Tuesday, 17th July 2018

ವಿಡಿಯೋ: ಆರತಕ್ಷತೆಯಲ್ಲಿ ಶಾರೂಖ್ ಜೊತೆ ಕುಣಿದು ಕುಪ್ಪಳಿಸಿದ ವಿರುಷ್ಕಾ

ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಡಿಸೆಂಬರ್ 11ರಂದು ಯಾರಿಗೂ ತಿಳಿಸದೆ ಇಟಲಿಯಲ್ಲಿ ಮದುವೆಯಾಗಿದ್ದರು. ನಂತರ ಈ ಜೋಡಿ ಸಂಬಂಧಿಕರಿಗಾಗಿ ನವದೆಹಲಿಯಲ್ಲಿ ಆರತಕ್ಷತೆ ಮಾಡಿಕೊಂಡು, ಮಂಗಳವಾರ ಕ್ರಿಕೆಟ್ ಹಾಗೂ ಚಿತ್ರರಂಗದ ಸ್ನೇಹಿತರಿಗಾಗಿ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನೆರವೇರಿದೆ. ಈ ವೇಳೆ ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಜೊತೆ ‘ಚಲೇ ಚೈಯ್ಯ ಚೈಯ್ಯ’ ಹಾಗೂ ‘ಪ್ರೆಟ್ಟಿ ವುಮೆನ್’ ಹಾಡಿಗೆ ವಿರಾಟ್ ಹಾಗೂ ಅನುಷ್ಕಾ ಕುಣಿದು ಕುಪ್ಪಳಿಸಿದ್ದಾರೆ.

ಮಂಗಳವಾರ ಸಂಜೆ ಮುಂಬೈನ ಸೆಂಟ್ ರೀಜಿಸ್ ನಲ್ಲಿ ವಿರುಷ್ಕಾ ಜೋಡಿ ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಲಾರಾ ದತ್ತ, ಶಾರೂಖ್ ಖಾನ್ ಹಾಗೂ ಅವರ ಕುಟುಂಬದವರು, ಎ.ಆರ್ ರೆಹಮಾನ್, ಬೋಮನ್ ಇರಾನಿ, ರೇಖಾ, ಮಾಧುರಿ ದೀಕ್ಷಿತ್, ಶ್ರೀದೇವಿ, ಸಿದಾರ್ಥ್ ಮಲ್ಹೋತ್ರ, ರಣ್‍ಬೀರ್ ಕಪೂರ್, ವರುಣ್ ಧವನ್, ಕತ್ರಿನಾ ಕೈಫ್, ವಾಣಿ ಕಪೂರ್, ಪ್ರಿಯಾಂಕಾ ಚೋಪ್ರಾ, ಕಂಗನಾ ರಣೌತ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಆಗಮಿಸಿ ನವಜೋಡಿಗೆ ಶುಭಹಾರೈಸಿದ್ರು.

ಇನ್ನೂ ಕ್ರೀಡಾ ತಾರೆಗಳಾದ ಎಂ.ಎಸ್ ಧೋನಿ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಸುನೀಲ್ ಗವಾಸ್ಕರ್, ಸೈನಾ ನೆಹ್ವಾಲ್, ಉಮೇಶ್ ಯಾದವ್, ಜಸ್‍ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜ, ಸೌರವ್ ಗಂಗೂಲಿ, ಅಶೀಶ್ ನೆಹೆರಾ ಉಪಸ್ಥಿತರಿದ್ದರು.

ಖ್ಯಾತ ವಸ್ತ್ರವಿನ್ಯಾಸಕ ಸಭ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಲೆಹೆಂಗಾ ಧರಿಸಿ ಅನುಷ್ಕಾ ಮಿಂಚಿದ್ರು. ಅನುಷ್ಕಾ ಸುಂದರವಾದ ಕಸೂತಿಯುಳ್ಳ ಸ್ಮೊಕಿ ಗ್ರೇ ಲೆಂಹೆಂಗಾ ತೊಟ್ಟು, ರೋಝ್ ಕಟ್ ಡೈಮಂಡ್, ಸೋಲಿಟೈರ್ಸ್, ಬ್ರಿಯೋಲೆಟ್ಸ್ ಮತ್ತು ಜಪಾನೀಸ್ ಬರೋಕ್ ಪರ್ಲ್‍ಗಳಿದ್ದ ನೆಕ್ಲೆಸ್ ಮತ್ತು ಸ್ಟಡ್ ಇಯರಿಂಗ್ಸ್ ಧರಿಸಿದ್ದರು. ವಿರಾಟ್ ಇಂಡಿಗೋ ವೆಲ್‍ವೆಟ್ ಬಂದ್ಗಾಲ ಹಾಗೂ ಸಿಲ್ಕ್ ಪ್ಯಾಂಟ್ ಧರಿಸಿದ್ದರು.

ಡಿಸೆಂಬರ್ 11 ರಂದು ಇಟಲಿಯ ಟಸ್ಕನಿ ನಗರದ ‘ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ಪಂಜಾಬಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಗೆಳೆಯರು ಮಾತ್ರ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *