ಕೊಲಂಬೋ: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಬ್ಲಾಸ್ಟ್ ದುರಂತದಲ್ಲಿ ಕನ್ನಡಿಗರೊಬ್ಬರು ಸಾವಿನ ದವಡೆಯಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.
ನಟಿ ಸಂಜನಾ ಅವರ ಸಹೋದರ ರಾಹುಲ್ ಸ್ಫೋಟ ಸಂಭವಿಸಿದ ಕಿಂಗ್ಸ್‍ಬ್ಯುರಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಸ್ಫೋಟ ಸಂಭವಿಸಿದ ಕೂಡಲೇ ರಾಹುಲ್ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಕುರಿತು ಸ್ವತಃ ರಾಹುಲ್ ಅವರೇ ಪಬ್ಲಿಕ್ ಟಿವಿ ಜೊತೆ ತನಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.
Advertisement
Advertisement
ರಾಹುಲ್ ಹೇಳಿದ್ದೇನು?
ಕಿಂಗ್ಸ್‍ಬ್ಯುರಿನಲ್ಲಿ ನಾನು ಮಲಗಿದ್ದ ಸಂದರ್ಭದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಅಲ್ಲದೆ ಹಲವರು ಗಾಯಗೊಂಡಿದ್ದಾರೆ. ಬಾಂಬ್ ಬ್ಲಾಸ್ಟ್ ಆದ ಸ್ಥಳದಲ್ಲಿ ರಕ್ತದೋಕುಳಿ ನೋಡಿ ಶಾಕ್ ಆಗಿದೆ. 6- 7 ವರ್ಷಗಳಿಂದ ಕೊಲಂಬೋಗೆ ಬರುತ್ತಿದ್ದೇನೆ. ಆದ್ರೆ ಮೊದಲ ಬಾರಿಗೆ ಇಂತಹ ಒಂದು ಘಟನೆ ನಡೆದಿದೆ. ಕೆಲವರು ಇದು ಆತ್ಮಾಹುತಿ ದಾಳಿ ಎಂದು ಕೆಲವರು ಹೇಳುತ್ತಿದ್ದಾರೆ. ಆದ್ರೆ ನಿಜವಾಗಿ ಏನೂ ಎಂದು ಗೊತ್ತಿಲ್ಲ. ಇಲ್ಲಿ ತುಂಬಾ ಭಯವಾಗುತ್ತಿದೆ. ಎಲ್ಲಿ ಉಳಿದುಕೊಳ್ಳುವುದು ಎಂದು ಗೊತ್ತಾಗುತ್ತಿಲ್ಲ. ಯಾಕಂದ್ರೆ ಫೈವ್ ಸ್ಟಾರ್ ಹೋಟೆಲಿನಲ್ಲಿ ಬ್ಲಾಸ್ಟ್ ಮಾಡಿದ್ದಾರೆ ಅಂದ್ರೆ ಹೇಗೆ ಭದ್ರತೆ ಒದಗಿಸುತ್ತಾರೆ ಎಂದು ಗೊತ್ತಿಲ್ಲ. ನೋಡೋಣ ಹೇಗಾದ್ರು ಮಾಡಿ ಭಾರತಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಸ್ಫೋಟಕ್ಕೆ 160 ಬಲಿ – ಸ್ಫೋಟಕ್ಕೆ ಮೇಲ್ಚಾವಣಿ ಹಾರಿತು, ಎಲ್ಲಿ ನೋಡಿದರಲ್ಲಿ ರಕ್ತ: ವಿಡಿಯೋ
Advertisement
AFP news agency: Death toll in Srilanka multiple blasts rises to 52. (Visuals from a blast site in Colombo) pic.twitter.com/qYiWxYHjvh
— ANI (@ANI) April 21, 2019
Advertisement
ಆಗಿದ್ದೇನು?
ಈಸ್ಟರ್ ಹಬ್ಬದ ದಿನವೇ ಶ್ರೀಲಂಕಾದಲ್ಲಿ ಮಾರಣಹೋಮ ನಡೆದಿದೆ. ಕೊಲಂಬೋದಲ್ಲಿ ಸೀರಿಯಲ್ ಬ್ಲಾಸ್ಟ್ ಸಂಭವಿಸಿದ್ದು, ಐದು ಚರ್ಚ್, ಮೂರು ಫೈವ್‍ಸ್ಟಾರ್ ಹೊಟೆಲ್‍ಗಳಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಇದುವರೆಗೂ 160ಕ್ಕೂ ಹೆಚ್ಚು ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಬೆಳಗ್ಗೆ 8.45ಕ್ಕೆ ಕೊಲಂಬೋ, ನೆಗಂಬೋ ಮತ್ತು ಬಟ್ಟಿಕಲೋವಾದಲ್ಲಿ ಚರ್ಚ್‍ಗಳು ಮತ್ತು ಮೂರು ಫೈವ್‍ಸ್ಟಾರ್ ಹೊಟೇಲ್‍ಗಳಲ್ಲಿ ಆತ್ಮಾಹುತಿ ಸ್ಫೋಟಗಳು ನಡೆದಿದೆ.
https://www.youtube.com/watch?v=S6cNQz5DtY0
https://www.youtube.com/watch?time_continue=122&v=toEBKqvDA3c