ಲಂಡನ್: ಮನುಷ್ಯರ ಹಲ್ಲಿಗೆ ರೂಟ್ ಕೆನಾಲ್ ಮಾಡೋದನ್ನು ಕೇಳಿದ್ದೀರಿ ಅಥವಾ ನಿಮ್ಮ ಹಲ್ಲಿಗೂ ರೂಟ್ ಕೆನಲ್ ಮಾಡಿಸಿಕೊಂಡಿರಬಹುದು. ಆದ್ರೆ ಇದೀಗ ಪ್ರಾಣಿಗಳ ಹಲ್ಲು ಅದರಲ್ಲೂ ಹುಲಿಯ ಹಲ್ಲಿಗೆ ರೂಟ್ ಕೆನಲ್ ಮಾಡಿ ಸಕ್ಸಸ್ ಆಗಿದ್ದಾರೆಂದರೆ ನೀವು ನಂಬಲೇಬೇಕು.
ಹೌದು. ಲಂಡನ್ ನ ಪೈಗ್‍ಂಟನ್ ಎಂಬ ಪ್ರಾಣಿ ಸಂಗ್ರಹಾಲಯದಲ್ಲಿ ಈ ಆಶ್ಚರ್ಯಕರ ಘಟನೆ ನಡೆದಿದೆ. ಸದ್ಯ ಹುಲಿ ಹಲ್ಲಿಗೆ ರೂಟ್ ಕೆನಲ್ ಮಾಡುವ ಧೈರ್ಯವಂತ ವೈದ್ಯರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
2 ಮೀಟರ್ ಉದ್ದ ಇರುವ 11 ವರ್ಷದ ಫಾಬಿ ಹಲ್ಲಿಗೆ ಈ ರೂಟ್ ಕೆನಲ್ ಮಾಡಲಾಗಿದೆ. ಇದರ ಕೋರೆ ಹಲ್ಲುಗಳು 8 ಸೆಂಟಿಮೀಟರ್ ಉದ್ದ ಇತ್ತು. ವೈದ್ಯ ಮಾಥ್ಯೂ ಆಕ್ಸ್ ಫರ್ಡ್ ಅವರು ಹುಲಿಗೆ ಅನಸ್ತೇಷಿಯಾ ಕೊಟ್ಟು ರೂಟ್ ಕೆನಲ್ ಮಾಡಿ ಸಕ್ಸಸ್ ಆಗಿದ್ದಾರೆ. ಫಾಬಿ ಝೂನಲ್ಲಿರುವ ಹುಲಿಗಳಿಂದ ವಯಸ್ಕನಾಗಿದ್ದನು. ಹೀಗಾಗಿ ಹುಲಿಗಳ ಸಂತಾನವನ್ನು ಉಳಿಸಿಕೊಳ್ಳುವ ಬಗ್ಗೆ ಅಲ್ಲಿನ ಸಿಬ್ಬಂದಿ ಹೆಚ್ಚಿನ ಗಮನಹರಿಸುತ್ತಿದ್ದರು.
ವೈದ್ಯರು ಈ ಮೊದಲು ಲಂಡನ್ ನಲ್ಲಿ ಹಲವು ಜಾತಿಯ ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ್ದರು. ಹೀಗಾಗಿ ಪ್ರಾಣಿಗಳ ಬಗ್ಗೆ ಅವರಿಗೆ ಸಾಕಷ್ಟು ಅನುಭವವನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಓರ್ವ ಗಾರ್ಡ್ ಮತ್ತು ಬಂದೂಕುದಾರನೊಂದಿಗೆ ಹುಲಿಯ ಹಲ್ಲಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಯಾಕಂದ್ರೆ ಅನಸ್ತೇಷಿಯಾದ ಪವರ್ ಹೋದ್ರೆ ಹುಲಿ ಎಚ್ಚೆತ್ತುಕೊಂಡಲ್ಲಿ ಪ್ರಾಣ ಹಾನಿ ಮಾಡಬಹುದೆಂಬ ಭೀತಿಯಿಂದ ಚಿಕಿತ್ಸೆ ವೇಳೆ ನೋಡಿಕೊಳ್ಳಲು ವೈದ್ಯರು ಇಬ್ಬರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕರೆತಂದಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಜೀವನದಲ್ಲಿ ಈ ಮೃಗಾಲಯದ ಪಶುವೈದ್ಯ ಇಲಾಖೆಯಲ್ಲಿ ಕೆಲಸ ಮಾಡುವುದು ತುಂಬಾನೇ ಆಸಕ್ತಿದಾಯಕವಾಗಿರುತ್ತದೆ. ಹುಲಿಯ ಎರಡೂ ಹಲ್ಲಿಗೆ ರೂಟ್ ಕೆನಾಲ್ ಮಾಡೋದು ತುಂಬಾ ಸವಾಲಾಗಿತ್ತು. ಆದ್ರೆ ಝೂನಲ್ಲಿರುವ ಸಿಬ್ಬಂದಿಯ ಉತ್ಸಾಹ, ಹೊರಗಿನ ತಜ್ಞರಿಂದಾಗಿ ಈ ಹಲ್ಲಿನ ಚಿಕಿತ್ಸೆ ತುಂಬಾ ನಾಜೂಕಾಗಿ ನಡೆಯಿತು ಎಂದು ಪ್ರಾಣಿ ಸಂಗ್ರಹಾಲಯದ ವೈದ್ಯ ಜೊ ರೇನಾರ್ಡ್ ತಿಳಿಸಿದ್ದಾರೆ.
ರೂಟ್ ಕೆನಲ್ ನಡೆಸುವಾಗ ಮಲಗಿದ್ದ ಫಾಬಿಯ ಆರೋಗ್ಯದ ಬಗ್ಗೆ ಜೂ ಕೀಪರ್ಸ್ ಚೆನ್ನಾಗಿಯೇ ಆತನ ಆರೋಗ್ಯವನ್ನು ಆಗಾಗ್ಗೆ ಗಮನಿಸಿಕೊಳ್ಳುತ್ತಿದ್ದರು ಎಂದು ತಜ್ಞರೊಬ್ಬರು ತಿಳಿಸಿದ್ದಾರೆ. ಚಿಕಿತ್ಸೆಯ ವೇಳೆ ಬಬಲ್ ವ್ರಾಪನ್ನು ಪಾದಗಳಿಗೆ ಸುತ್ತುವ ಮೂಲಕ ಬಹಳ ಜಾಗರೂಕತೆಯಿಂದ ರೂಟ್ ಕೆನಲ್ ಮಾಡಿದ್ದಾರೆ.
https://www.youtube.com/watch?time_continue=1&v=prQkEXpf4WY
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv