ಭೋಪಾಲ್: ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಮಧ್ಯಪ್ರದೇಶದ ಡಿಂಡೋರಿ ಜಿಲ್ಲೆಯ ದೇವಾಲ್ಪುರ ಗ್ರಾಮದಲ್ಲಿ ನಡೆದಿದೆ.
ದೇವಾಲ್ಪುರ ಗ್ರಾಮದ ನಿವಾಸಿಗಳಾದ ರಾಹುಲ್ ಮತ್ತು ಸುರೇಂದ್ರ ಎಂಬುವವರು ಬಾವಿಗೆ ಹಾರಿ ಬಾಲಕಿಯನ್ನು ಕಾಪಾಡಿದ್ದಾರೆ. ಬಾಲಕಿ ತನ್ನ ಅಮ್ಮ ಮತ್ತು ಚಿಕ್ಕಮ್ಮನ ಜೊತೆ ಸ್ನಾನ ಮಾಡಲು ನೀರನ್ನು ತೆಗೆದುಕೊಂಡು ಬರಲು ಬಾವಿಗೆ ಬಂದಿದ್ದಳು. ಬಾವಿಯಿಂದ ನೀರು ಎಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ. ತಕ್ಷಣ ತಾಯಿ ಕೂಗಿಕೊಂಡಿದ್ದು, ಅಲ್ಲೇ ಸಮೀಪದಲ್ಲಿದ್ದ ರಾಹುಲ್ ಹಾಗೂ ಸುರೇಂದ್ರ ತಮ್ಮ ಜೀವದ ಹಂಗು ತೊರೆದು ಬಾಲಕಿಯನ್ನು ರಕ್ಷಣೆ ಮಾಡಲು ಬಾವಿಗೆ ಹಾರಿದ್ದಾರೆ.
ನಂತರ ಗ್ರಾಮಸ್ಥರು ಮೇಲಿಂದ ಒಂದು ಹಗ್ಗಕ್ಕೆ ಬಕೆಟ್ ಕಟ್ಟಿ ಕೆಳಗೆ ಬಿಟ್ಟಿದ್ದಾರೆ. ಬಾವಿ ಒಳಗೆ ಇದ್ದ ಇಬ್ಬರು ಆ ಬಕೆಟ್‍ನಲ್ಲಿ ಬಾಲಕಿಯನ್ನು ಕೂರಿಸಿದ್ದಾರೆ. ನಂತರ ಬಾವಿಯ ಮೇಲಿದ್ದವರು ನಿಧಾನವಾಗಿ ಹಗ್ಗವನ್ನು ಎಳೆದುಕೊಂಡು ಬಾಲಕಿಯನ್ನು ಮೇಲೆಕ್ಕೆತ್ತಿದ್ದಾರೆ. ಈ ಎಲ್ಲಾ ಸಾಹಸ ದೃಶ್ಯಗಳು ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Three-year-old girl fell into a well in Madhya Pradesh's Dindori yesterday, rescued safely by two people. pic.twitter.com/wbwoPN5YVU
— ANI (@ANI) November 10, 2017