ನವದೆಹಲಿ: ಹಿಂದಿ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ವಿವಾದಿತ ಓಂ ಸ್ವಾಮಿಯನ್ನು ಸಾರ್ವಜನಿಕವಾಗಿ ಥಳಿಸಲಾಗಿದೆ. ಓಂ ಸ್ವಾಮಿಗೆ ಸಾರ್ವಜನಿಕರು ಧರ್ಮದೇಟು ಕೊಡುತ್ತಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಮಾಧ್ಯಮಗಳ ವರದಿ ಪ್ರಕಾರ, ಇತ್ತೀಚೆಗೆ ದೆಹಲಿಯ ವಿಕಾಸ್ ನಗರದಲ್ಲಿ ನಾಥುರಾಮ್ ಗೋಡ್ಸೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಓಂ ಸ್ವಾಮಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅಂತೆಯೇ ಕಾರ್ಯಕ್ರಮಕ್ಕೆ ಭೇಟಿ ನೀಡಿ ಓಂ ಸ್ವಾಮಿ ಭಾಷಣ ಮಾಡಲು ವೇದಿಕೆ ಹತ್ತುತ್ತಿದ್ದಂತೆಯೇ ಸಾರ್ವಜನಿಕರು ಸುತ್ತುವರಿದು ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ.
Advertisement
ಯಾರು ಯಾಕೆ ಹೊಡೆಯುತ್ತಿದ್ದಾರೆ ಎಂದು ಅರಿವಾಗದೆ ಕಕ್ಕಾಬಿಕ್ಕಿಯಾಗುತ್ತಿದ್ದಂತೆಯೇ ಓಂ ಸ್ವಾಮಿ, ತಲೆಯ ಮೇಲಿದ್ದ ವಿಗ್ ಕಳಚಿ ಬಿದ್ದಿದೆ. ಈ ವೇಳೆ ಓಂ ಸ್ವಾಮಿಯ ನಿಜ ಬಣ್ಣ ಸಾರ್ವಜನಿಕರಿಗೆ ದರ್ಶನವಾಗಿದೆ.
Advertisement
Advertisement
ಓಂ ಸ್ವಾಮಿಗೆ ಧರ್ಮದೇಟು ಬಿದ್ದಿರೋದು ಇದು ಮೋದಲೇನಲ್ಲ. ಈ ಹಿಂದೆ ಸಂದರ್ಶನವೊಂದರ ವೇಳೆಯೂ ಈತನಿಗೆ ಗೂಸಾ ಬಿದ್ದಿದೆ. ಟಿವಿ ಶೋವೊಂದರಲ್ಲಿ ಕೂಡಾ ಓಂ ಸ್ವಾಮಿ ಅವರು ಮಹಿಳೆಯೊಬ್ಬರ ಜತೆ ಈತ ಕೈ ಕೈ ಮಿಲಾಯಿಸಿದ್ದನು. ಬಿಗ್ ಬಾಸ್ ಮನೆಯಲ್ಲಿದ್ದಾಗ ಧರ್ಮ, ಮಹಿಳೆಯರ ಗೌರವದ ಬಗ್ಗೆ ಮಾತನಾಡುತ್ತಿದ್ದ ಓಂ ಸ್ವಾಮಿ ಇತ್ತೀಚೆಗೆ ಅರೆ ನಗ್ನ ಯುವತಿ ಜತೆ ಯೋಗ, ಧ್ಯಾನ ಎಂದೆಲ್ಲ ವಿಡಿಯೋ ಮಾಡಿ ಇಂಟರ್ನೆಟ್ ಗೆ ಬಿಟ್ಟಿದ್ದು ಸಾರ್ವಜನಿಕರನ್ನು ಕೆರಳಿಸುವಂತೆ ಮಾಡಿದೆ.