರುವ ಕೊಹ್ಲಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಪ್ರತಿ ಪಂದ್ಯದಲ್ಲಿ ಗೆಲುವು ಪಡೆಯುವುದು ಅಗತ್ಯ ಇಲ್ಲವಾದರೆ ತಕ್ಕ ಪಾಠ ಕಲಿಯಬೇಕಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಇದು ಸಾಮಾನ್ಯ. ಆದರೆ ಈ ಬಾರಿಯ ಟೂರ್ನಿಯಲ್ಲಿ ತಂಡ ನೀಡಿದ ಪ್ರದರ್ಶನ ಅಭಿಮಾನಿಗಳಿಗೆ ನಿರಾಸೆ ತಂದಿದೆ. ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮುಂದಿನ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ಆಶ್ವಾಸನೆ ನೀಡಿರುವ ಕೊಹ್ಲಿ, ತಂಡದ ಪ್ರತಿಯೊಬ್ಬ ಆಟಗಾರರು ಸಹ ಮುಂದಿನ ಟೂರ್ನಿಗೆ ಮತ್ತಷ್ಟು ತಯಾರಿ ನಡೆಸುತ್ತಾರೆ. ಮುಂದಿನ ಬಾರಿಯೂ ನಮ್ಮನ್ನು ಬೆಂಬಲಿಸಿ ಎಂದು ಕೇಳಿಕೊಂಡಿದ್ದಾರೆ.

ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸದೆ ಹೊರ ಬಿದ್ದ ಆರ್ ಸಿಬಿ 14 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿ 12 ಅಂಕಗಳೊಂದಿಗೆ 6 ಸ್ಥಾನದೊಂದಿಗೆ ನಿರ್ಗಮಿಸಿತು. ಆರ್ ಸಿಬಿ ತಂಡ ಕೊಹ್ಲಿ, ಎಬಿ ಡಿಲಿಯರ್ಸ್ ರಂತಹ ಸ್ಟಾರ್ ಆಟಗಾರನ್ನು ಹೊಂದಿದ್ದರೂ ಉತ್ತಮ ಪ್ಲೇಯಿಂಗ್ ಇಲೆವೆನ್ ರೂಪಿಸಲು ವಿಫಲವಾಗಿತ್ತು. ಇದುವರೆಗಿನ 11 ಟೂರ್ನಿಗಳಲ್ಲಿಯೂ ಪ್ರಶಸ್ತಿ ಗಳಿಸಲು ವಿಫಲವಾದ ಆರ್ ಸಿಬಿ ಮೂರು ಬಾರಿ ಫೈನಲ್ ಪ್ರವೇಶಿಸಿದೆ. 2009, 2011, 2016 ರ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ಆರ್ ಸಿಬಿ ಕ್ರಮವಾಗಿ ಡೆಕ್ಕನ್ ಚಾಜರ್ರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲುಂಡಿತ್ತು. 2011 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುವ ಮೂಲಕ ರನ್ನರ್ ಆಪ್ ಆಗಿತ್ತು.

ಸದ್ಯ ಆರ್ ಸಿಬಿ ಪರ ಹೆಚ್ಚಿನ ಟೂರ್ನಿಗಳಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕಾ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಸಹ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

kohli abd

Share This Article
Leave a Comment

Leave a Reply

Your email address will not be published. Required fields are marked *