ಮಿಲನ್: ರನ್ ಮೆಷಿನ್ ಎಂದೇ ಖ್ಯಾತರಾಗಿರೋ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಸಿರುವ ಮೂಲಕ ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.
ಇಟಲಿಯ ದ್ರಾಕ್ಷಿ ತೋಟದ ಮಧ್ಯೆ ಮದುವೆಯಾಗುವ ಮೂಲಕ ಇದೀಗ ವಿರುಷ್ಕಾ ಸತಿ-ಪತಿಗಳಾಗಿದ್ದಾರೆ. ಕೊಹ್ಲಿ ಬ್ಯಾಟಿಂಗ್, ಡ್ಯಾನ್ಸಿಂಗ್ ಹಾಗೂ ಜೋಕ್ಸ್ ಮಾಡುತ್ತಿರುವುದನ್ನು ನೋಡಿದ್ದೀರಿ ಹಾಗೂ ಕೇಳಿದ್ದೀರಿ. ಇದೀಗ ತನ್ನದೇ ಮದುವೆ ಸಮಾರಂಭದಲ್ಲಿ ಕೊಹ್ಲಿ ಮುದ್ದಿನ ಮಡದಿಗಾಗಿ ಹಾಡೊಂದನ್ನು ಹಾಡಿದ್ದು, ಅನುಷ್ಕಾ ಅದನ್ನ ಕೇಳಿ ಕರಗಿದ್ದಾರೆ.
ಹೌದು. ವಿರಾಟ್ ಕೊಹ್ಲಿ ಅವರು ಹಿಂದಿಯ ಮಿಸ್ಟರ್ ಎಕ್ಸ್ ಇನ್ ಬಾಂಬೇ ಸಿನಿಮಾದ `ಮೆರೆ ಮೆಹಬೂಬ ಖಯಾಮತ್ ಹೋಗಿ’ ಹಾಡನ್ನು ಹಾಡಿ ನೆರೆದವರು ವಾಹ್ ಎನ್ನುವಂತೆ ಮಾಡಿದ್ದಾರೆ. ಪತಿಯ ಹಾಡನ್ನು ಕೇಳಿದ ಪತ್ನಿ ಅನುಷ್ಕಾ ಖುಷಿಯಿಂದ ಚಪ್ಪಾಳೆ ಹೊಡೆದಿದ್ದಾರೆ. ಕೊಹ್ಲಿ ಹಾಡುತ್ತಿರೋ ವಿಡಿಯೋವನ್ನ ಟ್ವಟ್ಟರ್ ನಲ್ಲಿ ಸಾಕ್ಷಿ ಎಂಬ ಟ್ವಿಟ್ಟರ್ ಖಾತೆದಾರರು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಸೇರಿ ತನ್ನೆಲ್ಲಾ ಗೆಳೆಯರ ಮಧ್ಯೆ ಕೊಹ್ಲಿ ವೇದಿಕೆಯಲ್ಲಿ ಕುಳಿತು ಮೈಕ್ ಹಿಡಿದು ಹಾಡಿನಲ್ಲಿ ತಲ್ಲೀನರಾಗಿರುವುದನ್ನು ನಾವು ಕಾಣಬಹುದು. ಅಲ್ಲದೇ ಈ ಹಾಡಿನ ಮೂಲಕ ಕೊಹ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದು. ಕೊಹ್ಲಿ ಬೇಕಂತಲೇ ಈ ರೊಮ್ಯಾಂಟಿಕ್ ಹಾಡನ್ನು ಸೆಲೆಕ್ಟ್ ಮಾಡಿ ಹಾಡಿದ್ದಾರೆ ಎಂದು ವರದಿಯಾಗಿದೆ.
https://twitter.com/kohlisflickshot/status/940462442546544640
https://www.youtube.com/watch?v=gHvF38xCsiY